ಸಿದ್ದರಾಮಯ್ಯ ಹುಟ್ಟುಹಬ್ಬ – ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಪಾಂಡವಪುರ:ಆ:13- ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ 70ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದಲ್ಲಿ ಕುರುಬ ಸಮುದಾಯದ ಮುಖಂಡರು ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿದರು.
ತಾಲೂಕು ಕುರುಬರ ಸಂಘ, ಕನಕಯುವ ಬಳಗ, ಹಾಲುಮತ ಮಹಾಸಭಾ, ಸಿದ್ದರಾಮಯ್ಯ ಅಭಿಮಾನಿ ಬಳಗ ಕಾರ್ಯಕರ್ತರು ಪಟ್ಟಣದ ಐದು ದೀಪವೃತ್ತದಲ್ಲಿ ಜಮಾಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡುವ ಮೂಲಕ ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ ಮಾಡಿದರು.
ನಂತರ ತಾ.ಕುರುಬರ ಸಂಘದ ಅಧ್ಯಕ್ಷ ಡಿ.ಹುಚ್ಚೇಗೌಡ ಮಾತನಾಡಿದ, ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿ ನಾಲ್ಕು ವರ್ಷಗಳ ಕಾಲ ಭ್ರಷ್ಟಾಚಾರ ರಹಿತವಾದ ಉತ್ತಮವಾದ ಆಡಳಿತ ನಡೆಸುವ ಮೂಲಕ ದೇಶದಲ್ಲಿ ಉತ್ತಮ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಅವರು ರಾಜ್ಯದ ಜನತೆಗೆ ಕೊಟ್ಟಂತಹ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹತ್ತಾರು ಯೋಜನೆಗಳು ಜನಮೆಚ್ಚಿಗೆ ಪಡೆದಿವೆ. ಇಂತಹ ವ್ಯಕ್ತಿತ್ವ ಹೊಂದಿರುವ ಸಿದ್ದರಾಮಯ್ಯನವರು ಮುಂದಿನಯೂ ಸಹ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ಮೂಲಕ ರಾಜ್ಯದ ಜನತೆಗೆ ಮತ್ತಷ್ಟು ಕೊಡುಗೆ ನೀಡಬೇಕು ಎಂದು ಶುಭಹಾರೈಸಿದರು.
ಸಂದರ್ಭದಲ್ಲಿ ಕುರುಬ ಸಮುದಾಯ ತಾಪಂ ಸದಸ್ಯ ನವೀನ್, ಮಾಜಿ ಅಧ್ಯಕ್ಷ ಮಾಳಿಗೇಗೌಡ, ಪುರಸಭೆ ಸದಸ್ಯ ಬಂಕ್ ಶ್ರೀನಿವಾಸ್, ಮುಖಂಡರಾದ ಬಿ.ಟಿ.ಶಿವಣ್ಣ, ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್, ಚಿಕ್ಕಣ್ಣ, ಲೋಕೇಶ್, ಪಾಲಾಕ್ಷ, ಧನುಶ್‍ಕೋಟಿ, ಕಿಟ್ಟಿ, ದೇವರಾಜು ಸೇರಿದಂತೆ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಬನ್ನಂಗಾಡಿಯಲ್ಲೂ ಆಚರಣೆ: ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲೂ ಗ್ರಾಮದ ಕನಕಯುವ ಸೇವಾ ಸಮಿತಿ ವತಿಯಿಂದ ಸಿದ್ದರಾಮಯ್ಯನವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು. ಗ್ರಾಮದ ಸರ್ಕಲ್‍ನಲ್ಲಿ ಸಿದ್ದರಾಮಯ್ಯನವರ ಭಾವಚಿತ್ರದ ಮುಂದೆ ಕೇಕ್‍ಕತ್ತರಿಸಿ ಸಂಭ್ರಮದಿಂದ ಹುಟ್ಟುಹಬ್ಬ ಆಚರಣೆ ಮಾಡಿದರು.

Leave a Comment