ಸಿದ್ದು ವಿರುದ್ದ  ಶ್ರೀರಾಮುಲು ಕಿಡಿ

ಬೆಂಗಳೂರು, ಆ. ೧೩- ಬಕ್ರೀದ್ ಔತಣಕೂಟದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಟ್ವೀಟರ್ ಮೂಲಕ ಗೇಲಿ ಮಾಡಿದ ಬೆನ್ನಲ್ಲೆ ಬಿರಿಯಾನಿ ಔತಣ ಕೂಟಕ್ಕೆ ಹೋಗುವುದಕ್ಕೆ ಆಗುತ್ತದೆ. ಬಾದಾಮಿ ಕ್ಷೇತ್ರಕ್ಕೆ ಬಂದು ಸಂತ್ರಸ್ಥರ ಅಹವಾಲು ಸ್ವೀಕರಿಸಲು ಆಗುವುದಿಲ್ಲವೆ ? ಎಂದು ಶಾಸಕ ಶ್ರೀರಾಮುಲು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಾದಾಮಿಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ಥರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾದಾಮಿ ಕ್ಷೇತ್ರದ ಮತದಾರರು ಸಿದ್ದರಾಮಯ್ಯ ಅವರಿಗೆ ಪುನರ್‌ಜನ್ಮ ಕೊಟ್ಟಿದ್ದಾರೆ. ಆದರೂ, ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಅಹವಾಲು ಕೇಳದಿರುವುದಕ್ಕೆ ಅಸಮಾಧಾನ ಹೊರ ಹಾಕಿದರು.
ಕಣ್ಣುಚಿಕಿತ್ಸೆಗೆ ಒಳಗಾಗಿರುವೆ ಎಂದು ಹೇಳಿ ದೆಹಲಿಗೆ ಹೋಗುವುದಕ್ಕೆ ಆಗುತ್ತದೆ. ಅಲ್ಲದೆ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಓಡಾಡುವುದಕ್ಕೆ ಆಗುತ್ತದೆ.
ಆದರೆ, ಬಾದಾಮಿ ಕ್ಷೇತ್ರಕ್ಕೆ ಬರುವುದಕ್ಕೆ ನಿಮಗೆ ಆಗುವುದಿಲ್ಲ ಎಂದು ಛೇಡಿಸಿದ್ದಾರೆ
ಆರೋಗ್ಯ ಸರಿಯಿಲ್ಲ ಎಂದು ಬೇರೆ ಕಡೆ ಓಡಾಡುವುದಕ್ಕೆ ನಿಮಗೆ ಆಗುತ್ತದೆ. ಆದರೆ, ಬಾದಾಮಿ ಕ್ಷೇತ್ರಕ್ಕೆ ಬರುವುದಕ್ಕೆ ನಿಮಗೇಕೆ ಆಗುವುದಿಲ್ಲ. ನಿಮ್ಮ ಪರವಾಗಿ ನಿಮ್ಮ ಪುತ್ರ ಯತೀಂದ್ರ ಅವರು ಬಂದಿದ್ದಾರೆ, ಸಂತೋಷಪಡುತ್ತಿದ್ದೆ ಎಂದು ಶ್ರೀರಾಮುಲು ಹೇಳಿದ್ದಾರೆ.
ನೆರೆಪೀಡಿತ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಅವರು ಪಕ್ಷಬೇಧ ಮರೆತು ನೆರೆ ಸಂತ್ರಸ್ಥರಿಗೆ ನೆರವಾಗಬೇಕೆಂದು ಅವರು ತಿಳಿಸಿದರು.

Leave a Comment