ಸಿಲಿಕಾನ್ ಸಿಟಿ ಮಹಿಳೆಯರಿಗೆ ಸೀರೆಯೇ ಅಚ್ಚುಮೆಚ್ಚು

ಸೀರೆಯಲ್ಲಿ ಹುಡುಗಿಯರನ್ನ ನೋಡಲೇಬಾರದು… ನಿಲ್ಲಲ್ಲ ಟೆಂಪ್ರೇಚರ್…. ಎಂದು ಕಿಚ್ಚ ಸುದೀಪ್ ರ್‍ಯೊಮಾಟಿಕ್‌ಗೆ ಹಾಡಿದೇ ತಡ ಸಿಲಿಕಾನ್ ಸಿಟಿಯಲ್ಲಿ ಹೆಣ್‌ಹೈಕ್ಲು ಸೀರೆ ಉಡುವುದನ್ನು ಹೆಚ್ಚಾಗಿ ರೂಡಿಸಿಕೊಳ್ಳಲು ಶುರು ಮಾಡಿದ್ದಾರೆ.

ಹೌದು ದೇಶ-ವಿದೇಶದಿಂದ ಎಷ್ಟೆ ಉಡುಗೆ-ತೊಡುಗೆ ಬಂದರೂ ನಮ್ಮ ಕನ್ನಡದ ಹೆಣ್ಣುಮಕ್ಕಳು ಸೀರೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ ಎಂಬುದು ಮತ್ತೆ ಸಾಭೀತಾಗಿದೆ. ಸೌಂದರ್ಯ ಎನ್ನುವುದು ಫ್ಯಾಶನ್‌ನಿಂದ ಹೊರ ಹೋಗಲು ಸಾಧ್ಯವಿಲ್ಲ. ಈ ಸೌಂದರ್ಯ ಮತ್ತು ಫ್ಯಾಶನ್ ಒಂದಕ್ಕೊಂದು ಸಮ್ಮಿಳಿತವಾಗಿವೆ. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಂತಹ ಸೀರೆ ಅತ್ಯಂತ ಸುಂದರವಾದ ಉಡುಗೆ ಎನಿಸಿದೆ. ಇದು ಭಾರತೀಯ ನಾರಿಯರ ಪ್ರತೀಕವಾಗಿದೆ. ಈ ಮೂಲಕ ಸೀರೆ ಭಾರತೀಯ ಸಂಪ್ರದಾಯ ಮತ್ತು ಗುರುತಿನ ಸಂಕೇತವಾಗಿದೆ. ಭಾರತೀಯ ಮಹಿಳೆಯರು ಪಾಶ್ಚಾತ್ಯ ಉಡುಗೆಗಳಿಗೆ ಆಕರ್ಷಿತರಾದರೂ ಸೀರೆ ಅವರ ಅಚ್ಚುಮೆಚ್ಚಿನ ಉಡುಗೆಯಾಗಿದೆ. ಈ ಸೀರೆಯ ಪ್ರಖ್ಯಾತಿ ಹೇಗಿದೆಯೆಂದರೆ #SareeNotSorry,  #100SareePact ಎಂಬ ಅಭಿಯಾನಗಳೇ ನಡೆದಿವೆ. ಈ ಸೀರೆ ಎಂಬುದು ವಿಶೇಷ ಸಂದರ್ಭಗಳಲ್ಲಿ ಅತ್ಯಂತ ವೈಭವನ್ನು ತಂದುಕೊಡುತ್ತದೆ ಎಂದು ಕೆಲವರು ಸೀರೆ ಹಿಂದೆ ಬಿದ್ದರೇ, ಮತ್ತೆ ಕೆಲವರ ದೈನಂದಿನ ಉಡುಗೆಯಾಗಿದೆ.

saree3

ಇದೇ ಸೀರೆಗೆ ಯುವತಿಯರು, ಮಹಿಳೆಯರು ಮಾರುಹೋಗಿರುವುದು ಕಂಡು ಅನೇಕ ಸಮೀಕ್ಷೆಗಳು ನಡೆಸಿದ್ದಾಗ, ಕೇವಲ ಫ್ಲಿಪ್‌ಕಾರ್ಟ್‌ನಲ್ಲಿ ಅತಿ ಹೆಚ್ಚು ಸೀರೆಗಳನ್ನು ಬೆಂಗಳೂರಿನ ಮಹಿಳೆಯರು ಖರೀದಿರುವುದು ಬೆಳಕಿಗೆ ಬಂದಿದೆ.

ಇದೀಗ ಫ್ಲಿಪ್‌ಕಾರ್ಟ್ ದೇಶಾದ್ಯಂತ ಸೀರೆಗಳ ಶಾಪಿಂಗ್ ಪ್ರಕ್ರಿಯೆಯನ್ನು ತನ್ನ ಗ್ರಾಹಕರಿಗೆ ಮತ್ತಷ್ಟು ಸುಲಭ ಮಾಡಿದೆ. ೨೦೧೬ ರಿಂದ ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್ ಸೀರೆ ವಿಭಾಗವೊಂದರಲ್ಲೇ ಶೇ.೭೬ ರಷ್ಟು ಪ್ರಗತಿಯನ್ನು ಸಾಧಿಸಿದೆ. ಇಳಕಲ್ ಮತ್ತು ಮೊಳಕಾಲ್ಮೂರು ಸೀರೆಗೆಳು ಕನ್ನಡದ ಸಂಪ್ರದಾಯದ ವಿನ್ಯಾಸಗಳಿಗೆ ಹೆಸರುವಾಸಿಯಾಗಿವೆ. ಇದಲ್ಲದೇ, ಕರ್ನಾಟಕದ ಮಹಿಳೆಯರು ದೈನಂದಿನ ಸೀರೆಗಳು ಮತ್ತು ಬಾಲಿವುಡ್ ಸೀರೆಗಳ ವಿನ್ಯಾಸಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಕಾಂಜಿವರಂ ಮತ್ತು ಬನಾರಸಿ ಸೀರೆಗಳು ಅತ್ಯಂತ ಜನಪ್ರಿಯವಾಗಿದ್ದು, ಹೆಚ್ಚು ಮಾರಾಟವಾಗುತ್ತಿವೆ.

saree2

ಕಾಂಜೀವರಂ, ಬಾಂಧನಿ, ಚಾಂದೆರಿ, ಬನಾರಸಿ, ಕಲಾಂಕರಿ ಮತ್ತು ಮೈಸೂರು ರೇಷ್ಮೆ ಜನಪ್ರಿಯಗೊಂಡಿರುವ ಸೀರೆಯಾಗಿದ್ದು, ಇವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಐದು ವರ್ಷಗಳ ಹಿಂದೆ ನಾವು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಈ ಸೀರೆಗಳ ಮಾರಾಟವನ್ನು ಆರಂಭಿಸಿದ್ದೆವು ಮತ್ತು ಪ್ರತಿವರ್ಷ ಮಾರಾಟ ದ್ವಿಗುಣವಾಗುತ್ತಿದೆ. ಫ್ಲಿಪ್‌ಕಾರ್ಟ್ ೨,೦೦,೦೦೦ ಕ್ಕೂ ಅಧಿಕ ವಿನ್ಯಾಸಗಳ ಸೀರೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಸಂಪ್ರದಾಯಬದ್ಧವಾದ ವಿನ್ಯಾಸದಿಂದ ಆಧುನಿಕ ಶೈಲಿಯ ವಿನ್ಯಾಸದ ಸೀರೆಗಳನ್ನು ಪೂರೈಸುತ್ತಿದೆ ಎಂದು ಫ್ಲಿಪ್‌ಕಾರ್ಟ್ ಫ್ಯಾಶನ್‌ನ ಉಪಾಧ್ಯಕ್ಷ ದೇವ್ ಅಯ್ಯರ್ ಅವರು ತಿಳಿಸಿದ್ದಾರೆ.

ಸಿಲಿಕಾನ್ ಸಿಟಿಯರ ಸೀರೆ ಪ್ರೇಮ ಕಂಡ ಫ್ಲಿಪ್‌ಕಾರ್ಟ್ ಈ ಕೆಳಕಂಡ ಆಯ್ಕೆಗಳನ್ನು ಪರಿಚಯಿಸಿದೆ. ಕಾಕ್‌ಟೈಲ್ ಪಾರ್ಟಿಗೆ – ಪಿಂಕ್ ಪಾಲಿಕ್ರೀಪ್ ರಫೆಲ್ ಸೀರೆ. ಈ ಸೀರೆಯು ಅಲ್ಟ್ರಾ-ಚಿಕ್ ಪ್ಯಾಟರ್ನ್‌ನಿಂದ ಕೂಡಿದ್ದು, ಸ್ಟೈಲಿಶ್ ಆಗಿರುವ ಫಾಲ್ ಅನ್ನು ಹೊಂದುವ ಮೂಲಕ ಮಹಿಳೆಯರ ಅಂದವನ್ನು ಹೆಚ್ಚಿಸುತ್ತದೆ. ಇದು ಲೈಟ್-ವೇಯ್ಟ್ ಆಗಿದ್ದು, ವೀಕೆಂಡ್ ಕಾಕ್‌ಟೈಲ್ ಪಾರ್ಟಿಗೆ ಹೇಳಿ ಮಾಡಿಸಿದ ಸೀರೆಯಾಗಿದೆ.

ಮದುವೆ ಸೀರೆಗಳು- ಗ್ಲಾಮರಸ್ ಆಗಿರುವ ಬನಾರಸಿ ಸಿಲ್ಕ್ ಸೀರೆಗಳು ಮದುವೆ ಸಮಾರಂಭಗಳಿಗೆ ಹೇಳಿ ಮಾಡಿಸಿದಂತಿವೆ. ತುಂಬಾ ಆಕರ್ಷಕವಾಗಿ ಕಾಣುವ ಈ ಸೀರೆಗಳನ್ನು ಅತ್ಯುತ್ಕೃಷ್ಠವಾದ ಬಟ್ಟೆಯಿಂದ ತಯಾರಿಸಲಾಗಿದ್ದು, ಸಾಫ್ಟ್ ಆಗಿರಲಿವೆ. ಈ ಮೂಲಕ ನಿಮ್ಮನ್ನು ಗ್ಲಾಮರ್ ಆಗಿ ಕಾಣುವಂತೆ ಮಾಡಲಿವೆ.

saree1

ಚಾರ್ಮಿಂಗ್ ಸ್ಟೈಲ್- ಮೆರೂನ್ ರಾ ಸಿಲ್ಕ್ ಸೀರೆಗಳು ಪಾರ್ಟಿ ಲುಕ್ ಅನ್ನು ನೀಡುತ್ತವೆ. ಕಾಂಟ್ರಾಸ್ಟಿಂಗ್ ಬ್ಲೌಸ್‌ನೊಂದಿಗೆ ನಿಮ್ಮ ಅಂದವನ್ನು ಇಮ್ಮಡಿಗೊಳಿಸಲಿವೆ. ಸುಲಭವಾಗಿ ಧರಿಸಬಹುದಾದ ಸೀರೆಗಳಾಗಿದ್ದು, ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿವೆ.

ಕಚೇರಿ ಸೀರೆಗಳು- ಕಾಟನ್ ಸೀರೆಗಳು ಕಚೇರಿಗೆ ಹೇಳಿ ಮಾಡಿಸಿದಂತಿವೆ. ಆರಾಮದಾಯಕತೆಯಿಂದ ಕೂಡಿದ್ದು, ಪ್ರತಿದಿನ ಈ ಸೀರೆಗಳನ್ನು ತೊಡಬಹುದಾಗಿದೆ. ಪ್ರಿಂಟೆಡ್ ಕಾಟನ್ ಸೀರೆಗಳು ನಿಮ್ಮ ಕೆಲಸವನ್ನು ಉತ್ತಮಗೊಳಿಸಲು ಸಹಕಾರಿಯಾಗುತ್ತವೆ.

ಹಾಫ್ ಅಂಡ್ ಹಾಫ್ ಸ್ಟೈಲ್- ಹಾಫ್ ಅಂಡ್ ಹಾಫ್ ಸ್ಟೈಲ್ ವಿನ್ಯಾಸದ ಸೀರೆಗಳು ಇತ್ತೀಚಿನ ಟ್ರೆಂಡ್ ಆಗಿವೆ. ಸುಂದರವಾಗಿ ಕಾಣಿಸುವ ಈ ಸೀರೆಗಳು ಪಾಲಿಜಿಯೋರ್ಗೆಟ್‌ನಿಂದ ಕೂಡಿರುತ್ತವೆ. ಎಲ್ಲಾ ಸಂದರ್ಭಗಳಿಗೂ ಧರಿಸಲು ಸೂಕ್ತವಾದ ಸೀರೆಗಳು ಇವು.

Leave a Comment