ಸಿರುಗುಪ್ಪ:ವಾಹನ ಪಲ್ಟಿ-7 ಜನರಿಗೆ ಗಾಯ

ಬಳ್ಳಾರಿ, ಡಿ.21: ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಹಿರೇಹಾಳು ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಲಗ್ಗೇಜ್ ಆಟೋ (ಮಿನಿಟೆಂಪೋ ಮಾದರಿ) ಒಂದು ಪಲ್ಟಿ ಹೊಡೆದ ಕಾರಣ ಏಳು ಜನರಿಗೆ ಗಾಯವಾದ ಘಟನೆ ನಡೆದಿದೆ.

ಸಿರುಗುಪ್ಪ ತಾಲ್ಲೂಕಿನ ಕೆ.ಬೆಳಗಲ್ಲು ಗ್ರಾಮದಿಂದ ಸಿರುಗುಪ್ಪ ನಗರಕ್ಕೆ ಆಟೋ ಬರುತ್ತಿದ್ದಾಗ ಹಿರೇಹಾಳು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ವಾಹನವು ಪಲ್ಟಿಯಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ 7 ಜನರಿಗೆ ಗಾಯಗಳಾಗಿವೆ.

ಅಪಘಾತದಲ್ಲಿ ಗಾಯಗೊಂಡವರನ್ನು ಸಿರುಗುಪ್ಪ ನಗರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಬಗ್ಗೆ ಸಿರುಗುಪ್ಪ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ವಿಷಯ ತಿಳಿಯುತ್ತಲೇ ಸಿರುಗುಪ್ಪ ಸರ್ಕಲ್ ಇನ್ಸ್ ಪೆಕ್ಟರ್, ಪಿಎಸ್ಐ ಮತ್ತು ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ನೆರವಿನ ಅಗತ್ಯ ಕ್ರಮಕೈಗೊಂಡರು. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Comment