ಸುಲ್ತಾನ್ ಬತೇರಿಯಲ್ಲಿ ಅಮರ್

ಡಿಸೆಂಬರ್‌ನಲ್ಲಿ ತೆರೆಗೆ ಸಾಧ್ಯತೆ

ರೆಬೆಲ್‌ಸ್ಟಾರ್ ಅಂಬರೀಷ್ ಅವರ ಪುತ್ರ ಜೂನಿಯರ್ ರೆಬೆಲ್‌ಸ್ಟಾರ್ ಅಭಿಷೇಕ್ ನಟಿಸುತ್ತಿರುವ ’ಅಮರ್ ಚಿತ್ರ ಸದ್ದು ಗದ್ದಲವಿಲ್ಲದೆ ವಿವಿಧೆಡೆ ಚಿತ್ರೀಕರಣದಲ್ಲಿ ಭಾಗಿಯಾಗಿದೆ.

lahari-photos-25-08-sandesh’ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ಬಳಿಕ ಕೇರಳದ ವೈಯ್ನಾಡಿನ ಸುಲ್ತಾನ್ ಬತೇರಿ ಬೆಟ್ಟದಲ್ಲಿ ಚಿತ್ರವನ್ನು ಚಿತ್ರೀಕರಣ ಮಾಡಿದ ಹೆಗ್ಗಳಿಕೆ ನಿರ್ಮಾಪಕ ಸಂದೇಶ್ ಮತ್ತವರ ತಂಡದ್ದು. ಇದಲ್ಲದೆ ಕೊಡಗಿನ ದುರ್ಗಮ ಸ್ಥಳಗಳೂ ಸೇರಿದಂತೆ ರಾಜ್ಯದ ವಿವಿಧ ಪ್ರಕೃತಿ ಸೌಂದರ್ಯದ ಸ್ಥಳಗಳಲ್ಲಿ ಚಿತ್ರವನ್ನು ಸೆರೆಯಿಡಿದಿದೆ ಚಿತ್ರತಂಡ.

ಅಭಿಷೇಕ್ ಚಿತ್ರರಂಗಕ್ಕೆ ಪ್ರವೇಶಿಸುತ್ತಿರುವ ಅಮರ್ ಚಿತ್ರ ಸದ್ದಿಲ್ಲದೆ ಚಿತ್ರೀಕರಣದಲ್ಲಿ ನಿರತವಾಗಿದ್ದು, ಈಗಾಗಲೇ ಐವತ್ತು ದಿನ ಚಿತ್ರೀಕರಣ ಮುಗಿಸಿದ್ದು ಇನ್ನೂ ಮುವತ್ತೇದು ದಿನ ಬಾಕಿ ಇದೆ ಎಲ್ಲಾ ಅಂದುಕೊಂಡಂತೆ ಆದರೆ ಈ ಡಿಸೆಂಬರ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆ ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಗಿದೆ.

ಈಗಾಗಲೇ ೫೦ ದಿನಗಳ ಕಾಲ ಕೊಯಮತ್ತೂರು,ಮಡಿಕೇರಿ,ಮಂಗಳೂರು ಸುಲ್ತಾನ್ ಬತೇರಿಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಸದ್ಯ ಬೆಂಗಳೂರಿನ ಹಾಸುಪಾಸಿನಲ್ಲಿ ಚಿತ್ರೀಕರಣದಲ್ಲಿ ತಂಡ ಬ್ಯುಸಿಯಾಗಿದೆ. ಮಹೂರ್ತದ ನಂತರ ಚಿತ್ರತಂಡ ಎಡೆಬಿಡದೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಬಾಕಿ ಇರುವ ೩೫ ದಿನಗಳ ಚಿತ್ರೀಕರಣ ಪೂರ್ಣಗೊಳಿಸಿ ಈ ವರ್ಷಾಂತ್ಯಕ್ಕೆ ಚಿತ್ರವನ್ನು ತೆರೆಯ ಮೇಲೆ ತರುವ ಉದ್ದೇಶ ನಿರ್ಮಾಪಕ ಸಂದೇಶ್ ಮತ್ತವರ ತಂಡಕ್ಕಿದೆ.

lahari-photos-25-08

’ಅಮರ್ ಚಿತ್ರ ಫ್ಯಾಮಿಲಿ ಸೆಂಟಿಮೆಂಟ್ ಮತ್ತು ಪ್ರೇಮಕಥೆಯನ್ನು ಒಳಗೊಂಡಿದೆ.ಚಿತ್ರದಲ್ಲಿ ಅಭಿಷೇಕ್‌ಗೆ ನಾಯಕಿಯಾಗಿ ತಾನ್ಯ ಹೋಪ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಿರ್ದೇಶಕ ನಾಗೇಶಖರ್, ದೇವರಾಜ್, ಸಾಧುಕೋಕಿಲ, ಚಿಕ್ಕಣ್ಣ, ಸುಧಾರಾಣಿ,ದೀಪಕ್ ಶೆಟ್ಟಿ ಮತ್ತಿತರ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ದುಬಾರಿ ಬಜೆಟ್ಟಿನಲ್ಲಿ ಚಿತ್ರೀಕರಣದಲ್ಲಿ ಎಲ್ಲಿಯೂ ರಾಜಿ ಮಾಡಿಕೊಳ್ಳದೆ ಉತ್ತಮ ಚಿತ್ರ ನೀಡಲು ಹಗಲಿರುಳು ತಂಡ ಶ್ರಮ ಹಾಕಿ ಕೆಲಸ ಮಾಡುತ್ತಿದೆ.

ಬಿಡುವಿಲ್ಲದೆ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಿರ್ಮಾಪಕ ಸಂದೇಶ್,ಚಿತ್ರದಲ್ಲಿ ಮಳೆಯ ಸನ್ನಿವೇಶಗಳಿಗೆ ನಮಗೆ ಮಳೆಯೇ ಬೇಕಾಗಿತ್ತು. ಹೀಗಾಗಿ ಮಳೆಯಲ್ಲಿಯೇ ಚಿತ್ರೀಕರಣ ಮಾಡಿದ್ದೇವೆ. ಕೊಡಗಿನಲ್ಲಿ ಎಂಟತ್ತು ದಿನ ಪ್ರವಾಹದ ಸಂದರ್ಭದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅಲ್ಲದೆ ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಬಳಿಕ ಸುಲ್ತಾನ್ ಬತೇರಿಯಾ ಪ್ರದೇಶದಲ್ಲಿ ಕನ್ನಡದ ಯಾವುದೇ ಚಿತ್ರದ ಚಿತ್ರೀಕರಣಕ್ಕೆ ಅನುಮತಿ ನೀಡಿರಲಿಲ್ಲ. ನಾವು ಅಲ್ಲಿಗೆ ಹೋಗಿ ಚಿತ್ರೀಕರಣ ಮಾಡಿದ್ದೇವೆ. ಇದು ಚಿತ್ರತಂಡದ ಹೆಗ್ಗಳಿಕೆಯೂ ಹೌದು.

ಬೆಂಗಳೂರಿನಲ್ಲಿ ಹತ್ತು ದಿನ ಸೇರಿದಂತೆ ಇನ್ನು ೩೫ ದಿನ ಚಿತ್ರೀಕರಣ ಬಾಕಿ ಉಳಿದುಕೊಂಡಿದೆ. ಜೈಪುರದಲ್ಲಿ ನಾಲ್ಕು ದಿನದ ಚಿತ್ರೀಕರಣ ಮಾಡಿ ಟಾಕಿ ಭಾಗದ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುತ್ತೇವೆ. ಕನ್ನಡದಲ್ಲಿ ಹಾಡಿಗಾಗಿ ವಿದೇಶಕ್ಕೆ ಹೋಗುತ್ತಾರೆ. ಫಾರ್ ಎ ಚೇಂಜ್ ನಾವು ಸನ್ನಿವೇಶದ ಚಿತ್ರೀಕರಣಕ್ಕೆ ಹೋಗುತ್ತಿದ್ದೇವೆ. ಕರ್ನಾಟಕ ಮತ್ತು ದೇಶದಲ್ಲಿ ಹಲವು ಸುಂದರ ತಾಣಗಳಿವೆ.ಹೀಗಾಗಿ ಇಲ್ಲಿನ ಸೌಂದರ್ಯವನ್ನು ಜನರಿಗೆ ತೋರಿಸುವ ಕೆಲಸ ಮಾಡಿದ್ದೇವೆ.

ಒಳ್ಳೆಯ ದಿನ ಎಂದು ಮಹೂರ್ಥ ಮಾಡಿದೆವು. ಆ ಬಳಿಕ ದೊಡ್ಡ ಮಟ್ಟದಲ್ಲಿ ಮತ್ತೊಮ್ಮೆ ಮಹೂರ್ಥ ಮಾಡುವ ಉದ್ದೇಶವಿತ್ತು. ಆದರೆ ನಾವು ಅಂದುಕೊಂಡದಕ್ಕಿಂತ ಮೊದಲ ಮಹುರ್ಥದಲ್ಲಿಯೇ ಹೆಚ್ಚಿನ ಬೆಂಬಲ ಸಿಕ್ಕಿದ್ದರಿಂದ ಮತ್ತೆ ಮಹೂರ್ಥ ಮಾಡಲು ಹೋಗಲಿಲ್ಲ. ಧ್ವನಿಸುರುಳಿಗೆ ಎಲ್ಲರನ್ನು ಕರೆಸುತ್ತೇವೆ ಎಂದು ವಿವರ ನೀಡಿದರು. ಒಳ್ಳೆಯ ಚಿತ್ರ ನೀಡಬೇಕು ಎನ್ನುವುದು ನಮ್ಮ ಉದ್ದೇಶ. ಅದನ್ನು ಜನರು ನಿರ್ಧರಿಸಲಿದ್ದಾರೆ ಎಂದರು.

– ಚಿಕ್ಕನೆಟಕುಂಟೆ ಜಿ.ರಮೇಶ್

Leave a Comment