ಸಿದ್ದಾಪುರ ನೇಕಾರರ ಮನೆಗಳಲ್ಲಿ ಹೊಸ ಬೆಳಕು

ಬಾಗಲಕೋಟೆಯ ಸಿದ್ದಾಪುರ ಗ್ರಾಮದ ನೇಕಾರರ ಮನೆಗಳು ಇಂದು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ವಿದ್ಯುತ್ ಇಲ್ಲದೆ ಪರಿತಪಿಸುತ್ತಿದ್ದ ನೇಕಾರರ ಕಣ್ಣುಗಳಲ್ಲಿ ಹೊಸ ಬೆಳಕು ಮೂಡಿದೆ.

ಗ್ರಾಮೀಣ ಪ್ರದೇಶವಾದ ಸಿದ್ದಾಪುರ ಗ್ರಾಮ ವಿದ್ಯುತ್ ಇದ್ದರೂ ಇಲ್ಲದಂತಿತ್ತು. ನಿರಂತರ ಪವರ್ ಕಟ್ ನಿಂದಾಗಿ ಅಲ್ಲಿನ ನೇಕಾರರ ಬದುಕೇ ಅತಂತ್ರವಾಗಿತ್ತು.

ಬಟ್ಟೆ ನೇಯ್ಗೆ ಮಾಡಲು ನೇಕಾರರು ದಿನ ಗೂಲಿಯಾಗಿ ೬೦೦ ರೂಪಾಯಿ ಪಡೆಯುತ್ತಾರೆ. ಆದರೆ ನಿರಂತರ ವಿದ್ಯುತ್ ಕಡಿತದಿಂದಾಗಿ ಉತ್ಪಾದನೆ ಕುಂಠಿತವಾಗಿ ಆದಾಯದಲ್ಲೂ ಭಾರಿ ಇಳಿಕೆ ಕಂಡು ಜೀವನೋಪಾಯದ ಮೇಲೆ ಇನ್ನಿಲ್ಲದ ಹೊಡೆತ ಬಿದ್ದಿತ್ತು. ಸಿದ್ದಾಪುರದ ನೇಕಾರರ ಕಾಲೋನಿಯಲ್ಲಿರುವ ನೂರಕ್ಕೂ ಹೆಚ್ಚು ನೇಕಾರರು ಕುಗ್ಗಿ ಹೋಗಿದ್ದರು. ಸ್ಥಳೀಯ ಗ್ರಾಮ ಪಂಚಾಯತಿ ಮೊರೆ ಹೋದರೂ ನೇಕಾರರ ಸಂಕಷ್ಟ ಬಗೆ ಹರಿಯಲೇ ಇಲ್ಲ.

ಆಗ ನೇಕಾರರ ನೆರವಿಗೆ ಬಂದದ್ದು ಎಲೆಕ್ಟ್ರಾನಿಕ್ ಟೆಕ್ನಾಲಜಿ ವಲಯದ ಪ್ರಮುಖ ಕಂಪನಿ ಇವೊಲ್ಯೂಟ್ ಗ್ರೂಪ್ ಸಂಸ್ಥೆ. ಸಾಮಾಜಿಕ ಕಳಕಳಿ ಹೊತ್ತ ಸಂಸ್ಥೆ ನೇಕಾರರ ನೆರವಿಗೆ ಧಾವಿಸಿತು. ಸ್ಥಳೀಯ ಗ್ರಾಮ ಪಂಚಾಯಿತಿ ಮುಖ್ಯಸ್ಥರನ್ನು ಭೇಟಿ ಮಾಡಿ ಚರ್ಚೆ ನಡೆಸಿ ನೇಕಾರರ ಬದುಕಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿತು.

ನೇಕಾರರ ಸಂಕಷ್ಟ ಅರಿತ ಕಂಪನಿ ಸಿಬ್ಬಂದಿಗಳು ನೇಕಾರರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಪ್ರತಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ವಿಸೃತ ಯೋಜನೆಯನ್ನು ಸಿದ್ದಪಡಿಸಿದರು. ನೌಕರರ ಪ್ರತಿ ಮನೆಯಲ್ಲೂ ಈಗ ನಿರಂತರ ವಿದ್ಯುತ್ ಪ್ರವಹಿಸುತ್ತದೆ. ಸೌರ ಗೃಹ ಬೆಳಕಿನ ವ್ಯವಸ್ಥೆಯಿಂದಾಗಿ ಸಿದ್ದಾಪುರ ಗ್ರಾಮದ ನೇಕಾರರು ನಿಟ್ಟಿಸಿರು ಬಿಟ್ಟಿದ್ದಾರೆ.

ಸೌರ ಗೃಹ ಬೆಳಕಿನ “ವಿಟಿ” ವ್ಯವಸ್ಥೆಯನ್ನು ಪ್ರತಿ ಮನೆಯಲ್ಲೂ ಅಳವಡಿಸಲಾಗಿದೆ. ಇದರಿಂದ ನೇಕಾರರ ಜೀವನೋಪಾಯ ಸುಗಮವಾಗಿದೆ. ಆದಾಯ ಗಳಿಕೆಯು ಇಮ್ಮಡಿಯಾಗಿದೆ.

ಸಿದ್ದಾಪುರ ಗ್ರಾಮದಲ್ಲಿ ಮರು ಬಳಕೆ ಮಾಡಬಹುದಾದ ಇಂಧನವನ್ನು ಬಳಸಿದ್ದೇವೆ. ಅಲ್ಲಿನ ನೇಕಾರರ ಕುಟುಂಬದಲ್ಲಿ ನೆಮ್ಮದಿ ತಂದ ಖುಷಿ ತಮ್ಮದು ಎಂದು ಇವೊಲ್ಯೂಟ್ ಸಿಸ್ಟಮ್ ಪ್ರೈವೇಟ್‌ನ ಸ್ಥಾಪಕ ಪರಾಗ್ ಮೆಹ್ತಾ ಹೆಮ್ಮೆಯಿಂದ ಹೇಳುತ್ತಾರೆ.

ಇಂದು-ಸಿದ್ದಾಪುರ ಗ್ರಾಮದ ನೇಕಾರರು ವಿದ್ಯುತ್‌ಗಾಗಿ ಪರಿತಪಿಸುವುದಿಲ್ಲ. ಸೌರ ಬೆಳಕಿನ ವಿದ್ಯುತ್ ಇವರ ಮನೆಗಳಲ್ಲಿ ಸದಾ ಬೆಳಗುತ್ತಿರುತ್ತದೆ.
ಶುದ್ಧ ಇಂಧನಕ್ಕೆ ಒಗ್ಗಿಕೊಂಡಿರುವ ನೇಕಾರರು ಈಗ ಯಾವುದೇ ಆತಂಕ ಆಳುಕು ಇಲ್ಲದೆ ಉದ್ಯಮದೊಂದಿಗೆ ಬೆರೆತು ಹೋಗಿದ್ದಾರೆ.

ವಿದ್ಯುತ್ ಬವಣೆ ನೀಗಿಸಲು ಸದಾ ಗ್ರಾಮ ಪಂಚಾಯತಿ ಮೆಟ್ಟಿಲು ಹತ್ತುವುದು ತಪ್ಪಿದಂತಾಗಿದೆ. ತಮ್ಮ ಹಳ್ಳಿಗೆ ಸೌರ ವಿದ್ಯುತ್ ಒದಗಿಸಿದ ಸಂಸ್ಥೆಗೆ ಸದಾ ಕೃತಜ್ಞತೆ ಸಲ್ಲಿಸುತ್ತೇವೆ. ಈಗ ಹಿಂದೆಂದಿಗಿಂತಲೂ ಸಹಗಳಿಕೆ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

Leave a Comment