ಸಿಲಿಂಡರ್ ಸ್ಫೋಟಕ್ಕೆ 18 ಸಾವು

 

ವರ್ರಿ (ನೂಜೀರಿಯಾ),ಸೆ.೧೧- ಕೇಂದ್ರ ನೈಜೀರಿಯಾದಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ ೧೮ ಮಂದಿ ಮೃತಪಟ್ಟಿದ್ದು, ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ನಸರ್ವಾ ರಾಜ್ಯದ ರಾಜಧಾನಿ ಲಫಿಯಾ ಬಳಿ ಇರುವ ಗ್ಯಾಸ್ ಡಿಪೋದಲ್ಲಿ ಇದ್ದಕ್ಕಿಂದ್ದಂತೆ ಸ್ಫೋಟವಾಯಿತು, ಹತ್ತಾರು ವಾಹನಗಳು ಬೆಂಕಿಗೆ ಆಹುತಿಯಾದವು. ಕೂಡಲೇ ಕೂಡಲೇ ತಾನು ಸೇರಿ ರಕ್ಷಣಾ ಕಾರ್ಯಕ್ಕೆ ಮುಂದಾದೆವು ಎಂದು ಪ್ರತ್ಯಕ್ಷದರ್ಶಿ ಟ್ಯಾಕ್ಸಿ ಚಾಲಕ ಯಾಕುಬ್ ಚಾರ್ಲ್ಸ್ ತಿಳಿಸಿದ್ದಾರೆ.
ನೈಜೀರಿಯಾ ಪೊಲೀಸ್ ಇಲಾಖೆ ಹಾಗೂ ರಸ್ತೆ ಸುರಕ್ಷತಾ ಪೊಲೀಸರು ಸ್ಫೋಟಗೊಂಡ ಬಗ್ಗೆ ಖಚಿತ ಮಾಹಿತಿ ನೀಡಿದ್ದು, ಆದರೆ ಮೃತರು, ಗಾಯಾಳುಗಳ ಬಗ್ಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಇದೊಂದು ಭೀಕರ ಸ್ಫೋಟ, ಸಂತ್ರಸ್ತರನ್ನು ಭೇಟಿ ಮಾಡಿದ್ದೇನೆ. ಮೃತರ ಕುಟುಂಬಗಳಿಗೆ ಅವರ ಅಗಲಿಕೆಯ ಶಕ್ತಿ ತುಂಬಲಿ ಎಂದು ನೈಜೀರಿಯಾ ಸೆನೆಟ್ ಅಧ್ಯಕ್ಷ ಬುಕೊಲಾ ಸರಕಿ ಸಂತಾಪ ಸೂಚಿಸಿದ್ದಾರೆ.
ಕಳೆದ ಜನವರಿಯಲ್ಲೂ ಲಗೋಸ್ ರಾಜ್ಯದಲ್ಲಿ ಸಂಭವಿಸಿದ ಸ್ಫೋಟಕ್ಕೆ ೧೦ ಮಂದಿ ಅಸುನೀಗಿದ್ದರು.

Leave a Comment