ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಸಿಗಲಿದೆ : ಲಕ್ಷ್ಮಣ್ ಸವದಿ

 

ಕೊಪ್ಪಳ,ಅ 21- ಮುಂದಿನ ದಿನಗಳಲ್ಲಿ ಲಿಂಗೈಕ್ಯ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಗಳಿಗೆ ಭಾರತ ರತ್ನ ಪ್ರಶಸ್ತಿ ಸಿಗಲಿದೆ. ಈ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿ ದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಸ್ತುತ ಸಾವರ್ಕರ್ ಭಾರತ ರತ್ನ ನೀಡುವ ವಿಚಾರ ಚರ್ಚೆಯಲ್ಲಿದೆ.ಸಾವರ್ಕರ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಜೀವನ ಮುಡಿಪಾಗಿಟ್ಟು ಹೋರಾಡಿದ್ದಾರೆ. ಜೈಲುವಾಸ ಅನುಭವಿಸಿದ್ದಾರೆ.ಅಂಥವರನ್ನ ಹೀಯಾಳಿಸಿದರೆ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದಂತೆಯೇ ಸರಿ.ಸಿದ್ದಗಂಗಾ ಶ್ರೀಗಳಿಗೂ ಭಾರತ ರತ್ನ ಬರುತ್ತದೆ. ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಅವರು ತಿಳಿಸಿದರು.

ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ.ಕರ್ನಾಟಕ ದಲ್ಲಿ ಅರ್ಥಿಕ ಪರಿಸ್ಥಿತಿ ಉತ್ತಮವಾಗಿದೆ .ಯಾವುದೇ ಯೋಜನೆಗಳಿಗೆ ಹಣಕಾಸಿನ ತೊಂದರೆ ಇಲ್ಲ.ಸದ್ಯ ನೆರೆಹಾವಳಿ ಬಾರದಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ. ನೆರೆಹಾವಳಿ ಮತ್ತೆ ಬಂದರೆ ಸರ್ಕಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.

ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಹೆಚ್ಚಿನ ಬಹುಮತದಲ್ಲಿ ಬರುತ್ತದೆ.273 ಸ್ಥಾನಗಳಲ್ಲಿ ಬಿಜೆಪಿ ಮತ್ತು ಮೈತ್ರಿ ಪಕ್ಷ ಗೆಲ್ಲುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅನರ್ಹ ಶಾಸಕರು ಇನ್ನೂ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ಅವರ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ. ಅಂತಿಮ ತೀರ್ಪು ಬಂದ ಬಳಿಕ ಅವರು ಪಕ್ಷಕ್ಕೆ ಸೇರಿದ ಬಳಿಕ‌ ಉಪ ಚುನಾ ವಣೆಯಲ್ಲಿ ಸ್ಪರ್ಧಿಸುವ ಕುರಿತು ಚಿಂತಿಸಬೇಕು. ಭವಿಷ್ಯದಲ್ಲಿ ಏನೀದೆ ಎಂಬುದುಯಾರಿಗೂ ತಿಳಿದಿಲ್ಲ. ಅನರ್ಹ ಶಾಸಕರು ಇನ್ನೂ ಪಕ್ಷ ಸೇರ್ಪಡೆ ಆಗಿಲ್ಲ,ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಎಲ್ಲಾ ವಿಚಾರಗಳು ತೀರ್ಮಾನ ವಾಗುತ್ತವೆ. ಬಿಜೆಪಿ ಪಕ್ಷದಲ್ಲಿ ಯಾವುದೇ ಒಡಕು ಇಲ್ಲ, ಹಂಪೆ ಉತ್ಸವ ಎರಡು ದಿನಗಳ ಕಾಲ ನಡೆಯಲಿದ್ದು, ಶೀಘ್ರದಲ್ಲೇ ದಿನಾಂಕ ನಿಗದಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಮಹದಾಯಿ ವಿಚಾರದಲ್ಲಿ ರೈತರು ಬೆಂಗಳೂರಿನಲ್ಲಿ ರಾಜ್ಯಪಾಲರ ಭೇಟಿಗಾಗಿ ಹೋರಾಟ ಮಾಡಿ ದ್ದರು. ಆದರೆ ಅವರ ಭೇಟಿಗೆ ಅವಕಾಶ ಸಿಕ್ಕಿಲ್ಲ. ಅಲ್ಲದೆ ರಾಜ್ಯಪಾಲರಿಗೆ ಈ ವಿಷಯವು ಅವರ ವ್ಯಾಪ್ತಿಗೆ ಬರುವುದಿಲ್ಲ.ಮಹದಾಯಿ ವಿಚಾರ ಮೂರು ರಾಜ್ಯಕ್ಕೆ ಸಂಬಂಧಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಮಾತುಕತೆಗೆ ಸಿದ್ದರಾಗಿದ್ದರು‌. ಗೋವಾ ಸಿಎಂ ಸಹಿತ ಸಿದ್ದರಾಗಿದ್ದು,ರಾಜ್ಯದಿಂದ ನಿಯೋಗ ತೆರಳಲು ಸಿದ್ದವಾಗಿತ್ತು. ಆದರೆ ಗೋವಾದ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಕರ್ನಾಟಕದ‌ ಜೊತೆ ಸಭೆ ಮಾಡ ದಂತೆ ವಿರೋಧ ಮಾಡಿ ಹೋರಾಟ ಮಾಡಿದವು. ಹಾಗಾಗಿ ಈ‌‌ ವಿಷಯ ನೆನಗುದಿಗೆ ಬಿದ್ದಿತು. ಮುಂದೆ ಮತ್ತೆ ಈ ವಿಷಯ ಚರ್ಚೆಗೆ ಬರಲಿಗ ಎಂದು ಅವರು ತಿಳಿಸಿದರು.

ಸಾರಿಗೆ ಸಂಸ್ಥೆಯನ್ನ ಖಾಸಗೀಕರಣ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಯಾವುದೇ ಕಾರಣ ಕ್ಕೂ ಖಾಸಗೀಕರಣ ಮಾಡಲ್ಲ.ಅದನ್ನು ಇನ್ನೂ ಹೆಚ್ಚು ಬಲವರ್ದನೆಗೊಳಿಸುವೆನು.ಸಾರಿಗೆ ಕ್ಷೇತ್ರದಲ್ಲಿ ಇನ್ನೂ ಸುಧಾರಣೆ ತರುವ ಪ್ರಯತ್ನ ಮಾಡುವೆನು ಎಂದರು.

Leave a Comment