ಸಿಲಿಕಾನ್ ಸಿಟಿ ಸಿದ್ದ

ಸಿಲಿಕಾನ್ ಸಿಟಿ’ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಯ ಸಿದ್ದತೆ ನಡೆಸಿದೆ,ಚಿತ್ರ ಬಿಡುಗಡೆಗೆ ದಿನಗಣನೆ ಆರಂಭಗೊಂಡ ಬೆನ್ನಲ್ಲೆ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಕಳೆದ ಶುಕ್ರವಾರ ಎರ್ಪಡಿಸಿಲಾಗಿತ್ತು.

ಪಂಚತಾರಾ ಹೊಟೇಲೊಂದರಲ್ಲಿ ನಡೆದ ಹಾಡುಗಳ ಬಿಡುಗಡೆಯಲ್ಲಿ  ಚಿತ್ರಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿರುವ ಮುರಳಿಗುರಪ್ಪ ಸಿನೆಮಾವನ್ನು ಬಣ್ಣಿಸುತ್ತಾ ಬೆಂಗಳೂರು ಹಿಂದೆ ತಂಪಾಗಿ, ಸದ್ದುಗದ್ದಲವಿಲ್ಲದೆ ಇತ್ತು. ಈಗ ಸಿಲಿಕಾನ್ ಸಿಟಿ ಎಂದು ಕರೆಸಿಕೊಂಡು ಸಾಕಷ್ಟು ಬದಲಾವಣೆ ಆಗಿದೆ.

ಸಿಲಿಕಾನ್ ಸಿಟಿ ನಡೆಯುವ ಘಟನೆಗಳನ್ನು ಆಯ್ಕೆಕೊಂಡು ಚಿತ್ರದ ಸನ್ನಿವೇಶಕ್ಕೆ ಬಳಸಲಾಗಿದೆ. ಮಧ್ಯಮ ವರ್ಗದ ಕುಟುಂಬದಲ್ಲಿ ಸಂಘರ್ಷದ ವಾತವರಣ ಬಂದಾಗ ಅದನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ.

ತಮಿಳಿನ ಮೆಟ್ರೋ ಸಿನಿಮಾವು ಚಿತ್ರಮಂದಿರಕ್ಕೆ ಬರುವ ಮುಂಚೆ ಹಕ್ಕುಗಳನ್ನು ಖರೀದಿ ಮಾಡಲಾಗಿ ಇಲ್ಲಿನ ನೇಟಿವಿಟಿಗೆ ತಕ್ಕಂತೆ ಚಿತ್ರೀಕರಿಸಲಾಗಿದೆ ಎಂದರು. ಹೆಚ್ಚು ದೃಶ್ಯಗಳು ರಾತ್ರಿ ವೇಳೆ ಇರುತ್ತದೆ. ಇದಕ್ಕಾಗಿ ಬೀದಿ ದೀಪದ ಬೆಳಕಿನಲ್ಲಿ  ಹ್ಯಾರಿಮಿನಿ ಕ್ಯಾಮಾರದಲ್ಲಿ ಚಿತ್ರೀಕರಿಸಲಾಗಿದೆ ಎನ್ನುತ್ತಾರೆ.

ಮಾರ್ಚ್ ೧೦ರಂದು ಆಡಿಯೋ ಬಿಡುಗಡೆ ಮಾಡಿ ಕೊನೆವಾರದಲ್ಲಿ ಪ್ರೇಕ್ಷಕರಿಗೆ ತೋರಿಸಲು ಯೋಜನೆ ಹಾಕಲಾಗಿದೆ ಚಿತ್ರವು ಎಲ್ಲರಿಗೂ ಇಷ್ಟವಾಗಲಿದೆ ಎಂದರು ನಿರ್ಮಾಪಕ ಎಂ.ರವಿ.  ಮಾನವೀಯ ಮೌಲ್ಯಗಳನ್ನು ತುಂಬಿಕೊಂಡಿರುವ ಮನೆಯಲ್ಲಿನ ಒಬ್ಬ  ಕೆಟ್ಟದಾರಿ ತುಳಿದಾಗ ಏನೇನು ಸಮಸ್ಯೆಗಳು ಉದ್ಬವವಾಗುತ್ತದೆ. ಇಂದಿನ ಯುವಶಕ್ತಿ ಯಾವ ದಾರಿಗೆ ಹೋಗುತ್ತಿದೆ. ಅಪರಾಧ ಚಟುವಟಿಕೆಗಳನ್ನು ಬಳಸಲಾಗಿದೆ.

ಬದುಕು ಅಂದರೆ ಹೀಗಿರಬೇಕು. ಹೀಗಾದರೆ ಏನಾಗುತ್ತೆ ಎಂಬುದನ್ನು ಸಂದೇಶದ ಮೂಲಕ ಹೇಳಲಾಗಿದೆ.  ಸಹ ನಿರ್ಮಾಪಕನಾಗಿ ನನ್ನ ಹೆಸರನ್ನು ಬಳಸಬೇಡಿ ಎಂದು ಕೇಳಿಕೊಂಡಿದ್ದೆ. ಆದರೂ ಅವರು ಪೋಸ್ಟರ್‌ನಲ್ಲಿ ಹಾಕಿದ್ದಾರೆ ಎಂದರು ನಾಯಕನಾಗಿ  ಜಾಹಿರಾತು ಕಂಪೆನಿಯ ವ್ಯವಸ್ಥಾಪಕರ ಪಾತ್ರ ಮಾಡಿರುವ ಶ್ರೀನಗರಕಿಟ್ಟಿ.

ತಪ್ಪು ದಾರಿಗೆ ಹೋಗುವ ಪಾತ್ರದಲ್ಲಿ ನಾಯಕನ ತಮ್ಮನಾಗಿ ಕಾಣಿಸಿಕೊಂಡಿದ್ದೇನೆ ಅಂತ ಪರಿಚಯ ಮಾಡಿಕೊಂಡರು ಸೂರಜ್. ನಾಯಕಿ ಕಾವ್ಯಶೆಟ್ಟಿಗೆ ಮಧ್ಯಮ ವರ್ಗದ ಹುಡುಗಿ ಪಾತ್ರವಂತೆ. ಒಂದು ವರ್ಷದ ನಂತರ ಅಭನಯಿಸುತ್ತಿದ್ದೇನೆ. ಹುಡುಗರನ್ನು ಕೆಟ್ಟ ಚಾಳಿಗೆ ಕರೆದುಕೊಂಡುವ ಪಾತ್ರ ಅಂತ ನಕ್ಕರು ಕಡ್ಡಿವಿಶ್ವ. ನಿರ್ಮಾಪಕರುಗಳಾದ ಮಂಜುಳಾಸೋಮಶೇಖರ್,ಸುರೇಶ್ ಮಾತನಾಡುವ ಗೋಜಿಗೆ ಹೋಗಲಿಲ್ಲ. ಕಲಾನಿರ್ದೇಶಕ ವರದರಾಜು, ಸಂಭಾಷಣೆ ಸುಮನ್‌ಜಾದುಗಾರ್ ಉಪಸ್ಥಿತರಿದ್ದರು.

Leave a Comment