‘ಸಿಲಿಕಾನ್ ಸಿಟಿ’

ಬೆಂಗಳೂರು ಸಿಲಿಕಾನ್ ಸಿಟಿ ಎಂದೇ ಪ್ರಸಿದ್ಧಿ ಪಡೆದ್ದು  ಈಗ ಅದೇ ಹೆಸರಿನ ‘ಸಿಲಿಕಾನ್ ಸಿಟಿ’ ಚಿತ್ರ ತೆರೆಗೆ ಬರುತ್ತಿದೆ. ತಮಿಳಿನ ‘ಮೆಟ್ರೋ’ ಚಿತ್ರದ ರಿಮೇಕ್‌ಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಮುರಳಿ ಗುರಪ್ಪ.

ಅನೂಪ್ ಸೀಳಿನ್ ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಅರಸು ಅಂತಾರೆ ಗೀತ ಸಾಹಿತ್ಯ ರಚಿಸಿದ್ದಾರೆ. ಎಂ ರವಿ, ಮಂಜುಳ ಸೋಮಶೇಖರ್, ಶ್ರೀನಗರ ಕಿಟ್ಟಿ ಹಾಗು ಸಿ ಆರ್ ಸುರೇಶ್ ಜೊತೆಯಾಗಿ ಚಿತ್ರ ನಿರ್ಮಾಣ ಮಾಡಿದ್ದಾರೆ.

ಆನಂದ ಕೃಷ್ಣನ್ ಕಥೆ, ಶ್ರೀನಿವಾಸ ರಾಮಯ್ಯ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವರದರಾಜ ಕಾಮತ್ ಕಲಾ ನಿರ್ದೇಶನ, ವಿಕ್ರಮ್ ಮೋರ್ ಸಾಹಸ, ಮದನ್-ಹರಿಣಿ ನೃತ್ಯ, ತಾರಾಗಣದಲ್ಲಿ ಶ್ರೀನಗರ ಕಿಟ್ಟಿ, ಸೂರಜ್ ಗೌಡ, ಕಾವ್ಯ ಶೆಟ್ಟಿ, ಏಕ್ತಾ ರಾಥೋಡ್, ಚಿಕ್ಕಣ್ಣ, ಅಶೋಕ್, ತುಳಸಿ, ಗಿರಿ, ಕಡ್ಡಿ ವಿಶ್ವ, ಸಿದ್ದು ಮುಂತಾದವರಿದ್ದಾರೆ.

Leave a Comment