ಸುಂದರ ವರ್ಣಚಿತ್ರಗಳ ಪ್ರದರ್ಶನ ‘ಅಡಾಪ್ಟೇಶನ್’

ಬೆಂಗಳೂರು, ಅ ೧೨- ದಕ್ಷಿಣ ಭಾರತದ ಪ್ರಮುಖ ಕಲಾ ಗ್ಯಾಲರಿಗಳಲ್ಲಿ ಒಂದಾದ ಸಬ್ಲೈಮ್ ಗ್ಯಾಲರಿಯಾ ಈ ಬಾರಿ ಕ್ರಿಸ್ಟಿನಾ ಬ್ಯಾನರ್ಜಿ ಅವರ ಸುಂದರ ವರ್ಣಚಿತ್ರಗಳ ಸಂಗ್ರಹವಾದ ‘ಅಡಾಪ್ಟೇಶನ್’ ಅನ್ನು ಕಲಾರಸಿಕರಿಗಾಗಿ ಪ್ರದರ್ಶಿಸಲು ಸಿದ್ಧವಾಗಿದೆ.
ಈ ಸಂಗ್ರಹವು ಕ್ರಿಸ್ಟಿನಾ ಅವರ ಪ್ರಯಾಣದ ಸಂದರ್ಭದಲ್ಲಿನ ಆಲೋಚನೆಗಳು, ಅನುಭವಗಳಿಂದ ಸ್ಫೂರ್ತಿ ಪಡೆದಿದೆ. ಅ ೧೩ರಿಂದ ನ ೭ರವರೆಗೆ ಇದು ಪ್ರದರ್ಶನಗೊಳ್ಳಲಿದೆ. ವೈವಿಧ್ಯತೆ ಮತ್ತು ಶ್ರೀಮಂತ ಸಂಸ್ಕೃತಿಯಿಂದ ಆಕರ್ಷಣೆಗೊಂಡು ಕ್ರಿಸ್ಟಿನಾ ಯುನೈಟೆಡ್ ಸ್ಟೇಟ್ಸ್‌ನಿಂದ ಭಾರತಕ್ಕೆ ನಾಲ್ಕು ವರ್ಷಗಳ ಹಿಂದೆ ಬಂದಿದ್ದರು. ಕಲೆಯನ್ನೇ ವೃತ್ತಿಯನ್ನಾಗಿಸಿಕೊಂಡರು. ಊರೂರು ಸುತ್ತುವುದರ ಜತೆಗೆ ಇವರು ಪ್ರಾಣಿ ಪ್ರಿಯೆ. ಕ್ರಿಸ್ಟಿನಾ ಅವರ ಕಲೆಯು ಪ್ರಾಣಿಗಳು ಹಾಗೂ ಆಕೆ ಭೇಟಿ ನೀಡಿದ ಸ್ಥಳಗಳಿಂದ ಹೆಚ್ಚು ಪ್ರೇರಿತವಾಗಿವೆ. ಭಾರತವೆಂದರೆ ಆಕೆಯ ಪಾಲಿಗೆ ಅದ್ಭುತವಾದ ಸೌಂದರ್ಯ ಹಾಗೂ ಶ್ರೀಮಂತ ಸಂಸ್ಕೃತಿಯಿಂದ ಕೂಡಿದ್ದು ಜತೆಗೆ ವೈವಿಧ್ಯಮಯ ಬಣ್ಣಗಳು ಹಾಗೂ ರೋಮಾಂಚಕ ಜೀವನದಿಂದ ಚಿತ್ರಿತವಾಗಿದೆ.
ಕ್ರಿಸ್ಟಿನಾ ಅವರು ತಮ್ಮನ್ನು ಚಿಕ್ಕವಯಸ್ಸಿನಲ್ಲಿ ಕಲಾ ಜಗತ್ತಿಗೆ ಒಡ್ಡಿಕೊಂಡರು. ಇವರ ತಾಯಿ ವೃತ್ತಿಪರ ಕಲಾವಿದೆ ಹಾಗೂ ತಂದೆ ಮರದ ಹಾಗೂ ಕೆತ್ತನೆಗಳ ಕೆಲಸ ಮಾಡುತ್ತಾರೆ. ಹಾಗಾಗಿ ಕಲೆ ಸಹಜವಾಗಿಯೇ ಕ್ರಿಸ್ಟಿನಾ ಅವರಿಗೆ ಒಲಿದಿದೆ. ಅವರು ತಮ್ಮ ತಂದೆಯಿಂದ ಶಿಲ್ಪಕಲೆಗೆ ಹೇಗೆ ವಿದ್ಯುತ್ ಉಪಕರಣಗಳನ್ನು ಬಳಸುವುದು ಎಂಬುದನ್ನು ಕಲಿತರು. ಇವರ ಕಲಾಕೃತಿ ಆಮೆರಿಕ ಮತ್ತು ಭಾರತದಲ್ಲಿನ ಆಕೆಯ ಜೀವನದಿಂದ ಬಂದ ಆಲೋಚನೆಗಳು ಮತ್ತು ಅನುಭವಗಳ ಮಿಶ್ರಣವಾಗಿದೆ. ಅವರು ಆನೆಗಳು, ಮಂಗಗಳು, ಪಕ್ಷಿಗಳು ಮತ್ತು ನಾಯಿಗಳಂತಹ ಪ್ರಾಣಿಗಳನ್ನು ಬೇರೆ ಬೇರೆ ಸೆಟ್ಟಿಂಗ್‌ಗಳಲ್ಲಿ ಚಿತ್ರಿಸಿದ್ದಾರೆ. ಕ್ರಿಸ್ಟಿನಾ ಅವರ ವೃತ್ತಿಪರ ಜೀವನವು ಸಂಪೂರ್ಣವಾಗಿ ಕಲೆಯಿಂದ ಆವರಿಸಿಕೊಂಡಿದೆ ಮತ್ತು ಅವರಿಗೆ ಅದರಿಂದ ಅಪಾರ ತೃಪ್ತಿ ದೊರಕಿದೆ.
ದಿ ಅಡಾಪ್ಟೇಷನ್ ಸರಣಿಯು ನನ್ನ ಪ್ರಯಾಣದ ಮೂಲಕ ಮತ್ತು ನಾನು ಪ್ರತಿದಿನವೂ ಸಂವಹನ ನಡೆಸುವ ಪ್ರಾಣಿಗಳ ಚಿತ್ರವನ್ನು ಚಿತ್ರಿಸುತ್ತದೆ. ಮಾನವೀಯತೆಯ ಅಡಿಯಲ್ಲಿ ಪ್ರೇಕ್ಷಕರನ್ನು ನನ್ನ ಕಲೆಯಿಂದ ದೂರ ತೆಗೆದುಕೊಂಡು ಹೋಗಲು ಬಯಸುತ್ತೇನೆ. ಇದು ಪ್ರಾಣಿಗಳ ಕುರಿತು ವಿವರಿಸುತ್ತದೆ ಎಂದು ಕ್ರಿಸ್ಟಿನಾ ಅವರು ಹೇಳುತ್ತಾರೆ.
ಇವರ ಸುತ್ತಲಿನ ಪ್ರಪಂಚದ ಜತೆಗೆ, ರಾಧಾಕೃಷ್ಣನ್, ಸುದೀಪ್ ರಾಯ್ ಮತ್ತು ಸಾಲ್ವಾಡಾರ್ ಡಾಲಿ ಮೊದಲಾದ ಸಮಕಾಲೀನ ಕಲಾವಿದರು ಕ್ರಿಸ್ಟಿನಾ ಅವರ ಕಲೆಯಿಂದ ಪ್ರಭಾವಗೊಂಡಿದ್ದಾರೆ, ಮಾರಾಟ ಪ್ರಕ್ರಿಯೆಯ ಒಂದು ಭಾಗವು ಅಭ್ಯಯಮ್ ಗೆ ಹೋಗುತ್ತದೆ. ವ್ಯಸನದಿಂದ ಪೀಡಿತಗೊಂಡವರ ಜೀವನದಲ್ಲಿ ಮಾರ್ಪಾಡು ತರುವ ಉದ್ದೇಶದಿಂದ ಸಂಘಟನೆಯು ಅವರನ್ನು ಮರಳಿ ಸಮಾಜದ ಜತೆ ಸಂಯೋಜಿಸುವ ಆಶಯವನ್ನು ಹೊಂದಿದೆ.

Leave a Comment