ಸಿದ್ಧಗಂಗಾಶ್ರೀಗಳ ಹೆಸರಲ್ಲಿ ರಾಜಕಾರಣ ಸಲ್ಲದು.

ಕಲಬುರಗಿ ಸ13: ಸಿದ್ಧಗಂಗಾ  ಶ್ರೀಗಳನ್ನು ಮುಂದಿಟ್ಟು ಕೊಂಡು ರಾಜಕಾರಣ ಮಾಡುತ್ತಿರುವದು ಸರಿ ಅಲ್ಲ. ಎಂದು ಬೆಂಗಳೂರು  ಚನ್ನಬಸವೇಶ್ವರ ಜ್ಞಾನಪೀಠದ ಜಗದ್ಗುರು ಚನ್ನಬಸವಾನಂದ ಸ್ವಾಮಿಗಳು ಹೇಳಿದರು.
ನಗರದಲ್ಲಿಂದು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಎಂಬಿ ಪಾಟೀಲರು ಸುಳ್ಳು ಹೇಳಿಲ್ಲ. ಲಿಂಗಾಯತ ಮತ್ತು ವೀರಶೈವ ಯಾವುದೇ ಆಗಲಿ ಸಮಾಜಕ್ಕೆ ಒಳ್ಳೆಯದಾಗಲಿ ಎನ್ನುವ ಆಶಯ ಸಿದ್ಧಗಂಗಾ ಶ್ರೀಗಳದ್ದಾಗಿದ್ದು, ವೀರಶೈವ ಮಹಾಸಭಾ ಮತ್ತು ಎಲ್ಲ ರಾಜಕೀಯ ಮುಖಂಡರು ಲಿಂಗಾಯತ ಎಂಬ ಪದವನ್ನು ಒಪ್ಪಿಕೊಂಡು ಸಂವಿಧಾನದ ಮಾನ್ಯತೆಗಾಗಿ ಪ್ರಯತ್ನಿಸಿಬೇಕು .ಎಂದರು
24 ರಂದು ಕಲಬುರಗಿಯಲ್ಲಿ ನಡೆಯುವ ಲಿಂಗಾಯತ ಮಹಾರ್ಯಾಲಿಗೆ ಭರದ  ಪ್ರಚಾರ ಮತ್ತು ಸಿದ್ಧತೆ ನಡೆಯುತ್ತಿದ್ದು, ಸುಮಾರು 4 ರಿಂದ 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಇದು  ಮಠಾಧೀಶರ ಮತ್ತು ರಾಜಕೀಯ ವ್ಯಕ್ತಿಗಳ ಆಂದೋಲನವಾಗದೇ ಜನರ ಆಂದೋಲನವಾಗಿದೆ. ಎಂದರು
ಸುದ್ದಿಗೋಷ್ಠಿಯಲ್ಲಿ ಆರ್ ಜಿ ಶೆಟಗಾರ, ಪ್ರಭುದೇವ ಸೇರಿದಂತೆ ಹಲವರಿದ್ದರು

Leave a Comment