ಸಿದ್ಧವಾಗುತ್ತಿದೆ ರಿಯಲ್ ಎಸ್ಟೇಟ್‌

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಿಯಲ್ ಎಸ್ಟೇಟ್‌ನಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಗಟ್ಟಲು ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ (ಆರ್‌ಇಆರ್‌ಎ) ಜಾರಿಗೆ ತಂದು ಕಡಿವಾಣ ಹಾಕಲು ಶ್ರಮಿಸುತ್ತಿದೆ. ಇದೀಗ ಸ್ಯಾಂಡಲ್‌ವುಡ್ ನಲ್ಲಿ ಭೂ ಮಾಫಿಯಾ ಕ್ಷೇತ್ರದಲ್ಲಿ ನಡೆಯುವ
ಅನೇಕ ಅವ್ಯವಹಾರಗಳನ್ನು ಆಧರಸಿ ಚಿತ್ರವೊಂದು ಸಿದ್ಧವಾಗುತ್ತಿದ್ದು, ರಿಯಲ್ ಎಸ್ಟೇಟ್ ಬಗ್ಗೆ ಭಾರಿ ಕುತೂಹಲಕಾರಿ ಅಂಶಗಳು ಚಿತ್ರದಲ್ಲಿದೆ ಎನ್ನ
ಲಾಗಿದೆ.

ರಿಯಲ್ ಎಸ್ಟೇಟ್ ಚಿತ್ರದಲ್ಲಿ ನಾಯಕ ಗುರುರಾಜ್ ಹಾಗೂ ನಾಯಕಿ ಸುಷ್ಮಾ ಅವರು ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆ ಇದೆ. ಹೊಸ ಆಲೋಚನೆಯೊಂದಿಗೆ ಹೊಸ ಕಥೆಯನ್ನು ಕನ್ನಡ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ಚಿತ್ರೀಕರಣ ಇದೇ ಗೌರಿ-ಗಣೇಶ ಹಬ್ಬಕ್ಕೆ ಶುರುವಾಗಲಿದ್ದು, ಹೊಸಬರ ಪ್ರಯತ್ನ ಅಭಿಮಾನಿಗಳ ಆರೈಕೆ ಅಗತ್ಯ.
ಎನ್.ರಾಮಕೃಷ್ಣಪ್ಪ, ನಿರ್ಮಾಪಕ

realesteteಈಗ  ರಿಯಲ್ ಎಸ್ಟೇಟ್‌ನಲ್ಲಿನ ಅವ್ಯವಹಾರಗಳು, ಸುಲಿಗೆ ಹತ್ಯೆ ಮುಂತಾದ ಅನಾಹುತಕಾರಿ ಸನ್ನಿವೇಶಗಳನ್ನು ಎಳೆಎಳೆಯಾಗಿ ತೆರೆಯ ಮೇಲೆ ತರಲು ಸಿನಿಮಾ ನಿರ್ಮಾಣಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಇದುವರೆಗೂ ಸ್ಯಾಂಡಲ್‌ವುಡ್ ನಲ್ಲಿ ತೆರೆಗೆ ಬಂದಿರುವ ಎಲ್ಲಾ ಚಿತ್ರಗಳಿಗಿಂತಲೂ ಭಿನ್ನವಾಗಿ ಈ ಚಿತ್ರ ತೆರೆಗೆ ತರಲು ಪ್ರಯತ್ನಗಳು ನಡೆಯುತ್ತಿವೆ.

ಪ್ರಮುಖವಾಗಿ ಭೂಮಾಫಿಯಾ ಚಿತ್ರಗಳನ್ನು ಬೇರೆ ಆಯಾಮದಲ್ಲಿ ಪ್ರೇಕ್ಷಕನ ಮುಂದಿಡಲು ನಿರ್ಮಾಪಕ ರಾಮಕೃಷ್ಣ ಇನ್ನಿಲ್ಲದ ಸಾಹಸಕ್ಕೆ ಮುಂದಾಗಿದ್ದಾರೆ.  ಚಿತ್ರದ ಶಿರ್ಷಕೆಯೇ ರಿಯಲ್ ಎಸ್ಟೇಟ್. ಅದರೆ ಈ ಹಿಂದಿನ ಚಿತ್ರಗಳಂತೆ ಮಾಮುಲಾಗಿ ರೌಡಿಗಳು  ಬಡವರನ್ನು ಹೆದರಿಸಿ, ಬೆದರಿಸಿ ಅವರ ಆಸ್ತಿಯನ್ನು  ಮುಟ್ಟುಗೋಲು ಹಾಕುತ್ತಾರೆ ಎಂಬುವುದರ ಬಗ್ಗೆ  ಕಥೆಯನ್ನು ಹೆಣೆದಿರುತ್ತಾರೆ ಅಷ್ಟೆ. ಆದರೆ ನಾವು ನಮ್ಮ ಚಿತ್ರದಲ್ಲಿ ಈ ರೀತಿಯ ರೌಡಿಸಂ ಅನ್ನು ತೋರಿಸಿಲ್ಲ. ರೌಡಿಸಂ ಇದೆ ಆದರೆ ಅದಕ್ಕಿಂತಲೂ ಹೆಚ್ಚಾಗಿ ಬಡವರಿಗೆ ಯಾವ ಯಾವ ತರಹದ ಮೋಸವಾಗಿತ್ತದೆ ಎಂದು ತೋರಿಸಲಾಗುತ್ತದೆ.

ಬಡವರ ಆಸ್ತಿಯ ಮೇಲೆ ಕೆಲ ಅಧಿಕಾರಿಗಳು ಹೇಗೆ ದಾಖಲೆಗಳನ್ನು ಸೃಷ್ಟಿಸಿ ವಂಚಿಸುತ್ತಾರೆ, ಜನ ತಮ್ಮ ಆಸ್ತಿಯನ್ನು ರಕ್ಷಿಸಿಕೊಳ್ಳಲು ಕಾನೂನಾತ್ಮಕ ಸಲಹೆಗಳನ್ನು ಚಿತ್ರದಲ್ಲಿ ಅಳವಡಿಸಲಾಗಿದೆ. ಮೋಸ ಹೋಗುವ ಜನತೆಗೆ ಉತ್ತಮ ಸಂದೇಶ ಸಲಹೆಗಳನ್ನು ಚಿತ್ರ ಒಳಗೊಂಡಿದೆ.
ಬಡವರ ಆಸ್ತಿಗಳ ನಕಲಿ ದಾಖಲೆಗಳನ್ನು ಹೇಗೆ ತಯಾರು ಮಾಡುತ್ತಾರೆ, ಬಲವಂತವಾಗಿ ಸಹಿ ಹಾಕಿಸುತ್ತಾರೆ, ಬಡವರ ಆಸ್ತಿಗಳ  ಸುಳ್ಳು ದಾಖಲೆಗಳನ್ನು ಕೋರ್ಟ್‌ಗೆ ನೀಡುತ್ತಾರೆ. ಈ ಎಲ್ಲಾ ಸಮಸ್ಯೆಗಳನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ.

ram1ಚಿತ್ರದ ನಾಯಕನ ಪಾತ್ರದಲ್ಲಿ ಗುರುರಾಜ್ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಚಿತ್ರದಲ್ಲಿ ಆರಂಭಿಕ ಭಾಗದಲ್ಲಿ ಹೀರೂ ಒಬ್ಬ ನಿಷ್ಪ್ರಯೋಜಕನಾಗಿ ಬಾಳುತ್ತಿರುತ್ತಾನೆ. ಆದರೆ ತಂದೆಗೆ ಆದ ಮೋಸ ಹಾಗೂ ಹತ್ಯೆಯನ್ನು ತಾಳಲಾರದೆ  ಆತ ಭೂಗತ ಜಗತ್ತಿನ ನಾಯಕ ನಾಗುತ್ತಾನೆ. ಅಲ್ಲಿಂದ ಅವನ ಕಥೆ ಆರಂಭವಾಗಲಿದೆ. ಚಿತ್ರದ ನಾಯಕಿಯಾಗಿ ಸುಷ್ಮಾ ರಾಜ್ ಆಯ್ಕೆಯಾಗಿದ್ದಾರೆ.

ನಿರ್ಮಾಪಕ ರಾಮಕೃಷ್ಣಪ್ಪ ಮಾತನಾಡಿ ಮುಖ್ಯವಾಗಿ ನಾನು ಕೂಡಾ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಸಮಾಜ ಸೇವಕ ಹಾಗೂ ಸಮಾಜದ ಹಿತಾಸಕ್ತಿಯನ್ನು ಬಯಸುವ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ.

ಇದು ಕೇವಲ ಸೀರಿಯಸ್ ಮೂವಿಯೆಂದು ಭಾವಿಸಬೇಡಿ. ಎಲ್ಲ ಅಂಶಗಳನ್ನು ಚಿತ್ರದಲ್ಲಿ ನವಿರಾಗಿ ಅಳವಡಿಸಲಾಗಿದೆ. ಇದರಲ್ಲಿ ಒಂದೂಳ್ಳೆ ಲವ್ ಸ್ಟೋರಿಯಿದೆ, ಕಾಮಿಡಿ ಇದೆ, ಓವರ್ ಆಲ್ ಇದೂಂದು ಫ್ಯಾಮಲಿ ಕೂತು ನೋಡಬಹುದಾದ ಸಿನಿಮಾ ಆಗಲಿದೆ. ಎಂದು ಹೇಳಿದ್ದಾರೆ. ಚಿತ್ರದ ಇನ್ನೂಳಿದ ಪಾತ್ರದ ಹುಡುಕಾಡದಲ್ಲಿ ಚಿತ್ರತಂಡ ನಿರತವಾಗಿದೆ.

Leave a Comment