ಸಿದ್ದರಬೆಟ್ಟ ಶ್ರೀಗಳ ಅವಹೇಳನ: ಕ್ರಮಕ್ಕೆ ಒತ್ತಾಯ

ಪಾವಗಡ, ಮೇ ೨೩- ಕೊರಟಗೆರೆ ತಾಲ್ಲೂಕಿನ ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಕುರಿತು ಅವಹೇಳನಕಾರಿ ವರದಿ ಮಾಡಿದೆ ಎಂದು ತುಮಕೂರು ಸಿಂಹ ಪತ್ರಿಕೆ ಸಂಪಾದಕರ ವಿರುದ್ದ ಕಾನೂನು ಕ್ರಮಕ್ಕೆ ತಹಶೀಲ್ದಾರ್ ರವರಿಗೆ ತಾಲ್ಲೂಕು ವೀರಶೈವ ಲಿಂಗಾಯತ ಸಮಾಜದ ಬಾಂಧವರು ಮನವಿ ಸಲ್ಲಿಸಿದರು.
ಪತ್ರಿಕೆಯಲ್ಲಿ ಬಂದಿರುವ ವರದಿ ಸತ್ಯಕ್ಕೆ ದೂರವಾದುದು. ಇದರಲ್ಲಿ ಕಾಣದ ಕೈಗಳ ಕೈವಾಡವಿದೆ. ಎಲ್ಲಿಂದಲ್ಲೋ ಬಂದು ಇಲ್ಲಿನ ಕ್ಷೇತ್ರ ಹಾಗೂ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸುತ್ತಿದ್ದಾರೆಂದು ಇವರ ಹೆಸರು ಕೆಡಿಸಲು ಈ ಕೆಲಸ ಮಾಡಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಅಂತರಗಂಗೆ ಶಂಕರಪ್ಪ, ರಾಜೇಂದ್ರ, ಮಧುಸೂಧನ್, ವಾಗೀಶ್, ಆರಾಧ್ಯ, ರೇಣುಕಾಪ್ರಸಾದ್, ತಿಪ್ಪೇರುದ್ರಪ್ಪ, ನಾಗರಾಜ್, ಕಾರ್ತಿಕ್, ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Comment