ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದನೆ- ಸಚಿವ ಗೋಪಾಲಯ್ಯ

 

ಬೆಂಗಳೂರು, ಮೇ.6-ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು. ಬಡವರು ಮತ್ತು ದಿನಗೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಚಿತ್ರರಂಗ ಸ್ಥಗಿತಗೊಂಡಿದ್ದು ನಟನೆಯನ್ನೆ ಜೀವನಕ್ಕೆ ದಾರಿ ಮಾಡಿಕೊಂಡಿದ್ದ ಅನೇಕ ದಿನಗೂಲಿ ಸಿನಿ ಕಾರ್ಮಿಕರ ಕುಟುಂಬಗಳ ಪರಿಸ್ಥಿತಿ ದಿಕ್ಕು ತೋಚದಂತ್ತಾಗಿದೆ.
ಚಲನಚಿತ್ರ ಕಾರ್ಮಿಕರ ಸಂಘದಲ್ಲಿ, ಸಿನಿಮಾ ಕಾರ್ಮಿಕರಿಗೆ ಸಚಿವ ಕೆ ಗೋಪಾಲಯ್ಯ ಆಹಾರದ ಕಿಟ್ ಗಳನ್ನ ವಿತರಿಸಿದ್ದು ಲಾಕ್ ಡೌನ್ ವಿಸ್ತರಣೆಯ ಬಿಸಿ ತಟ್ಟದಂತೆ ನೋಡಿಕೊಂಡಿದ್ದಾರೆ.

ಈ ವೇಳೆ ಮಾತಾಡಿದ ಸಚಿವ ಗೋಪಾಲಯ್ಯ, ಅಂಬರೀಶ್ ಅಣ್ಣ ವಸತಿ ಸಚಿವರಾಗಿದ್ದಾಗ ನನ್ನನ್ನು ಕರೆದು ನಿನಗೆ ಏನು ಬೇಕು ಗೋಪಾಲಯ್ಯ ಅಂತ ಕೇಳಿದ್ರು. ಇವತ್ತು ಸುಮಲತ ಅಂಬರೀಶ್ ಅವರು ಮತ್ತು ರಾಕ್ ಲೈನ್ ವೆಂಕಟೇಶ್ ಮನವಿ ಮಾಡುತ್ತಿದ್ದಂತೆ ಚಿತ್ರರಂಗದ ಮಂದಿಗೆ ಕೈಲಾದಷ್ಟು ಸಹಾಯ ಮಾಡಿದ್ದೀನೆ ಎಂದರು.
ಸಂಸದೆ ಹಾಗು ಚಿತ್ರನಟಿ ಸುಮಲತ ಮಾತನಾಡಿ ಕಲಾವಿದರಿಗೆ ಕೊರೋನಾ ಲಾಕ್ ಡೌನ್ ಬಿಸಿ ತಟ್ಟಿರೋದು ನಿಜ. ಆದರೆ ಸರ್ಕಾರ ಮೊದಲಿನಿಂದಲೂ ನಮ್ಮ ಸಿನಿಮಾ ರಂಗಕ್ಕೆ ಸಹಾಯ ಮಾಡ್ತಿದೆ. ಅದರಂತೆ ಸಚಿವ ಗೋಪಾಲಯ್ಯ ಸಿನಿಮಾ ಕಾರ್ಮಿಕರಿಗೆ ಆಹಾದ ಕಿಟ್ ಗಳನ್ನ ನೀಡುತ್ತಿದ್ದಾರೆ ಅವರಿಗೆ ಅಬಾರಿ ಎಂದರು.

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಿನಿಮಾ ಕ್ಷೇತ್ರದಲ್ಲಿ ಕೆಲವರು ನಟನೆಯಿಂದ ಜೀವನ ನಡೆಸಿತ್ತಿದ್ದರು ಈಗ ಅವರಿಗೆ ಊಟಕ್ಕು ಕಷ್ಟವಾಗಿದೆ ಅನ್ನೋದನ್ನ ಗಮನಕ್ಕೆ ತಂದಿದ್ದರು . ಅದರಂತೆ ಮುಖ್ಯ ಮಂತ್ರಿಗಳ ಸೂಚನೆಯಂತೆ ಆಹಾರ ಮತ್ತು ನಾಗರಿಕ ಸಚಿವನಾಗಿ ಅವರ ಕಷ್ಟಕ್ಕೆ ಸ್ಪಂದಿಸಿ 800 ಕುಟುಂಬಕ್ಕೆ ಆಹಾರ ಕಿಟ್ ಗಳನ್ನ ವಿತರಣೆ ಮಾಡಲಾಗಿದೆ ಎಂದರು

Leave a Comment