ಸೀತಾರಾಮ ಫ್ಯಾಮಿಲಿ ಡ್ರಾಮ

  • ಚಿಕ್ಕನೆಟಕುಂಟೆ ಜಿ. ರಮೇಶ್

ಜಾಗ್ವಾರ್ ಚಿತ್ರದ ಬಳಿಕ ’ನಿಖಿಲ್ ಕುಮಾರ್ ನಟಿಸಿರುವ “ಸೀತಾರಾಮ ಕಲ್ಯಾಣ” ಚಿತ್ರ ಪೂರ್ಣಗೊಂಡಿದೆ.ಮೊದಲ ಚಿತ್ರದಲ್ಲಿ ತೆಲುಗು ಮಯ ಎನ್ನುವ ಆರೋಪದ ಹಣೆಪಟ್ಟಿ ಹೊಂದಿದ್ದು ನಿಖಿಲ್ ಅದರಿಂದ ಆಚೆ ಬರಲು ಈ ಬಾರಿ ಸೀತಾರಾಮನನ್ನು ಬಹುತೇಕ ಕನ್ನಡಮಯ ಮಾಡಿದ್ದಾರೆ.
೧೩೦ ದಿನಗಳ ಕಾಲ ಚಿತ್ರದ ಚಿತ್ರೀಕಣ ನಡೆದಿದ್ದು ೧೩೦ಕ್ಕೂ ಹೆಚ್ಚು ಹಿರಿ-ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ. ಚಿತ್ರ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರಕ್ಕಾಗಿ ದುಡಿದ ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರಿಗಾಗಿ ಸಂತೋಷ ಕೂಟ ಆಯೋಜಿಸಿದ್ದರು.

film-seetharama-kalyana_219

ಬಾಲಿವುಡ್‌ನ ಹಿರಿಯ ಕಲಾವಿದೆಯರಾದ ಮಧುಬಾಲ,ಭಾಗ್ಯಶ್ರೀ, ಹಿರಿಯ ಕಲಾವಿದರಾದ ಗಿರಿಜಾ ಲೋಕೇಶ್,ಶರತ್ ಕುಮಾರ್, ಆದಿತ್ಯ ಮೆನನ್ ಸೇರಿದಂತೆ ದೊಡ್ಡ ದಂಡೇ ಇತ್ತು.

ಎಲ್ಲರ ಕೆಲಸವನ್ನು ಹಾಡಿ ಹೊಗಳಿದ ನಿಖಿಲ್, ಹಿರಿಯ ಕಲಾವಿದರಿಂದ ಸಾಕಷ್ಟು ಕಲಿತಿದ್ದೇನೆ.ಚಿತ್ರ ಚೆನ್ನಾಗಿ ಮೂಡಿ ಬಂದಿದ್ದರೆ ಅದಕ್ಕೆ ಕಲಾವಿದರು ಮತ್ತು ನಿರ್ದೇಶಕ ಹರ್ಷ ಅವರೇ ಪ್ರಮುಖ ಕಾರಣ. ಸೀತಾರಾಮ ಬಹುತೇಕ ಕನ್ನಡದ ಕಲಾವಿದರೇ ಚಿತ್ರದಲ್ಲಿದ್ದಾರೆ.ಹೀಗಾಗಿ ಇಲ್ಲಿನ ನೆಟೀವಿಟಿಗೆ ಹೆಚ್ಚು ಒತ್ತು ನೀಡಲಾಗಿದೆ.

film-seetharama-kalyana_163

ಜಾಗ್ವಾರ್ ಚಿತ್ರವನ್ನು ೧೮೩ ಕಾಲ್ ಶೀಟ್‌ನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆ ಚಿತ್ರದಲ್ಲಿ ಹರ್ಷ ಚಿತ್ರದ ಹಾಡಿಗೆ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದರು.ಆಗ ಭರವಸೆ ನೀಡಿದಂತೆ ಅವರೊಂದಿಗೆ ಕೆಲಸ ಮಾಡಿದ್ದೇನೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಇದೊಂದು ಫ್ಯಾಮಿಲಿ ಮತ್ತು ಸೆಂಟಿಮೆಂಟ್‌ನಿಂದ ಕೂಡಿರುವ ಮನೆ ಮಂದಿಯೆಲ್ಲಾ ನೊಡಬಹುದಾದ ಚಿತ್ರ.

ಶರತ್ ಕುಮಾರ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅವರೊಂದಿಗೆ ಕೆಲಸ ಮಾಡುವಾ ನನ್ನ ತಂದೆಯ ಜೊತೆ ಮನೆಯಲ್ಲಿ ಹೇಗೆ ಇರುತ್ತೇನೆ ಆ ರೀತಿ ಅನುಭವವಾಯಿತು. ಚಿತ್ರ ಪೂರ್ಣಗೊಂಡಿದ್ದು ಇನ್ನು ಬಿಡುಗಡೆಯ ದಿನಾಂಕ ನಿಗಧಿ ಮಾಡಿಲ್ಲ ತಂದೆಯೊಂದಿಗೆ ಚರ್ಚೆ ನಡೆಸಿ ಬಿಡುಗಡೆಯ ದಿನಾಂಕ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.

film-seetharama-kalyana_125ನಿರ್ದೇಶಕ ಹರ್ಷ, ಸೀತಾರಾಮ ಕಲ್ಯಾಣ ಫ್ಯಾಮಿಲಿ ಡ್ರಾಮದ ಕತೆಯನ್ನು ಹೊಂದಿದೆ.ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಕೆಲಸದ ಒತ್ತಡದಲ್ಲಿಯೂ ಚಿತ್ರಕ್ಕಾಗಿ ಅನೇಕ ಸಲಹೆ ನೀಡಿದರು. ಮತ್ತು ಮುಕ್ತ ಸ್ವಾತಂತ್ರ್ಯ ನೀಡಿದ್ದರಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಇದು ರೀಮೇಕ್ ಅಲ್ಲ ಸ್ವಮೇಕ್ ಚಿತ್ರ ಎನ್ನುವುದನ್ನು ಸ್ಪಷ್ಟಪಡಿಸಿದರು.

ನಾಯಕಿ ರಚಿತಾ ರಾಮ್, ದೊಡ್ಡ ಬ್ಯಾನರ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ.ಒಳ್ಳೆಯ ಚಿತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಧುಬಾಲ, ಭಾಗ್ಯಶ್ರೀ, ಶರತ್ ಕುಮಾರ್, ಗಿರಿಜಾ ಲೋಕೇಶ್,ಆದಿತ್ಯ ಮೆನನ್,  ಸೇರಿದಂತೆ ಗೋಷ್ಟೀಯಲ್ಲಿ ಭಾಗವಹಿಸಿದ್ದ ಕಲಾವಿದರು ಚಿತ್ರದ ಬಗ್ಗೆ ಅನುಭವ ಹಂಚಿಕೊಂಡರು.

Leave a Comment