ಸಿದ್ದುಗೆ ತಿರುಗೇಟು ನೀಡಿದ ವಿಶ್ವ

ಮೈಸೂರು ಅ ೧೫- ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನರ್ಹ ಶಾಸಕ ತಿರುಗೇಟು ನೀಡಿದ್ದಾರೆ.
30 ಕಿ.ಮೀ ಗೊಂದು ಜಿಲ್ಲೆ ರಚನೆ ಮಾಡಲಾಗುತ್ತಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟಿರುವ ವಿಶ್ವನಾಥ್ ಅವರು ಇದು ಕಿ.ಮಿ. ಲೆಕ್ಕವಲ್ಲ, ಭೌಗೋಳಿಕ ಅಂಶವು ಅಲ್ಲ, ಸಿದ್ದರಾಮಯ್ಯ ಹೊಸ ಜಿಲ್ಲೆ ಬೇಡ ಎಂದು ಕಿ.ಮೀ. ಬಗ್ಗೆ ಹೇಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರ ಜಿಲ್ಲೆ ಆಗಿಲ್ಲವೇ, ಧಾರವಾಡ 3 ಜಿಲ್ಲೆಯಾಗಲಿಲ್ಲವೇ ಎಂದು ಪತ್ರಿಕಾ ಗೋಷ್ಠಿಯಲ್ಲಿ ಪ್ರಶ್ನಿಸಿದರು.
ನನ್ನ ಕ್ಷೇತ್ರದ ಬಗ್ಗೆ ಚರ್ಚೆ ಮಾಡಿದ್ದೇನೆ.
ನಾನು ಜನಾಭಿಪ್ರಾಯದ ಜೊತೆ ನಿಮ್ಮ ಬಳಿ ಬರುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಿಳಿಸಿದ್ದೇನೆ. ಇದು ಎಲೆಕ್ಷನ್ ಗಿಮಿಕ್ ಅಲ್ಲ ಒಂದೂವರೆ ವರ್ಷದಿಂದ ಈ ಪ್ರಸ್ತಾಪ ಮಾಡುತ್ತಿದ್ದೇನೆ ಎಂದಿದ್ದಾರೆ.

Leave a Comment