ಸಿ.ಎಂ. ಪತ್ರ ಬರೆಯಲಿ – ಜೋಶಿ

ಹುಬ್ಬಳ್ಳಿ,ಜು17 : ರಾಜ್ಯದ ಮುಖ್ಯಮಮತ್ರಿ  ಸಿದ್ದರಾಮಯ್ಯನವರು ಮಹದಾಯಿ ವಿಚಾರವಾಗಿ ಗೋವಾ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವುದು ಸ್ವಾಗತಾರ್ಹ.

ಆದರೆ ಬರೀ ಮುಖ್ಯಮಂತ್ರಿಯವರಿಗೆ ಪತ್ರ ಬರೆದರೇ ಉಪಯೋಗವಿಲ್ಲ, ಇದರೊಂದಿಗೆ ಗೋವಾ ರಾಜ್ಯದ ವಿರೋಧ ಪಕ್ಷದ ಮುಖಂಡರುಗಳಿಗೂ ಪತ್ರ ಬರೆದು ಮಹದಾಯಿ ವಿಚಾರದಲ್ಲಿ ಒಮ್ಮತದ ಅಭಿಪ್ರಾಯ ಮೂಡಿಸಲು ಪ್ರಯತ್ನಿಸಲಿ. ಪ್ರಧಾನಿ ನರೇಂದ್ರ ಮೋದಿಯವರ ಆಶವೂ ಇದೇ ಆಗಿತ್ತು. ಅದನ್ನು ಬಿಟ್ಟು ಬರೀ ರಾಜಕೀಯ ಮಾಡಲು ಹೊರಟಿರುವುದು ಸರಿಯಲ್ಲ. ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಐಸಿಸಿ ಅಧ್ಯಕ್ಷೆ  ಸೋನಿಯಾಗಾಂಧಿಯವರ ಮನವೊಲಿಸಲು ಪ್ರಯತ್ನಿಸಲಿ, ಈ ಹಿಂದೆ ರಾಜ್ಯಕ್ಕೆ ಒಂದು ಹನಿ ನೀರನ್ನೂ  ಕೊಡಬೇಡಿ ಎಂದು ಹೇಳಿದ್ದಾರೆ ಎಂದು ಸಂಸದ  ಪ್ರಲ್ಹಾದ ಜೋಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment