ಸುರ್ಯೋದಯ ವಾಕಿಂಗ್ ಕ್ಲಬ್: ಉಚಿತ ಕೋಚಿಂಗ್ ಕ್ಲಾಸ್

ರಾಯಚೂರು.ಫೆ.13- ಜಿಲ್ಲೆಯ ಫಲಿತಾಂಶ ಹೆಚ್ಚಳಕ್ಕಾಗಿ ಪ್ರತಿ ವರ್ಷ ಸರಕಾರಿ ಶಾಲೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ಉಚಿತ ಕೋಚಿಂಗ್ ಕ್ಲಾಸ್ ಹಮ್ಮಿಕ್ಳೊಲಾಗುತ್ತಿದ್ದು ಈ ವರ್ಷ ಸಹ ನಡೆಸಲಾಗುತ್ತಿದೆ. ಇದರ ಪ್ರಯೋಜನ ವಿದ್ಯಾರ್ಥಿಗಳು ಪಡೆಯುವಂತೆ ಸೂರ್ಯೋದಯ ವಾಕಿಂಗ್ ಕ್ಲಬ್ ಅಧ್ಯಕ್ಷ ಬಿ.ಬಸವರಾಜ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸೂರ್ಯೋದಯ ವಾಕಿಂಗ್ ಕ್ಲಬ್ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಇನ್ನಿತರೆ ಕ್ಷೇತ್ರಗಳಲ್ಲಿ ತೊಡಗಿಕೊಂಡಿದೆ.ಅದರ ಭಾಗವಾಗಿ ಪ್ರತಿ ವರ್ಷ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡಲಾಗುತ್ತಿದ್ದು ಜಿಲ್ಲೆಯ ಫಲಿತಾಂಶ 10 ರ ಶ್ರೇಣಿಯಲ್ಲಿ ಬರಬೇಕೆಂಬ ನಿರೀಕ್ಷೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಕ್ಲಬ್ ಹಲವು ಪೂರ್ವಭಾವಿ ಸಭೆಗಳನ್ನು ನಡೆಸಿ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. 40 ಜನ ಸಂಪನ್ಮೂಲ ವ್ಯಕ್ತಿಗಳನ್ನು ಈ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ರಾಜಶೇಖರ ದಿನ್ನಿ ಅವರ ಉಪ ಸಮಿತಿ ಈ ಕಾರ್ಯ ಮಾಡುತ್ತಿದೆ ಎಂದರು.
ಕೆಡಬ್ಲ್ಯೂಟಿ ಶಾಲೆಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಸಹ ಮಕ್ಕಳಿಗೆ ಈ ಕೋಚಿಂಗ್ ಕ್ಲಾಸಗಳು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು ಫೆ.15 ರಿಂದ ಮಾರ್ಚ್ 22 ರವರೆಗೆ ಹಮ್ಮಿಕೊಳ್ಳಲಾಗಿದ್ದು ಈಗಾಗಲೇ ಎಲ್ಲಾ ಸರಕಾರಿ ಶಾಲೆಗಳಿಗೆ ಮಾಹಿತಿ ಒದಗಿಸಲಾಗಿದೆ. ಒಂದು ವೇಳೆ ಮಾಹಿತಿ ಇಲ್ಲವಾದಲ್ಲಿ ೧೫ನೇ ತಾರೀಖಿಗೆ ಬಂದರೂ ನೋಂದಣಿ ಮಾಡಲು ಅವಕಾಶವಿದೆ ಎಂದು ಹೇಳಿದರು.
ಪ್ರತಿ ಶನಿವಾರ ಮತ್ತು ರವಿವಾರ ಕೋಚಿಂಗ್ ಕ್ಲಾಸ್ ನಡೆಯಲಿದೆ. ರವಿವಾರ ಊಟದ ವ್ಯವಸ್ಥೆ ಇರುತ್ತದೆ. ಇದರ ಪ್ರಯೋಜನ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಪೋಷಕರು ಪಡೆಯಬೇಕೆಂದು ಕೋರಿದರು. ಮಲಿಯಾಬಾದ್, ಮರ್ಚಟ್ಹಾಳ, ಕೆಇಬಿ ಶಾಲೆ, ಸ್ಟೇಷನ್ ಬಜಾರ್ ಮುಂತಾದ ನಗರ ಹಾಗೂ ಗ್ರಾಮೀಣ ಶಾಲೆಯ ವಿದ್ಯಾರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದರು.
ಉದ್ಘಾಟನೆ : ಉಚಿತ ಕೋಚಿಂಗ್ ಕ್ಲಾಸ್ ಉದ್ಘಾಟನಾ ಸಮಾರಂಭ ಫೆ.16 ರಂದು ಬೆಳಿಗ್ಗೆ 10 ಗಂಟೆಗೆ ಜರುಗಲಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ.ವೇದಮೂರ್ತಿ, ಡಿಡಿಪಿಐ ಬಿ.ಹೆಚ್. ಗೋನಾಳ, ಭಾಜಪ ಮುಖಂಡ ರವೀಂದ್ರ ಜಲ್ದಾರ್, ನಗರಸಭೆ ಸದಸ್ಯರಾದ ಈ.ವಿನಯಕುಮಾರ್, ವಿ.ನಾಗರಾಜ್, ಬಿ.ರಮೇಶ ಸೇರಿದಂತೆ ಪೂರ್ಣಿಮಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ರೇಖಾ ಕೇಶವರೆಡ್ಡಿಘಿ, ಗುತ್ತೇದಾರ ಎಂ.ಈರಣ್ಣ ಮಾನ್ವಿಘಿ, ಶಂಕರ್ ಮೆಇಕಲ್ ಸ್ಟೋರ್‌ನ ಶಂಕ್ರಪ್ಪ ಪಾಟೀಲ್, ಭಂಡಾರಿ ಆಸ್ಪತ್ರೆ ಆಡಳಿತಾಕಾರಿ ಡಾ.ರಿಯಾಜುದ್ದೀನ್, ವ್ಯಕ್ತಿತ್ವ ವಿಕಸನ ಸಂಪನ್ಮೂಲ ವ್ಯಕ್ತಿ ರಮೇಶ ಬಲ್ಲಿದ ಕೋತಿಗುಡ್ಡ ಇವರು ಭಾಗವಹಿಸಲಿದ್ದಾರೆ. ಸೂರ್ಯೋದಯ ವಾಕಿಂಗ್ ಕ್ಲಬ್ ಅಧ್ಯಕ್ಷ ಬಿ.ಬಸವರಾಜ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ 9448407592, 8310537882, 9902564234 ಗೆ ಸಂಪರ್ಕಿಸಬಹುದುದಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಎಂ.ರಿಯಾಜುದ್ದೀನ್, ತಿಪ್ಪಾರೆಡ್ಡಿ ಪಾಟೀಲ್, ಮುದ್ದನಗೌಡ, ಹೆಚ್.ಮುನಿಸ್ವಾಮಿ, ರಾಜಶೇಖರ ದಿನ್ನಿ, ನಾಗೇಂದ್ರ, ಯಲ್ಲಪ್ಪ ಜಾಲಿಬೆಂಚಿ, ನರಸಯ್ಯ ಬುಡದಿನ್ನಿ, ಹೆಚ್.ಎಂ.ಸುರೇಶ, ಹನುಮಂತಪ್ಪ, ಆರ್.ಬಸವರಾಜ್, ಗಿರಿಯಪ್ಪ ದಿನ್ನಿ, ನರಸಿಂಹ ರೆಡ್ಡಿ, ಶರಣಗೌಡ ಪಾಟೀಲ್, ತಾಯಪ್ಪ ಭಂಡಾರಿ, ಚಂದ್ರಶೇಖರ, ಎಸ್.ರಾಮಣ್ಣ, ನಾಗರಾಜ ಮಡ್ಡಿಪೇಟೆ ಇನ್ನಿತರರು ಉಪಸ್ಥಿತರಿದ್ದರು.

Leave a Comment