ಸಿಡಿಲಿಗೆ ಮೂವರು ಮಕ್ಕಳು  ಬಲಿ

ವಿಜಯಪೂರ:ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರೂ ಬಾಲಕಿಯರು ಹಾಗೂ ಓರ್ವ ಬಾಲಕ ಸಿಡಿಲಿಗೆ ಬಲಿಯಾದ ಘಟನೆ ನಡೆದಿದೆ.

ವಿಜಯಪೂರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲದ ಜಮೀನಿನಲ್ಲಿ ಸಿಡಿಲು ಬಡಿದು ಪ್ರತಿಭಾ ಹನುಮಂತ ಸಂಖ್(8) ಹಾಗೂ ಪೂಜಾ ಈರಣ್ಣಾ ಮೇಡೆದಾರ್(13) ಎಂಬ ಬಾಲಕಿಯರು ಸಾವಿಗೀಡಾಗಿದ್ದಾರೆ. ಮೃತ ಬಾಲಕಿಯರು ಇಂಡಿ ತಾಲೂಕಿನ ಚೋರಗಿ ಗ್ರಾಮದವರಾಗಿದ್ದಾರೆನ್ನಲಾಗಿದೆ. ಈ ಬಾಲಕಿಯರ ಜೊತೆಗಿದ್ದ ಇಬ್ಬರೂ ಬಾಲಕಿಯರು ಸಿಡಿಲಿನ ಹೊಡೆತದಿಂದ ಪಾರಾಗಿದ್ದಾರೆನ್ನಲಾಗಿದೆ.

ಇನ್ನೊಂದು ಘಟನೆಯಲ್ಲಿ ಸಿಂಧಗಿ ಪಟ್ಟಣದ ಆರ್.ಬಿ.ಕಾಲೇಜು ಆವರಣದಲ್ಲಿ ರನ್ನಿಂಗ್ ಮಾಡುತ್ತಿದ್ದ ಬಮ್ಮನಳ್ಳಿ ನಿವಾಸಿ ಸತೀಶ ನಾರಾಯಣಪೂರ(16) ಎಂಬಾತ ಸಿಡಿಲು ಬಡಿದು ಸಾವಿಗೀಡಾಗಿದ್ದಾನೆ.

ಎರಡು ಜಾನುವಾರು ಸಾವು:ಸಿಂಧಗಿ ತಾಲೂಕಿನ ಹಿಕ್ಕಲಗುಂತಿ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಲಕ್ಷ್ಮಣ ಗೋಟಗುಣಕಿ ಎಂಬುವವರಿಗೆ ಸೇರಿದ ಆಕಳು ಹಾಗೂ ಹುಸೇನ ಸಾಬ್ ಜಮಾದಾರ ಎಂಬುವವರಿಗೆ ಸೇರಿದ ಎಮ್ಮೆ ಸಾವಿಗೀಡಾಗಿವೆ.

ಚಡಚಣ, ಸಿಂಧಗಿ ಹಾಗೂ ಆಲಮೇಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Comment