ಸಿಗದ ವೇತನ: ಗಾರ್ಮೆಂಟ್ಸ್ ನೌಕರರ ಪ್ರತಿಭಟನೆ

ತುಮಕೂರು, ಆ. ೧- ಕಳೆದ ಎರಡು ತಿಂಗಳಿಂದ ಸಂಬಳವನ್ನು ನೀಡದ ಗಾರ್ಮೆಂಟ್ಸ್ ಮಾಲೀಕರ ವಿರುದ್ಧ ನೌಕರರು ಕಾರ್ಖಾನೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಸ್ಕಾಟ್ಸ್ ಗಾರ್ಮೆಂಟ್ಸ್ ನೌಕರರು ಕಳೆದ ಎರಡು ತಿಂಗಳಿಂದ ಸಂಬಳವನ್ನು ನೀಡುತ್ತಿಲ್ಲ, ಕಾರ್ಖಾನೆಗೆ ನಿಯಮಿತವಾಗಿ ಭೇಟಿ ನೀಡಿ ಕಾರ್ಮಿಕರ ಯೋಗಕ್ಷೇಮವನ್ನು ವಿಚಾರಿಸಬೇಕಾದ ಕಾರ್ಮಿಕಾಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ನೂರಾರು ಕಾರ್ಮಿಕರಿಗೆ ಕಾರ್ಖಾನೆಯ ವ್ಯವಸ್ಥಾಪಕರು ಇನ್ನೆರಡು ದಿನದಲ್ಲಿ ಸಂಬಳ ನೀಡುವುದಾಗಿ ನೀಡಿದ ಭರವಸೆ ಮೇರೆಗೆ ಪ್ರತಿಭಟನೆಯನ್ನು ವಾಪಸ್ ಪಡೆದರು.

Leave a Comment