ಸಿಹಿಗೆಣಸಿನ ಉಪಯೋಗ

 

ಅತಿ ಹೆಚ್ಚು ನಾರಿನಾಂಶ ಹೊಂದಿರುವ ತರಕಾರಿ ಸಿಹಿಗೆಣಸಿನಲ್ಲಿ ಫೈಬರ್ ಅಂಶ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಬಲೆಯ ರೂಪದಲ್ಲಿ ಜೆಲ್ ಉತ್ಪತಿಯಾಗುತ್ತದೆ. ಇದು ಬೇಗ ಹೊಟ್ಟೆ ತುಂಬಿದಂತೆ ಅನಿಸುತ್ತದೆ, ಬಹುಕಾಲ ಹಸಿವೆಯನ್ನು ತಡೆಯುತ್ತದೆ ಹಾಗೂ ಹೆಚ್ಚು ತಿನ್ನುವ ಅಭ್ಯಾಸವೂ ಕಡಿಮೆಯಾಗುತ್ತದೆ. ಮಲಬದ್ಧತೆಯನ್ನು ಶಮನ ಮಾಡುವ ಸಿಹಿಗೆಣಸು, ಒಳ್ಳೆಯ ಬ್ಯಾಕ್ಟಿರಿಯಾಗಳನ್ನು ಉತ್ಪತಿ ಮಾಡುತ್ತದೆ ಮತ್ತು ಅಸ್ಥಮಾ ಸಮಸ್ಯೆ ನಿವಾರಣೆಯಾಗುತ್ತದೆ.

ಸಿಹಿಗೆಣಸಿನಲ್ಲಿರುವ ಫೈಬರ್ ಅಂಶ ನಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆ, ಜೀರ್ಣಕ್ರಿಯೆ ಹಾಗೂ ತೂಕ ಇಳಿಕೆಯಲ್ಲೂ ಪರಿಣಾಮಕಾರಿ ಪಾತ್ರ ನಿರ್ವಹಿಸುತ್ತದೆ. ಶಕ್ತಿಯ ಮೂಲ ಕಾರ್ಬೊಹೈಡ್ರೇಟ್ಸ್ ಸಾಮಾನ್ಯವಾಗಿ ತೂಕ ಕಡಿಮೆ ಮಾಡಲು ಇಚ್ಚಿಸುವವರು ಕಾರ್ಬೊಹೈಡ್ರೇಟ್ಸ್ ಅಂಶವುಳ್ಳ ಆಹಾರಗಳ ಸೇವನೆಯನ್ನು ಕಡಿಮೆ ಮಾಡುತ್ತಾರೆ ಅಥವಾ ಸೇವಿಸುವುದೇ ಇಲ್ಲ. ಆದರೆ ನಿಮಗೆ ಗೊತ್ತೆ ಕಾರ್ಬೊಹೈಡ್ರೇಟ್ಸ್ ಅಂಶವನ್ನು ಹೊಂದಿರುವ ಸಿಹಿ ಗೆಣಸು ಸಹ ತೂಕ ಇಳಿಕೆಗೆ ಸಹಕಾರಿ.

ಸಿಹಿಗೆಣಸಿನಲ್ಲಿರುವ ಕಾರ್ಬೊಹೈಡ್ರೇಟ್ಸ್ ನೀವು ನಡೆದಾಡಲು, ಮೆಟ್ಟಿಲು ಹತ್ತಲು, ಶ್ರಮದಾಯಕ ಕೆಲಸಗಳನ್ನು ಮಾಡಲು ಶಕ್ತಿ ನೀಡುತ್ತದೆ. ನಿಮ್ಮ ದೇಹದಲ್ಲಿ ಅಗತ್ಯ ಪ್ರಮಾಣದ ಕಾರ್ಬೊಹೈಡ್ರೇಟ್ಸ್ ಇಲ್ಲವಾದಲ್ಲಿ ನೀವು ನಿರುತ್ಸಾಹಿಗಳಾಗಬಹುದು ಅಥವಾ ಅನಾರೋಗ್ಯದ ಸಮಸ್ಯೆ ಸಹ ಕಾಡಬಹುದು. ೩೦೦ ಗ್ರಾಂ ಸಿಹಿಗೆಣಸಿನಲ್ಲಿ ೫೮ಗ್ರಾಂ ಕಾರ್ಬೊಹೈಡ್ರೇಟ್ಸ್ ಅಂಶ ಇರುತ್ತದೆ. ಇದರಲ್ಲಿ ೮.೨೫ ಗ್ರಾಂ ಕಾಂಪ್ಲೆಕ್ಸ್ ಕಾರ್ಬ್ಸ (ಡಯಟ್ ಫೈಬರ್) ಆಗಿದೆ.
ಸಿಹಿ ಗೆಣಸಿನಲ್ಲಿ ಸಿಹಿ ಅಂಶ ಇದ್ದರೂ ಅದರ ಜಿಐ ಮಾತ್ರ ಕಡಿಮೆ ಇರುತ್ತದೆ. ಆದ್ದರಿಂದ ಮಧುಮೇಹದ ಯಾವುದೇ ಭಯವಿಲ್ಲದೆ ನೀವು ಹೆಚ್ಚಾಗಿ ಸಿಹಿಗೆಣಸನ್ನು ಸೇವಿಸಬಹುದು. ಹೆಚ್ಚು ನೀರಿನಂಶ ಉತ್ಪತಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತಿದ್ದಂತೆ ನಿಮ್ಮ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ದೇಹದ ನಿರ್ಜಲೀಕರಣಕ್ಕೆ ಸಿಹಿಗೆಣಸು ಎಷ್ಟು ಪರಿಣಾಮಕಾರಿ ಅಸ್ತ್ರವೆಂದರೆ, ಇದರೆ ಸೇವನೆಯ ಕೆಲವೇ ನಿಮಿಷಗಳಲ್ಲಿ ಜೀವಕೋಶಗಳಿಗೆ ನೀರಿನಾಂಶವನ್ನು ಪೂರೈಕೆ ಮಾಡುತ್ತದೆ ಹಾಗೂ ಚಯಾಪಚಯ ಕ್ರಿಯೆಯನ್ನು ತಕ್ಷಣವೇ ಆರಂಭಿಸುತ್ತದೆ. ದೇಹದಲ್ಲಿ ಅಗತ್ಯ ಪ್ರಮಾಣದ ನೀರಿನಂಶವನ್ನು ಪೂರೈಸುವ ಮೂಲಕ ಕೊಬ್ಬು, ಪಿಹೆಚ್ ಅನ್ನು ಸಮತೋಲನಗೊಳಿಸುತ್ತದೆ ಅಲ್ಲದೇ, ವಿಷಕಾರಿ ಅಂಶವನ್ನು ದೇಹದಿಂದ ಹೊರಹಾಕುತ್ತದೆ.

* ಸಿಹಿ ಗೆಣಸಿನಲ್ಲಿರುವ ಬೀಟಾ-ಕೆರೊಟಿನ್ ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಿಂದ ಕಾಪಾಡುತ್ತವೆ.
* ಇದರಲ್ಲಿರುವ ವಿಟಮಿನ್ ಸಿ ಜೀವಸತ್ವವು ಮೂಳೆ, ಹಲ್ಲಿನ ರಚನೆ, ಜೀರ್ಣಕ್ರಿಯೆ ಮತ್ತು ರಕ್ತ ಕಣ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
* ಇದರಲ್ಲಿ ಫೊಲಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿರುವುದರಿಂದ ಗರ್ಭಾವಧಿಯಲ್ಲಿ ಭ್ರೂಣದ ಕೋಶ ಮತ್ತು ಕೋಶಗಳ ಬೆಳವಣಿಗೆಗೆ ಸಹಕರಿಸುತ್ತದೆ.
* ಸಿಹಿ ಗೆಣಸಿನಲ್ಲಿ ಪೊಟ್ಯಾಸಿಯಮ್ ಉನ್ನತ ಮಟ್ಟದಲ್ಲಿರುತ್ತದೆ. ಇದು ಹೃದಯ ಬಡಿತವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ದೇಹದ ಸ್ನಾಯುಗಳು ಮತ್ತು ನರ ಕಾರ್ಯಗಳನ್ನು ಸುಲಭಗೊಳಿಸುತ್ತದೆ. * ಮ್ಯಾಂಗನೀಸ್ ಮತ್ತು ಕಬ್ಬಿಣಾಂಶಗಳು ಸಿಹಿಗೆಣಸಿನಲ್ಲಿ ಅಧಿಕವಾಗಿರುತ್ತವೆ. ಇವು ಋತುಚಕ್ರ ಪೂರ್ವ ಸಮಸ್ಯೆಗಳನ್ನು ನಿವಾರಿಸುತ್ತವೆ.

 

 

Leave a Comment