ಸಿಯುಕೆಗೆ ಬಸವಣ್ಣನವರ ಹೆಸರಿಡಲು ಆಗ್ರಹ

 

ಕಲಬುರಗು ಅ 18: ಅಳಂದ ತಾಲೂಕಿನ ಕಡಗಂಚಿ ಬಳಿ ಇರುವ  ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ( ಸಿಯುಕೆ)ಕ್ಕೆ  ವಿಶ್ವಗುರು ಬಸವಣ್ಣನವರ ಹೆಸರಿಡುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಬರುವ ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿರುವ ಕಲಬುರಗಿ ವಿಮಾನ ನಿಲ್ದಾಣಕ್ಕೆ ಮಹಾದಾಸೋಹಿ ಶರಣಬಸವೇಶ್ವರರ ಹೆಸರಿಡಬೇಕು .ಬಸವಣ್ಣನವರಕರ್ಮಭೂಮಿಯಾದ ಈ ಭಾಗದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರಿಡುವದು ಸೂಕ್ತ.  ಅನುಭವ ಮಂಟಪಗಳನ್ನು ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಆರ್ ಜಿ ಶೆಟಗಾರ, ರಮೇಶ ದುತ್ತರಗಿ, ಹಣಮಂತರಾವ ಪಾಟೀಲ ಕುಸನೂರ, ಶಶಿಕಾಂತ ಪಸಾರ, ಬಸವಂತರಾವ ಏರಿ ಮತ್ತು ಅಶೋಕ ಘೂಳಿ ಉಪಸ್ಥಿತರಿದ್ದರು.

Leave a Comment