ಸಿದ್ದು ಬಳೆ ತೊಡುವುದೇ ಲೇಸು-ಶೋಭಕ್ಕಾ

ಹುಬ್ಬಳ್ಳಿ,ಮೇ 16- ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಶಕ್ತಿ ಇದ್ದರೆ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ, ಅದು ಸಾಧ್ಯವಾಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಲಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ನೇರವಾಗಿ ಗುಡುಗಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ, ಅವರನ್ನು ಸಮಾಧಾನಪಡಿಸುವ ಕೆಲಸ ಸಿದ್ಧರಾಮಯ್ಯನವರದು, ಅದಾಗದಿದ್ದರೆ ಬಳೆ ಹಾಕಿಕೊಳ್ಳೋದೇ ಸೂಕ್ತ ಎಂದು ನುಡಿದರು.
ಸಿದ್ಧರಾಮಯ್ಯ ಮತ್ತೆ ಸಿ.ಎಂ.ಆಗುವ ಕನಸು ಕಾಣುತ್ತಿದ್ದಾರೆ ಹೀಗಾಗಿ ತಮ್ಮನ್ನು ತಾವೇ ದೇವರಾಜ ಅರಸುಗೆ ಹೋಲಿಸಿಕೊಳ್ಳುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಇನ್ನು ಸಚಿವ ಡಿ.ಕೆ.ಶಿವಕುಮಾರ ಹೇಳಿದೆಡೆ ಕಮೀಷನ್ ಹಣದ ಚೀಲ ಹಿಡಿದುಕೊಂಡು ಹೋಗುತ್ತಾರೆ. ಹೀಗಾಗಿ ಅವರನ್ನು ಕುಂದಗೋಳ ಕ್ಷೇತ್ರದ ಉಸ್ತುವಾರಿಯನ್ನಾಗಿಸಲಾಗಿದೆ ಎಂದು ಕರಂದ್ಲಾಜೆ ಟೀಕಿಸಿದರು.

Leave a Comment