ಸಿಗರೇಟ್ ಪೇಪರ್ ನೀಡದ ಭಾರತ ಮೂಲದ ವ್ಯಕ್ತಿ ಕೊಲೆ

ಲಂಡನ್, ಸೆ. ೯- ಅಪ್ರಾಪ್ತ ಬಾಲಕನಿಗೆ ಸಿಗರೇಟ್ ಪೇಪರ್  ನೀಡಲು ನಿರಾಕರಿಸಿದ ಭಾರತೀಯ ಮೂಲದ ಅಂಗಡಿ ಮಾಲೀಕನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೧೬ ವರ್ಷದ ಬಾಲಕನಿಗೆ ನ್ಯಾಯಾಲಯ ನಾಲ್ಕು ವರ್ಷ ಶಿಕ್ಷೆ ವಿಧಿಸಿದೆ.
ಬಾಲಕ ದಾಳಿ ನಡೆಸಿದ್ದರಿಂದ ೪೯ ವರ್ಷದ ವಿಜಯ್ ಕುಮಾರ್ ಪಟೇಲ್‌ಗೆ ತಲೆಗೆ ಭಾರೀ ಪೆಟ್ಟು ಬಿದ್ದಿತ್ತು. ಈ ಘಟನೆ ಉತ್ತರ ಲಂಡನ್‌ನ  ಮಿಲ್ ಹಿಲ್‌ನಲ್ಲಿರುವ ಮಿನಿ ಮಾರುಕಟ್ಟೆಯಲ್ಲಿ ಈ ಘಟನೆ ಸಂಭವಿಸಿತ್ತು. ಆದರೆ ಕಾನೂನಿನ ಕಾರಣಗಳಿಗಾಗಿ ಬಾಲಕನ ಹೆಸರನ್ನು ಬಹಿರಂಗಪಡಿಸಿಲ್ಲ.
ಬಾಲಕ ತನ್ನ ಸ್ನೇಹಿತನ ಜೊತೆ ಅಂಗಡಿಗೆ ಬಂದು ತಂಬಾಕಿಗೆ ಸಂಬಂಧಪಟ್ಟ ವಸ್ತುವನ್ನು ಕೇಳಿದ್ದಾನೆ. ಆದರೆ ಅಪ್ರಾಪ್ತ ಬಾಲಕರಾಗಿದ್ದ ಕಾರಣ ತಂಬಾಕು ನೀಡಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಬಾಲಕ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದನು.  ಈ ಪ್ರಕರಣ ಕುರಿತು ಲಂಡನ್ ನ ಓಲ್ಡ್ ಬೈಲೀ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಳಿಸಿದ  ನ್ಯಾಯಾಧೀಶ ಸ್ಟೂವರ್ಟ್ ಸ್ಮಿತ್ ಬಾಲಕನಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು.

Leave a Comment