ಸಿಬಿಐಗೆ ಸಂಪೂರ್ಣ ಸ್ವಾತಂತ್ರ್ಯ ಅಗತ್ಯ; ಮಾಜಿ ಸಿಜೆಐ ಲೋಧ

ನವದೆಹಲಿ, ಜ ೧೨- ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕಾಗಿದೆ ಎಂದು ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ.ಎಂಲೋಧ ಪ್ರತಿಪಾದಿಸಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಅಲೋಕ್ ವರ್ಮಾ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ ಲೋಧಾ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ದೆಹಲಿಯಲ್ಲಿಂದು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳಿಂದ ಸಿಬಿಐಗೆ ಅವಮಾನವಾಗಿದೆ. ಸಿಬಿಐನಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರ ಮೂಗು ತೂರಿಸುವುದು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.
ಅಲೋಕ್ ವರ್ಮಾ ಅವರನ್ನು ನಿಷ್ಪ್ರಯೋಜಕ ಆರೋಪಗಳಿಗಾಗಿ ಅವರನ್ನು ವರ್ಗಾವಣೆ ಮಾಡಿರುವುದು ತಪ್ಪು ಎಂಬುದು ಸಾಬೀತಾಗಿದೆ ಎಂದು ಹೇಳಿದರು.
೧೯೭೪ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ವರ್ಮಾ ಅವರನ್ನು ಪ್ರಧಾನಿ ನರೇಂದ್ರ ಮೋದಿ, ನ್ಯಾಯಮೂರ್ತಿ ಎ,ಕೆ.ಸಿಕ್ರಿ ಮತ್ತು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ  ಅವರನ್ನೊಳಗೊಂಡ ಉನ್ನತ ಮಟ್ಟದ ಆಯ್ಕೆ ಸಮಿತಿ ವರ್ಮಾ ಅವರನ್ನು ಸಿಬಿಐ ಅಧ್ಯಕ್ಷಸ್ಥಾನದಿಂದ ವಜಾಗೊಳಿಸಿ ಅಗ್ನಿ ಶಾಮಕ ಸೇವೆ, ನಾಗರಿಕ ರಕ್ಷಣೆ ಮತ್ತು ಹೋರ್ಮ ಗಾರ್ಡ್‌ನ ಮಹಾನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿತ್ತು. ಆದರೆ ಈ ನೇಮಕವನ್ನು ತಿರಸ್ಕರಿಸಿ ರಾಜೀನಾಮೆ ಸಲ್ಲಿಸಿದ್ದರು.
ಕೇಂದ್ರ ಸರ್ಕಾರ ಈ ಕ್ರಮವನ್ನು ಪ್ತತಿಪಕ್ಷ ಕಾಂಗ್ರೆಸ್  ಸೇರಿದಂತೆ ಇತರ ರಾಜಯಕೀಪ ಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ.
ಅಲೋಕ್ ವರ್ಮಾ ಹಾಗೂ ರಾಕೇಶ್ ಅಸ್ತಾನಾ ನಡುವಿನ ಸಂಘರ್ಷ ಭುಗಿಲೆದ್ದು ಹಾದಿ-ಬೀದಿ ರಂಪವಾಗಿತ್ತು. ಕೇಂದ್ರ ಸರ್ಕಾರ ತಡರಾತ್ರಿ ಇಬ್ಬರನ್ನು ಬಲವಂತವಾಗಿ ರಜೆಯ ಮೇಲೆ ತೆರುಳುವಂತೆ ಆದೇಶ ಹೊರಡಿಸಿತ್ತು. ಇದು ಕೂಡ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Leave a Comment