ಸಿಲ್ಕ್ ಇಂಡಿಯಾ ಪ್ರದರ್ಶನಕ್ಕೆ ಚಾಲನೆ

ಹುಬ್ಬಳ್ಳಿ,ಜು. 11- ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಗರದಲ್ಲಿ ಇಂದಿನಿಂದ ಆಯೋಜಿಸಿರುವ ಸಿಲ್ಕ್ ಇಂಡಿಯಾ-18 ರೇಷ್ಮೆ ಸೀರೆಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಹು-ಧಾ ಪಾಲಿಕೆ ಉಪಮೇಯರ್ ಮೇನಕಾ. ಜಿ. ಹುರಳಿ ಅವರು ದೀಪ ಬೆಳಗಿಸಿ ಪ್ರದರ್ಶನಕ್ಕೆ ಚಾಲನೆ ನೀಡಿದರು.
ನಗರದ ವಿಮಾನ ನಿಲ್ದಾಣ ನಿರ್ದೇಶಕಿ ಅಲಿಯಾ ಎಸ್.ಕೆ. ಪ್ರೇಮಾ ಹೂಗಾರ, ರೂಪಾ ಡಿ. ಕಟ್ಟಿ, ಈ ಸಂದರ್ಭದಲ್ಲಿದ್ದು ಸೀರೆ ಸೇರಿದಂತೆ ವಿವಿಧ ಬಟ್ಟೆಗಳನ್ನು ವಿಕ್ಷೀಸಿದರು.
ಇಂದಿನಿಂದ ದಿ. 16 ರವರೆಗೆ ನಗರದ ಗುರುಜರಾಥ ಭವನದಲ್ಲಿ ನಡೆಯುವ ಈ ಪ್ರದರ್ಶನದಲ್ಲಿ ರಾಜ್ಯ ಮಹಾರಾಷ್ಟ್ರ, ಬಿಹಾರ, ತಮಿಳನಾಡು, ಆಂಧ್ರಪ್ರದೇಶ ಸೇರಿದಂತೆ ಸುಮಾರು 18 ರಾಜ್ಯಗಳ ನೇಕಾರರು, ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳ ಪ್ರದರ್ಶನ ಮಾರಾಟ ನಡೆಯಲಿದೆ ಎಂದು ಮೇಳದ ಮ್ಯಾನೇಜರ ಮಂಜುಗೌಡ ತಿಳಿಸಿದರು.
ಒಟ್ಟು 50 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಖಾದಿ, ರೇಷ್ಮೆ ಸೀರೆ, ಕುರ್ತಾ ಸೇರಿದಂತೆ ಎಲ್ಲ ರೀತಿಯ ಡ್ರೇಸ್ ಮೆಟೇರಿಯಲ್ಸ್ ಗಳು ದೊರೆಯಲಿವೆ ಎಂದರು.
ನಿತ್ಯ ಬೆಳಿಗ್ಗೆ 10-30 ರಿಂದ ರಾತ್ರಿ 8.30ರವರೆಗೆ ಪ್ರದರ್ಶನ ವೇಳೆ ನಡೆಯಲಿದೆ. ನ್ಯಾಯಯುತ ಬೆಲೆಯಲ್ಲಿ ದೊರೆಯಲಿದ್ದು ಮೇಳದ ಸದುಪಯೋಗ ಪಡೆದುಕೊಳ್ಳಬೇಕೆಂದು ಮಂಜುಗೌಡ ಕೋರಿದ್ದಾರೆ.

Leave a Comment