ಸೀಬಾರದಲ್ಲಿ ಯೋಗ ಶಿಬಿರದ ಉದ್ಘಾಟನೆ

ಚಿತ್ರದುರ್ಗ ಮೇ 16-” ಹಳ್ಳಿಗಳಲ್ಲಿ ದುರ್ವ್ಯಸನ, ದುಷ್ಚಟಗಳಿಗೆ ಬಲಿಯಾಗಿರುವ ಯುವ ಜನರನ್ನು ಅವುಗಳಿಂದ ಮುಕ್ತರನ್ನಾಗಿ ಮಾಡಿ ಅವರಿಗೆ ರೋಗ ಮುಕ್ತ ಮತ್ತು ಯೋಗಯುಕ್ತ ಜೀವನಕಲೆಯನ್ನು ಕಲಿಸುವುದು ಯೋಗ ಶಿಬಿರಗಳ ಗುರಿಯಾಗಬೇಕು” ಎಂದು ರಾಷ್ಟ್ರನಾಯಕ ಎಸ್ ನಿಜಲಿಂಗಪ್ಪ ಸ್ಮಾರಕ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಷಣ್ಮುಖಪ್ಪ ಹೇಳಿದರು.

ಅವರು ಇಂದು ಹರಿದ್ವಾರದ ಪತಂಜಲಿ ಯೋಗ ಪ್ರಚಾರಕ ಪ್ರಕಲ್ಪದಡಿಯಲ್ಲಿ ಚಿತ್ರದುರ್ಗ ಪತಂಜಲಿ ಭಾರತ್ ಸ್ವಾಭಿಮಾನ್ ಟ್ರಸ್ಟ್, ಎಸ್.ನಿಜಲಿಂಗಪ್ಪ ಸ್ಮಾರಕ ಪ್ರತಿಷ್ಟಾನ ಹಾಗೂ ಸೀಬಾರ ಗ್ರಾಮಸ್ಥರ ಸಹಯೋಗದೊಂದಿಗೆ ಚಿತ್ರದುರ್ಗದ ಹೊರವಲಯದಲ್ಲಿರುವ ಸೀಬಾರ ಗ್ರಾಮದ ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪನವರ ಸ್ಮಾರಕ ಆವರಣದಲ್ಲಿ ಸಾರ್ವಜನಿಕರಿಗಾಗಿ ಏರ್ಪಡಿಸಿರುವ ಹತ್ತು ದಿನಗಳ ಪತಂಜಲಿ ಉಚಿತ ಯೋಗ , ಪ್ರಾಣಾಯಾಮ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ‘ ಸಮಾಜಕ್ಕೆ ಆರೋಗ್ಯದ ಜೊತೆಯಲ್ಲಿ ಸಾತ್ವಿಕ ಸಂದೇಶವನ್ನು ಸಾರುವುದಕ್ಕೆ ಕಾಲ ಕಾಲಕ್ಕೆ ಯೋಗ ಶಿಬಿರಗಳ ಮೂಲಕ ಜನಜಾಗೃತಿ ಅಭಿಯಾನ, ಪರಿಸರ ಪ್ರೇಮ ಬೆಳೆಸುವಂಥ ವೃಕ್ಷರೋಪಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಯೋಗ ಶಿಬಿರಗಳ ಮಾಧ್ಯಮದಿಂದ ಜನರ ಅಸ್ತವಸ್ತಗೊಂಡ ಜೀವನ ಶೈಲಿಯನ್ನು ವ್ಯವಸ್ಥಿತವಾಗಿ ಯೋಗಮಯಗೊಳಿಸಬೇಕು, ರೋಗಿಗಳನ್ನು ನೀರೋಗಿಗಳನ್ನಾಗಿಯೂ ಹಾಗೂ ಸ್ವಸ್ಥರನ್ನಾಗಿಡುವ ಕಲೆಯನ್ನು ಕಲಿಸುವುದು ಯೋಗ ಗುರುವಿನ ಗುರಿಯಾಗಬೇಕು, ಈ ನಿಟ್ಟಿನಲ್ಲಿ ಸಾಗಿರುವ ನಮ್ಮ ಚಿತ್ರದುರ್ಗದ ಭಾರತ್ ಸ್ವಾಭಿಮಾನ್ ಟ್ರಸ್ಟ್‍ನ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಪ್ಪ ಹಾಗು ಯೋಗಗುರು ರವಿ ಕೆ.ಅಂಬೇಕರ್ ರವರ ಕಾರ್ಯ ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಳಗ್ಗಿನ ಜಾವದ ತಂಪು ವಾತಾವರಣದಲ್ಲಿ ಪ್ರಾರಂಭಗೊಂಡ ಸಭಾ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ 5-30ಕ್ಕೆ ಸರಿಯಾಗಿ ಯೋಗ ಗುರು ರವಿ ಕೆ.ಅಂಬೇಕರ್ ರವರಿಂದ ಯೋಗ ತರಬೇತಿ ಕಾರ್ಯಕ್ರಮ ನಡೆಯಿತು. ಮೆದೇಹಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಆರ್.ನರಸಿಂಹರಾಜು ಸಸಿಗೆ ನೀರೆರೆಯುವುದರೊಂದಿಗೆ ಶಿಬಿರವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನಪ್ಪ ಭಾಗವಹಿಸಿದ್ದರು.

Leave a Comment