ಸಿಬ್ಬಂದಿ ಪರಿಶ್ರಮದಿಂದ ಬ್ಯಾಂಕ್ ಗೆ ಲಾಭ

ಬಾದಾಮಿ,ಸೆ.9-ಗ್ರಾಹಕರ ಸಹಕಾರ ಹಾಗೂ ಬ್ಯಾಂಕಿನ ಸಿಬ್ಬಂದಿಯ ಪರಿಶ್ರಮದಿಂದ ನಮ್ಮ ಬ್ಯಾಂಕಿಗೆ ಪ್ರಸಕ್ತ ವರ್ಷ ರೂ.199.82 ಲಕ್ಷ ರೂಪಾಯಿ ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ.ಕೆ.ಪಟ್ಟಣಶೆಟ್ಟಿ ಹೇಳಿದರು .
ಅವರು ಶನಿವಾರ ನಗರದ ವೀರಪುಲಿಕೇಶಿ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವೀರಪುಲಿಕೇಶಿ ಸಹಕಾರಿ ಬ್ಯಾಂಕಿನ 54 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ಬ್ಯಾಂಕ ಅಭಿವೃದ್ದಿ ಪಥದತ್ತ ಸಾಗಬೇಕಾದರೆ ಸಾಲ ತೆಗೆದುಕೊಂಡವರು ಸಕಾಲಕ್ಕೆ ಸಾಲ ಮರುಪಾವತಿ ಮಾಡಬೇಕು ಸಾಲ ಕೊಡಿಸಿದವರು ಸಹಕರಿಸಬೇಕು, ಬ್ಯಾಂಕ್ ನಿಮ್ಮದು ನಿಮ್ಮ ಬ್ಯಾಂಕ್ ಪ್ರಗತಿಹೊಂದಲು ಎಲ್ಲರೂ ಶ್ರಮಿಸಿ ಎಂದು ಹೇಳಿದರು. ಆದರೆ ನಗರದ ವೀರಪುಲಿಕೇಶಿ ಬ್ಯಾಂಕ್ ಕಳೆದ 54 ವರ್ಷಗಳಿಂದ  ಉತ್ತಮ ಸೇವೆ ಹಾಗೂ  ಗ್ರಾಹಕರ  ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಾ ಬಂದಿದೆ ಮುಂದಿನ ದಿನಮಾನಗಳಲ್ಲಿ ಎಟಿಎಂ, ರೂಪಯಾ ಕಾರ್ಡ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಬೆಳಗಾವಿಯ ಬ್ಯಾಂಕಿನ ಲೆಕ್ಕ ಪರಿಶೋಧಕ ಉಮೇಶ ಬೋಳಮಲ್ಲ ಮಾತನಾಡಿ ಬ್ಯಾಂಕಿನ ವಾರ್ಷಿಕ ವರದಿ ಹಾಗೂ ಅಢಾವೆ ಪತ್ರವನ್ನು ಪ್ರತಿ ವರ್ಷ ನೀಡುವುದು ನೀವು ಬ್ಯಾಂಕಿನ ಮಾಲಕರು, ನಿಮ್ಮ ಮಕ್ಕಳು ವರ್ಷಾನುಗಟ್ಟಲೇ ಶಾಲೆಯಲ್ಲಿ ಕಲಿತ ಬಗ್ಗೆ ಪ್ರಗತಿ ಪತ್ರದಂತೆ ಬ್ಯಾಂಕಿನವರು ತಮ್ಮ ವರ್ಷವುದ್ದಕ್ಕೂ ಏನು ಪ್ರಗತಿ ಸಾಧಿಸಿದ್ದಾರೆಂಬುದನ್ನು ನಿಮಗೆ ತಿಳಿಸು ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ, ನಿಮ್ಮ ಬ್ಯಾಂಕಿನ ಏಳ್ಗೆಗೆ ನೀವು ಶ್ರಮಿಸಿದರೆ ಬ್ಯಾಂಕ ಉತ್ತರೋತ್ತರವಾಗಿ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು
ಪ್ರಧಾನ ವ್ಯವಸ್ಥಾಪಕ ರುದ್ರಗೌಡಾ ಪಾಟೀಲ ಬ್ಯಾಂಕಿನ 54 ನೇ ವಾರ್ಷಿಕ ವರದಿಯನ್ನು ಮಂಡಿಸಿ, ನಮ್ಮ ಪುಲಿಕೇಶಿ ಬ್ಯಾಂಕ್ 50 ವರ್ಷ ಪೂರೈಸಿ 2018ರ ಫೆಬ್ರುವರಿ 1 ರಿಂದ 15 ವರೆಗೆ  ವಿಜ್ರಂಭನೆಯಿಂದ ವಿವಿಧ  ವೇದಿಕೆಯಲ್ಲಿ ವೀರಪುಲಿಕೇಶಿ ಸಂಸ್ಥೆಯ ಚೇರಮನ್ ಹಾಗೂ ಹಾಲಿ ನಿರ್ದೇಶಕ ಎ.ಸಿ.ಪಟ್ಟಣದ, ಡಿಸಿಸಿ ಬ್ಯಾಂಕ್ ನಿರ್ದೇಶಕ  ಕುಮಾರಗೌಡ ಜನಾಲಿ,  ನಿರ್ದೇಶಕರಾದ ಐ.ಕೆ.ಪಟ್ಟಣಶೆಟ್ಟಿ, ಎಂ.ಆರ್.ಖ್ಯಾಡದ, ಜಿ.ಎಚ್.ಘಟ್ಟದ, ವಿ.ಕೆ.ಬಾಗಲೆ, ಬಿ.ಎಂ.ಟೆಂಗಿನಕಾಯಿ, ಎಸ್.ಎಚ್.ಹಂಡಿ, ಎಸ್.ಬಿ.ಕೊಣ್ಣೂರ, ಎನ್.ಎಂ.ಗೌಡರ, ಡಿ.ಎಂ.ಪೈಲ್, ಬಿ.ಸಿ.ಹಿರೇಹಾಳ, ಎಂ.ಎಸ್.ಹಿರೇಹಾಳ, ಜೆ.ಬಿ.ಬೂದಿಹಾಳ,ಕಮಲವ್ವ ಜಿಗಬಡ್ಡಿ, ಕೆ.ಬಿ.ಬಂಗಾರಶೆಟ್ಟರ ಹಾಜರಿದ್ದರು. ಪ್ರಧಾನ ವ್ಯವಸ್ಥಾಪಕ ರುದ್ರಗೌಡ ಪಾಟೀಲ ಸ್ವಾಗತಿಸಿದರು. ಕಾರ್ಯಕ್ರಮವನ್ನು ಹುಚ್ಚಾಳ ಹಾಗೂ ಪಾಟೀಲ ನಿರೂಪಿಸಿದರು. ಎಂ.ಎಸ್.ಅಂಗಡಿ ವಂದಿಸಿದರು.
ಸನ್ಮಾನ; ಇದೇ ಸಂದರ್ಭದಲ್ಲಿ ಉತ್ತಮ ಗ್ರಾಹಕರನ್ನು, ಉತ್ತಮ ಅಂಕಗಳನ್ನು ಪಡೆದ  ಗ್ರಾಹಕರ ಮಕ್ಕಳನ್ನು ಹಾಗೂ ನಿವೃತಿ ಹೊಂದಿದ ಸಿಬ್ಬಂದಿಯನ್ನು ಸನ್ಮಾನಿಸಿದರು.

Leave a Comment