ಸುಪ್ರೀಂ ಸಿಜೆಐ ಅ.3ರಂದು ಅಧಿಕಾರ ಸ್ವೀಕಾರ

ನವದೆಹಲಿ, ಸೆ. ೧೪-ಸರ್ವೋಚ್ಛ ನ್ಯಾಯಾಲಯದ ೪೬ನೇ ಮುಖ್ಯ ನ್ಯಾಯಾಧೀಶರಾಗಿ   ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ನೇಮಕ ಮಾಡಲಾಗಿದೆ. ಅಕ್ಟೋಬರ್ ೨ರಂದು  ಹಾಲಿ ಮುಖ್ಯ ನ್ಯಾಯಮೂರ್ತಿ ಡೀಪಕ್ ಮಿಶ್ರಾ ನಿವೃತ್ತಿಯಾಗಲಿದ್ದು, ಅ.೩ರಂದು ರಂಜನ್ ನೂತನ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆಂದು ಕಾನೂನು ಸಚಿವಾಲಯ ತಿಳಿಸಿದೆ.

ನವೆಂಬರ್ ೧೭, ೨೦೧೯ರಂದು ರಂಜನ್ ನಿವೃತ್ತಿಯಾಗಲಿದ್ದಾರೆ. ಹೀಗಾಗಿ ೧೩ ತಿಂಗಳ ಕಾಲ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಲಿದ್ದಾರೆ.

ನವೆಂಬರ್, ೧೮, ೧೯೫೪ರಲ್ಲಿ ಜನಿಸಿದು ರಂಜನ್ ೧೯೭೮ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. ಗುವಾಹಟಿ ಹೈಕೋರ್ಟ್‌ನಲ್ಲಿ ತೆರಿಗೆ, ಕಂಪನಿ ವ್ಯವಹಾರಗಳು ಮತ್ತು ಸಂವಿಧಾನ ವಿಚಾರಗಳ ಬಗ್ಗೆ  ಅಭ್ಯಾಸ ಮಾಡಿದರು.

ಫೆ ೨೮, ೨೦೦೧ರಲ್ಲಿ ಗುವಾಹಟಿ ಹೈಕೋರ್ಟ್ ಶಾಶ್ವತ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಸೆ. ೯, ೨೦೧೦ರಲ್ಲಿ ಹರಿಯಾಣ ಪಂಜಾಬ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಏ. ೨೩, ೨೦೧೨ರಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ  ನೇಮಕಗೊಂಡರು.

ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ರಂಜನ್ ಅವರ ಹೆಸರನ್ನು ದೀಪಕ್ ಮಿಶ್ರಾ  ಶಿಫಾರಸು ಮಾಡಿದ್ದರು.

Leave a Comment