ಸುನೀಲ್‍ಬೋಸ್‍ಗೆ ಮತ್ತೆ ಸಂಕಷ್ಠ

ಮೈಸೂರು, ಸೆ. 13- ಮರಳು ಸಾಗಾಣಿಕೆ ಅಕ್ರಮ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮಹದೇವಪ್ಪ ಪುತ್ರನಿಗೆ ಮತ್ತೆ ಸಂಕಷ್ಠ ಎದುರಾಗಿದೆ.
ಪ್ರಕರಣದಲ್ಲಿ ಸುನಿಲ್ ಬೋಸ್ ಆರೋಪಿ ಎಂದು ಹೊಸ ಆದೇಶ ನೀಡಿದ ಮೈಸೂರಿನ ೩ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಸಾಕಷ್ಟು ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಸುನಿಲ್ ಬೋಸ್ ಆರೋಪಿ ಎಂದು ನ್ಯಾಯಾಧೀಶ ಸುಧೀಂದ್ರ ನಾಥ್ ಆದೇಶ ನೀಡಿದ್ದಾರೆ. ರಾಜು ಈ ಪ್ರಕರಣದ ೨ನೇ ಆರೋಪಿಯಾಗಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಅಲ್ಫೋನ್ಸಿಸ್ ಗೆ ಮರಳು ಗುತ್ತಿಗೆದಾರನಿಂದ ಲಂಚ ಪಡೆಯುವಂತೆ ಒತ್ತಡ ಹಾಕಿದ್ದ ಸುನಿಲ್ ಬೋಸ್
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ ಸಂದರ್ಭ ತಪ್ಪೊಪ್ಪಿಕೊಂಡಿದ್ದರು. ಸುನಿಲ್ ಬೋಸ್ ವಿರುದ್ದ ಅಲ್ಫೋನ್ಸಿಸ್ ಲಿಖಿತ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ನ್ಯಾಯಾಲಯ ಸತತ ವಿಚಾರಣೆ ನಂತರ ಆರೋಪಿ ಎಂದು ಪರಿಗಣಿಸಿ ಸುನಿಲ್ ಬೋಸ್ ಕೋರ್ಟ್‍ಗೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಆದೇಶ ನೀಡಿದೆ. ಹಾಗಾಗಿ ಮಹದೇವಪ್ಪ ಪುತ್ರನಿಗೆ ಮತ್ತೆ ಸಂಕಷ್ಠ ಎದುರಾಗಿದೆ.

Leave a Comment