ಸಿದ್ದರಾಮಯ್ಯ ರಾಜಕೀಯ ಅಂತ್ಯ ಶೀಘ್ರ

ಶಿವಮೊಗ್ಗ.ಏ.16- ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಇದರಿಂದ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ಎಷ್ಟು ಗುಂಪು ಇದೆ ಎಂಬುದು ಬಹಿರಂಗವಾಗಿದೆ ಎಂದು ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಹಾಗೂ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿಗಳ ಪ್ರಾಬಲ್ಯದಿಂದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸೀಮಿತವಾಗಿದೆ. ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರನ್ನು ಸಿದ್ದರಾಮಯ್ಯ ಸೋಲಿಸಿದ್ದರು. ಇದರ ಸೇಡನ್ನು ತೀರಿಸಿಕೊಳ್ಳಲು ಪರಮೇಶ್ವರ ಮತ್ತು ಖರ್ಗೆ ಸೋಲಿಸಿಯೇ ತೀರುತ್ತಾರೆ. ವಿಷದ ಬೀಜ ನೆಟ್ಟು ಒಳ್ಳೆಯ ಫಲ ನೀರಿಕ್ಷೆ ಮಾಡಲು ಸಾಧ್ಯವಿಲ್ಲ. ಅದರ ಫಲ ಸಿಎಂ ಸಿದ್ದರಾಮಯ್ಯ ಅನುಭವಿಸಲೇಬೇಕು.ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವ ಇಲ್ಲ ಎಂದು ಸಿದ್ದರಾಮಯ್ಯರನ್ನು ಕರೆದುಕೊಂಡು ಬಂದು ವಿಪಕ್ಷ ನಾಯಕ ಮಾಡಿದ್ದರು. ಈ ಚುನಾವಣೆಯಲ್ಲಿ ಸಿದ್ದರಾಮಯ್ಯರ ರಾಜಕೀಯ ಅಂತ್ಯವಾಗುತ್ತೆ. ಕಾಂಗ್ರೆಸ್ ನಿರ್ನಾಮ ಆಗುತ್ತೆ. ಕಾಂಗ್ರೆಸ್ ಮುಕ್ತ ಭಾರತಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿನ ಮುಖಾಂತರ ಮಹಾತ್ಮಗಾಂಧಿಯವರ ಕನಸು ನನಸಾಗುತ್ತದೆ. ಬಿಜೆಪಿ ಪಟ್ಟಿ ಬಿಡುಗಡೆಯಾದಾಗ ಇದ್ದ ಅತೃಪ್ತಿ ಶಮನ ಮಾಡಿದ್ದೇವೆ. ಇಂದು ಸಂಜೆಯೊಳಗೆ ಮತ್ತೊಂದು ಪಟ್ಟಿ ಬಿಡುಗಡೆ ಆಗುತ್ತವೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ
ಇಂದು ಬೆಳಿಗ್ಗೆ ಓಂಶಕ್ತಿ ದೇವಸ್ಥಾನದಲ್ಲಿ ಭಕ್ತರು ನನಗೆ ಚುನಾವಣಾ ನಿಧಿ ಸಂಗ್ರಹ ಮಾಡಿ ಕೊಟ್ಟಿದ್ದಾರೆ
5 ರೂ, 10 ರೂ ಕೈಯಲ್ಲಿ ಇದ್ದಷ್ಡು ಸಂಗ್ರಹ ಮಾಡಿ ಕೊಟ್ಟಿದ್ದಾರೆ. ರಾಜ್ಯದಲ್ಲಿ ಇರುವಂತೆ ಶಿವಮೊಗ್ಗ ಜಿಲ್ಲೆಯಲ್ಲೂ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಗೊಂದಲದ ಗೂಡಾಗಿದ್ದು, ಬಿಜೆಪಿ ಗೆಲ್ಲಲು ಸಹಕಾರಿ ಯಾಗಿದೆ. ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಬಿಜೆಪಿ ಪಕ್ಷದ ನಾಯಕರನ್ನು ಟೀಕಿಸಿದ್ದೆ ಸಾಧನೆ. ಶಿಕಾರಿಪುರ ಮಾತ್ರ ಅಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ನೋಡಿದರೆ ಸೋಲನ್ನು ಒಪ್ಪಿಕೊಂಡಾಗಿದೆ .ಶಿವಮೊಗ್ಗ ನಗರದ 35 ವಾರ್ಡ್ ಗಳಲ್ಲಿನ ದೇವಾಲಯಗಳಿಗೆ ನಾಳೆ ಮತ್ತು ನಾಡಿದ್ದು ಭೇಟಿನೀಡಿ ಪೂಜೆಸಲ್ಲಿಸಿ ನಂತರ ಏ.19 ರಂದು ಬೆಳಗ್ಗೆ 11.30 ಕ್ಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ ಎಂದರು.

Leave a Comment