ಸುರಕ್ಷತಾ ಚಾಲನೆಗೆ ಒತ್ತು ನೀಡಿ- ಅಮಾಯಕರ ಜೀವ ಉಳಿಸಿ

ತಿ.ನರಸೀಪುರ, ಡಿ.5- ವಾಹನ ಚಾಲಕರ ನಿರ್ಲಕ್ಷದಿಂದ ಅಪಘಾತಗಳು ಸಂಭವಿಸುತ್ತಿದ್ದು ಸುರಕ್ಷತೆ ಚಾಲನೆಗೆ ಒತ್ತುನೀಡಿದಾಗ ಅಮಾಯಕರ ಜೀವಗಳನ್ನು ಉಳಿಸಬಹುದೆಂದು ನಂಜನಗೊಡು ಉಪ ವಿಭಾಗದ ಡಿ.ವೈ.ಎಸ್ಪಿ.ಮಲ್ಲಿಕ್ ಹೇಳಿದರು
ಪಟ್ಟಣದ ಗುರುಭವನದಲ್ಲಿ ತಿ.ನರಸೀಪುರ ಪೋಲಿಸ್ ಠಾಣೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಗಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಒಂದು ವರ್ಷದಲ್ಲಿ 195 ಅಪಘಾತಗಳು ಸಂಭವಿಸಿ 50 ಜನ ಮೃತಪಟ್ಟದ್ದಾರೆ. ಈ ಅವಗಢಗಳು ಚಾಲಕರ ನಿರ್ಲಕ್ಷದಿಂದಸಂಭವಿಸುತ್ತವೆ. ಅಮಾಯಕರ ಜೀವಗಳು ಬಲಿಯಾಗಿ ಅವರ ಕುಟುಂಬ ಬೀದಿಪಾಲಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಬನ್ನೂರು ಪಿ.ಎಸ್.ಐ.ಆನಂದ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗುತ್ತಿವೆ. ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣದಲ್ಲಿ ತಾವು ಮನೆ ಬಿಟ್ಟು ಹೋಗುವ ಮತ್ತು ಬರುವ ವಿವರಗಳನ್ನು ಹಾಕುತ್ತೀರಿ ಇದರಿಂದಾಗಿ ಕಳ್ಳರು ಜಾಗೃತರಾಗಿ ತಮ್ಮ ಕಾರ್ಯ ಸಾಧನೆ ಮಾಡುತ್ತಿದ್ದು ತಂತ್ರಜ್ಞಾನ ಬೆಳೆದಷ್ಟು ಅಪಾಯವೇ ಹೆಚ್ಚಾಗುತ್ತಿವೆ ಎಂದರು. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದ್ದು ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಪೋಷಕರ ಕಡೆಯಿಂದ ಆಗಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭ ಹಾಜರಿದ್ದ ಸಮಾಜಸೇವಕ ಕ್ಯಾಸೆಟ್ ಮಾದೇಶ್ ಮಾತನಾಡಿ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯ ಆಟೋಚಾಲಕರು ಪರವಾನಿಗೆ ಇಲ್ಲದೆ ಆಟೋಚಲಾಯಿಸಿ ತೋಂದರೆಗೆ ಸಿಲುಕುತ್ತಿದ್ದಾರೆ ಈ ನಿಟ್ಟಿನಲ್ಲಿ ತಾವು ಎಲ್ಲಾರಿಗೊ ಉಚಿತವಾಗಿ ಪರವಾನಿಗೆ ಮಾಡಿಸಿಕೊಡಲು ಸಿದ್ದವಿರುವುದಾಗಿ ಸಭೆಯಲ್ಲಿ ತಿಳಿಸಿದರು.
ಪಿ.ಎಸ್.ಐ.ಅಜರುದ್ದೀನ್ ಮಾತನಾಡಿ ಆಟೋಚಾಲಕರು ಶಿಸ್ತಿನಿಂದ ಸಮವಸ್ತ್ರವನ್ನು ಧರಿಸಿ ಆಟೋಚಾಲನೆ ಮಾಡಬೇಕು ಪ್ರತಿಯೊಬ್ಬರಲ್ಲೂ ಲೈಸೆನ್ಸ ಹಾಗೂ ಇನ್ಸೂರೆನ್ಸ ಕಡ್ಡಾಯವಾಗಿ ಇರಬೇಕು ಇಲ್ಲದಿದ್ದಲ್ಲಿ ಯಾವುದೇ ಮುಲಾಜಿಲ್ಲದೇ ಪ್ರಕರಣ ದಾಖಲಾಗುವುದೆಂದು ಚಾಲಕರಿಗೆ ಎಚ್ಚರಿಸಿದರು.
ಸಾರಿಗೆ ಇಲಾಖೆಯ ಸೂಪರಿಡೆಂಟ್ ಚೇತನ್,ತಹಶೀಲ್ದಾರ್ ಬಸವರಾಜ್ ಚಿಗರಿ,ಸಿ.ಪಿ.ಐ.ಶೇಖರ್, ಎ.ಎಸ್.ಐ.ಅಂದಾನಿ ನಾಯಕ್, ಮತ್ತಿತರಿದ್ದರು.

Leave a Comment