ಸುಪ್ರೀಂ ತೀರ್ಪು ಆತಂಕವಿಲ್ಲ: ಸಚಿವ ಮಾಧುಸ್ವಾಮಿ

ಬೆಳಗಾವಿ,ನ13: ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ಪ್ರಕಟಿಸಿರುವ ತೀರ್ಪಿನ ಬಗ್ಗೆ ನಮಗೆ ಯಾವುದೇ ಆತಂಕವಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,ಅನರ್ಹ ಶಾಸಕರನ್ನು ಚುನಾವಣೆಗೆ ನಿಲ್ಲಬೇಡಿ‌ ಎಂದು  ಹೇಳಲು ಸಾಧ್ಯವಿಲ್ಲ.

ಜನಪ್ರತಿನಿಧಿ ಎರಡು ವರ್ಷ ಶಿಕ್ಷೆ ಅನುಭವಿಸಿ ಅನರ್ಹರಾದರೆ ಮಾತ್ರ  ಅಂತವರು ಚುನಾವಣೆಗೆ ಸ್ಪರ್ಧಿಸಲು ಬರುವುದಿಲ್ಲ  ಈ ಕಾರಣಕ್ಕೆ ಅನರ್ಹರ ಪ್ರಕರಣದಲ್ಲಿ  ಅಂತಹ ಸಂದಿಗ್ಧ ಪರಿಸ್ಥಿತಿ ಉದ್ಭವಿಸಿಲ್ಲ. ಅನರ್ಹರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ಸರಿಯಾದ ನ್ಯಾಯ ಕೊಟ್ಟಿದೆ.
ಕಾಂಗ್ರೆಸ್, ಜೆಡಿಎಸ್  ಮೈತ್ರಿ ಸರ್ಕಾರ ಮುಂದುವರೆದರೆ ರಾಜ್ಯದಲ್ಲಿ ಅಭಿವೃದ್ಧಿ ಪರ ಕೆಲಸ ಕಾರ್ಯಗಳನ್ನು  ಮಾಡಲು ಸಾಧ್ಯವಿಲ್ಲ ಎಂದು ಅನರ್ಹ ಶಾಸಕರು ರಾಜೀನಾಮೆಯನ್ನು ಕೊಟ್ಟು ಹೊರಬಂದಿದ್ದಾರೆ.  ಅವರು ರಾಜೀನಾಮೆ ನೀಡಿ ಹೊರಬಂದಿದ್ದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿದೆ.   ಅನರ್ಹ ಶಾಸಕರಿಗೆ ಮುಂದಿನ ದಿನಗಳಲ್ಲಿ  ಒಳ್ಳೆಯದಾಗಲಿ. ಅವರು ಚುನಾವಣೆಯಲ್ಲಿ  ಗೆದ್ದು ಬರಲಿ ಎಂದು ಆಶಿಸುತ್ತೇನೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

Leave a Comment