ಸಿ.ಸಿ ರಸ್ತೆಗೆ ಭೂಮಿ ಪೂಜೆ

ಬಳ್ಳಾರಿ.ಜೂ.19: ನಗರದ ವಾರ್ಡ್ ನಂ 16, ಅಗಡಿ ಮಾರೆಪ್ಪ ಕಾಂಪೌಂಡ್‍ನ, ಮೊದಲನೇ ಹಂತದಲ್ಲಿ ಪಾಲಿಕೆಯ ಎಸ್.ಎಫ್.ಸಿ ಅನುದಾನದಲ್ಲಿ ಸುಮಾರು ಮೂವತ್ಮೂರು ಲಕ್ಷ ರೂಪಾ ಯಿಗಳ ವೆಚ್ಚದಲ್ಲಿ ಅಗಡಿ ಮಾರೆಪ್ಪ ಕಾಂಪೌಂಡ್‍ನ ಲಿಂಕ್ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಯಿತು.ಸಿ.ಸಿ ರಸ್ತೆ ನಿರ್ಮಾಣಕ್ಕಾಗಿ ಮಹಾನಗರ ಪಾಲಿಕೆವತಿಯಿಂದ ಮಹಾಪೌರರರಾದ ಜಿ.ವೆಂಕಟ ರಮಣ ಮತ್ತು ಉಪ ಮಹಾಪೌರರಾದ ಉಮಾದೇವಿ ಶಿವರಾಜ್ ರವರು ಇಂದು ಭೂಮಿ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾಪೌರ ವೆಂಕಟರಮಣ, ಈ ಕಾಮಗಾರಿಯ ಕೆಲಸವನ್ನು ಈ ದಿನದಿಂದಲೇ ಆರಂಭಿಸಲಾಗುವುದು, ಅಲ್ಲದೆ ನಗರದ ಇತರೆಡೆಗಳಲ್ಲಿಯೂ ಸಹ ಸಿ.ಸಿ ರಸ್ತೆಯನ್ನು ನಿರ್ಮಸಿ ನಿರ್ಮಲ ಬಳ್ಳಾರಿಗಾಗಿ ಪ್ರಯತ್ನಿಸಲಾಗುವುದು ಎಂದರು. ಪಾಲಿಕೆ ಜೊತೆಗೆ ನಾಗರೀಕರು ಸಹ ಕೈಜೋಡಿಸಿದಲ್ಲಿ ಬಳ್ಳಾರಿಯನ್ನು ಸ್ವಚ್ಚ ಸುಂದರ ನಗರವನ್ನಾಗಿ ಮಾಡ ಬಹುದು. ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳು ಗೋಡೆಗಳಿಗೆ ಚಿತ್ರಗಳನ್ನು ಬಿಡಿಸುವ ಮೂಳಕ ನಗರದ ಅಂದವನ್ನು ಇನ್ನಷ್ಟು ಹೆಚಿಸುತ್ತಿದ್ದಾರೆ ಅವರಿಗೆ ಅಭಿನಂದನೆಗಳು ಎಂದರು.

ಈ ಸಂಧರ್ಭದಲ್ಲಿ ಪಾಲಿಕೆಯ ಸದಸ್ಯರಾದ ಕೆ.ಕೆರೆಕೊಡಪ್ಪ, ಚಂದ್ರ, ವಿ.ಲಕ್ಷ್ಮಿದೇವಿ, ಸೂರಿ, ವಿ.ರಾಮುಡು, ಶಿವರಾಜು, ಸೋಂತಗಿರಿ, ವಕೀಲರಾದ ಎನ್.ಪ್ರಕಾಶ್, ರಿಲಯನ್ಸ್ ರಾಮು, ಸೋಂತಾ ಬಾಬು, ಕೆ.ಹೆಚ್.ರಮೇಶ್, ನಾಮಾ ರಮೇಶ್, ಹನುಮೇಶ್, ಎಲ್.ಐ.ಸಿ ರವಿ, ಗುಡದೂರು ಶ್ರೀಧರ್, ಕಲ್ಯಾಣ್, ಸುಂಕಪ್ಪ, ರಾಜೇಂದ್ರಕುಮಾರ್, ಮಂಜುನಾಥಶೆಟ್ಟಿ ಸೇರಿದಂತೆ ಕಾಲೋನಿ ನಿವಾಸಿಗಳು ಉಪಸ್ಥಿತರಿದ್ದರು.

Leave a Comment