ಸಿಯಾತಲಾಬ್ ಸಂತ್ರಸ್ತರಿಗೆ ಕಿಟ್ ವಿತರಣೆ

ರಾಯಚೂರು.ಅ.09- ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಇತ್ತೀಚಿನ ಮಳೆ ತೊಂದರೆಗೆ ಸಿಲುಕಿದ 45 ಕುಟುಂಬಗಳಿಗೆ ಸ್ಟೀಲ್ ಕಿಚನ್ ಕಿಟ್‌ನ್ನು ನೀಡಲಾಯಿತು.
ವಿಜಯಕುಮಾರ ಪಾಟೀಲ್ ಶಾಂವತಗೇರಾ ಅವರ ನೇತೃತ್ವದಲ್ಲಿ ಇದನ್ನು ವಿತರಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಅತಾವುಲ್ಲಾ, ಎಸ್. ಮಹಿಬೂಬ್, ರಕ್ತದಾನ ಮತ್ತು ಪರಿಸರ ಜಿಲ್ಲಾ ಸಂಚಾಲಕರಾದ ಸಾಯಿ ಕಿರಣ್ ಆದೋನಿ, ರಾಜೇಂದ್ರಕುಮಾರ, ರಾಮಯ್ಯ ನಾಯಕ, ರಘುಸಿಂಗ್, ವೀರೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment