ಸಿರ್ವಿ ಸಮಾಜದ ವತಿಯಿಂದ ಸಂತಸ್ತರಿಗೆ ಆಹಾರ, ಬಟ್ಟೆ ವಿತರಣೆ

ನಂಜನಗೂಡು, ಆ.20- ಸಿರ್ವಿ ಸಮಾಜದ ವತಿಯಿಂದ ಗಂಜಿ ಕೇಂದ್ರಗಳಾದ ಗಿರಿಜಾ ಕಲ್ಯಾಣ ಮಂಟಪ, ಸೀತಾರಾಮ ಕಲ್ಯಾಣ ಮಂಟಪದಲ್ಲಿ ಉಳಿದುಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ಆಹಾರ, ಬಟ್ಟೆ ವಿತರಣೆ ಮಾಡಿದ್ದೇವೆ ಎಂದು ಸಮಾಜದ ಮುಖಂಡ ರಾಕೇಶ್ ತಿಳಿಸಿದ್ದಾರೆ.
ನಂತರ ಮಾತನಾಡಿದ ಅವರು ಕಪಿಲಾ ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾದ ಹಿನ್ನೆಲೆಯಲ್ಲಿ ತೋಪಿನ ಬೀದಿ, ಹಳ್ಳದಕೇರಿ, ಸರಸ್ವತಿ ಕಾಲೋನಿ ನಿವಾಸಿಗಳ ಮನೆಗಳು ನೀರಿನಿಂದ ಮುಳುಗಿಕೊಂಡ ಹಿನ್ನೆಲೆಯಲ್ಲಿ ಇವರ ಕುಟುಂಬಗಳನ್ನು ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು. ಇವರಿಗೆ ಸರ್ಕಾರದ ವತಿಯಿಂದ ಊಟ ವಸತಿಗಳನ್ನು ಮಾಡಿದ್ದಾರೆ. ಆದರೂ ಕೂಡ ನಮ್ಮ ಸಮಾಜದ ವತಿಯಿಂದ ಬಟ್ಟೆ, ಆಹಾರ ಪದಾರ್ಥಗಳನ್ನು ನೀಡಿದ್ದೇವೆ. ಜೊತೆಗೆ ಮುಂದೆಯೂ ಕೂಡ ಅವರಿಗೆ ಬೇಕಾದಂತ ಆಹಾರ ಔಷಧಿ ಬಟ್ಟೆಗಳನ್ನು ನೀಡುತ್ತೇವೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ತುಕಾರಾಮ್, ಗುಮ್ನರಾವ್, ಮಣಿ, ಮಲ್ಲರಾಮ್, ನವೀನ್, ರಾಕೇಶ್, ಸಂದೀಪ್, ಕೃಷ್ಣ ಸೈಕಲ್ ಶಾಪ್ ಸೇರಿದಂತೆ ಇತರರನ್ನು ಕಾಣಬಹುದು.

Leave a Comment