ಸುಮಲತಾ ಹೆಸರು ಹೇಳಿಕೊಂಡು ರಾಜಕೀಯ ಮಾಡಿಲ್ಲ: ಶಿವರಾಮೇಗೌಡ

ಮಂಡ್ಯ: ಸುಮಲತಾ ಹೆಸರೇಳಿಕೊಂಡು ರಾಜಕೀಯ ಮಾಡುವ ದುಸ್ಥಿತಿ ನನಗೆ ಬಂದಿಲ್ಲ. ಅವರು ರಾಜಕೀಯಕ್ಕೆ ಬರುವುದಕ್ಕೂ ಮುಂಚೆ ನಾನು ಚೆನ್ನಾಗಿ ರಾಜಕೀಯ ಮಾಡಿದ್ದೇವೆ ಎಂದು ಮಾಜಿ ಸಂಸದ ಶಾಸಕ ಶಿವರಾಮೇಗೌಡ ಅವರು ಸಂಸದೆ ಸುಮಲತಾ ಅವರಿಗೆ ತಿರುಗೇಟು ನೀಡಿದ್ದಾರೆ.
ನಾಗಮಂಗಲದಲ್ಲಿ ಮಾತನಾಡಿದ ಅವರು, ರೈತರು ಸಮಸ್ಯೆ ಹೇಳಿಕೊಂಡಾಗ ಜನರ ಮುಂದೆ ವಿಚಾರ ಇಟ್ಟಿದ್ದೇನೆ. ಸುಮಲತಾ ಅವರ ವೈಯಕ್ತಿಕ ವಿಚಾರ ಹೇಳಿಲ್ಲ. ಒಂದು ವೇಳೆ ಹೇಳಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದು ಅವರು ಸಂಸದೆ ಸುಮಲತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುಮಲತಾ ಅವ್ರು ಭಾಷಣ ಮಾಡದೆ, ಗುದ್ದಲಿ ತೆಗೆದುಕೊಂಡು ಅಗೆಯುತ್ತಿದ್ದಾರಾ? ಎಂದು ಪ್ರಶ್ನೆ ಮಾಡಿದ ಅವರು, ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಹಿಂದಿನ ಸರ್ಕಾರವೇ ಕಾರಣ ಎಂಬ ಸುಮಲತಾ ಆರೋಪ ವಿಚಾರ ಬಗ್ಗೆ ಪ್ರತಿಕ್ರಿಯಿಸಿದರು.
ನಮ್ಮಿಂದ ತಪ್ಪಾಗಿದೆ. ನೀವು ಅಧಿಕಾರದಲ್ಲಿದ್ದೀರಿ ಸಮಸ್ಯೆ ಬಗೆಹರಿಸಿ. ಅದನ್ನು ಬಿಟ್ಟು ಕೆಸರೆರಚಾಡಿ ಮಾಡಿದರೆ ಪ್ರಯೋಜನವಿಲ್ಲ. ಸಂಸದರೂ ತಮ್ಮ ಕೆಲಸ ಮಾಡಬೇಕು, ಶಾಸಕರೂ ತಮ್ಮ ಕೆಲಸ ಮಾಡಬೇಕು ಎಂದು ಅವರು ಸುಮಾಲತಾಗೆ ತಿರುಗೇಟು ನೀಡಿದರು.

Leave a Comment