ಸುಂದರ್‌ರಾಜುಗೆ ರಾಷ್ಟ್ರಪತಿ ಸೇವಾ ಪದಕ

ಕೊರಟಗೆರೆ, ಆ. ೧೭- ತಾಲ್ಲೂಕಿನ ತುಂಬುಗಾನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ 12ನೇ ಪೊಲೀಸ್ ತರಬೇತಿ ಶಾಲೆಯ ಡೆಪ್ಯೂಟಿ ಕಮಾಂಡೆಂಟ್ ಟಿ. ಸುಂದರ್‌ರಾಜು ಅವರಿಗೆ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ ಲಭಿಸಿದೆ.

1995ರಲ್ಲಿ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ನೇರ ನೇಮಕಾತಿಯಾಗಿದ್ದು, ತಮ್ಮ ಸೇವಾ ಅವಧಿಯಲ್ಲಿ ವೀರಪ್ಪನ್ ಕಾರ್ಯಾಚರಣೆ ಮತ್ತು ನಕ್ಸಲ್ ನಿಗ್ರಹ ಪಡೆಗಳಲ್ಲಿ ಅತ್ಯಂತ ದಕ್ಷತೆ, ಶಿಸ್ತಿನಿಂದ ಹಾಗೂ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ಕಾರ್ಯ ಗಮನಿಸಿ 2016ರಲ್ಲಿ ರಾಜ್ಯ ಸರ್ಕಾರವು ಚಿನ್ನದ ಪದಕ ನೀಡಿ ಗೌರವಿಸಿತ್ತು.

Leave a Comment