ಸಿದ್ದರಾಮಯ್ಯ ಏಕಾಂಗಿಯಲ್ಲ, ಬಿ.ಎಸ್.ವೈ

ಕೊಪ್ಪಳ : ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಏಕಾಂಗಿಯಲ್ಲ, ಅವರ ಹಿಂದೆ ಕಾಂಗ್ರೆಸ್ ಸೈನ್ಯವೇ ಇದೆ. ಆದರೆ, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದರೂ ಅವರು ಏಕಾಂಗಿ ಆಗಿರುವುದನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಬಿ.ಎಸ್.ವೈ ಕಾಲೆಳೆದಿದ್ದಾರೆ.

ಇಂದು ಮುನಿರಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ತಂಗಡಗಿ, ಬಿಜೆಪಿಯಲ್ಲಿ ಯಡಿಯೂರಪ್ಪ ಏಕಾಂಗಿಯಾಗಿದ್ದಾರೆ, ತಾವು ಏಕಾಂಗಿ ಅಲ್ಲ ಅನ್ನೋದನ್ನ ತೋರಿಸದೆ ಸಿದ್ದರಾಮಯ್ಯರನ್ನು ಯಡಿಯೂರಪ್ ಬೊಟ್ಟು ಮಾಡುತ್ತಿದ್ದಾರೆಂದು ಆರೋಪಿಸಿದರು.

ಇದೇ ವೇಳೆ, ಸಿದ್ದರಾಮಯ್ಯ ರಾಜೀನಾಮೆ ನೀಡಿ ನನ್ನ ವಿರುದ್ದ ಸ್ಪರ್ಧೆ‌ ಮಾಡಲಿ ಎಂಬ ಶ್ರೀರಾಮಲು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವರಾಜ್ ತಂಗಡಗಿ, ಸಿದ್ದರಾಮಯ್ಯ ದೊಡ್ಡ ನಾಯಕರು. ತತ್ವ ಸಿದ್ದಾಂತದ ರಾಜಕಾರಣ ಮಾಡಿದವರು. ಶ್ರೀರಾಮುಲು ಜೋಶ್‌ನಲ್ಲಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಮುಂದೆ ಯಾರನ್ನೂ ಹೋಲಿಕೆ ಮಾಡಲಾಗುವುದಿಲ್ಲ ಎಂದರು. ಅಲ್ಲದೇ, ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಮತದಾರರು ಬುದ್ದಿ ಕಲಿಸುತ್ತಾರೆ. ಅನರ್ಹರು,ಅನರ್ಹರಾಗಿಯೇ ಉಳಿಯುತ್ತಾರೆ ಎಂದು ಕಿಡಿಕಾರಿದರು…

Leave a Comment