ಸಿದ್ದು ನಡೆಗೆ ಗೌಡರು ಗರಂ

ಬೆಂಗಳೂರು,ಸೆ.೧೪-ರಾಜ್ಯದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಸಿಡಿ ಮಿಡಿಗೊಂಡಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು,  ಅವರಿಗೆ ಕಡಿವಾಣ ಹಾಕಿ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಸಿದ್ದರಾಮಯ್ಯ ಸರಿ ಇದ್ದರೆ ಈಗೆಲ್ಲಾ ಆಗುತ್ತಿರಲಿಲ್ಲ ಅವರು ಸರಿ ಇಲ್ಲದಿದ್ದರೆ ಸಮ್ಮಿಶ್ರ ಸರ್ಕಾರಕ್ಕೆ ಉಳಿಗಾಲವಿಲ್ಲ ಮುಂದೆ ಈಗಾಗದಂತೆ ಎಚ್ಚರಿಕೆ ವಹಿಸಿ, ಸಿದ್ದರಾಮಯ್ಯ ಅವರಿಗೆ ಕಡಿವಾಣ ಹಾಕಿ ಇಲ್ಲದಿದ್ದರೆ ನಮಗೂ ಗೊತ್ತಿದೆ ಏನು ಮಾಡಬೇಕು ಎನ್ನುವುದು ಎಂದು ತಿಳಿಸಿದ್ದಾರೆ.

ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರೊಂದಿಗೆ ಮಾತಕತೆ ನಡೆಸಿರುವ ದೇವೇಗೌಡ ಅವರು,ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗಿನಿಂದ ಕಿರುಕುಳ ಮುಂದುವರಿದಿದೆ. ಹೀಗಾಗಿ ಮಧ್ಯಪ್ರವೇಶ ಮಾಡಿ  ಇಲ್ಲದಿದ್ದರೆ ನಮಗೂ ದಾರಿ ಗೊತ್ತಿದೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆ ನಿಮ್ಮಷ್ಟೇ ನಮಗೂ ಕೂಡ ಮುಖ್ಯವಾಗಿದೆ. ಮೇಲಾಟಗಳನ್ನ ನಿಲ್ಲಿಸದಿದ್ದರೇ ನಮಗೂ ದಾರಿ ಬದಲಿಸೋದಕ್ಕೆ ಬರುತ್ತದೆ ಎಂದಿದ್ದಾರೆ.

Leave a Comment