ಸಿಓಪಿಡಿ ರೋಗಿಗಳಿಗೆ ಒಂದು ದುಃಸ್ವಪ್ನ

ಪ್ರತಾಪ್  ಸಿಂಗ್ , ೫೦-ವರ್ಷ ವಯಸ್ಸಿನ ಉದ್ಯಮಿ, ಇವರು ಕ್ರಾನಿಕ್  ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಅಔPಆ ) (ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ರೋಗ) ಇಂದ ಬಳಲುತ್ತಿದ್ದಾರೆ ಎಂದು ಕಳೆದ ವರ್ಷ ಗುರುತಿಸಲಾಯಿತು. ೨೦ ವರ್ಷಗಳಿಂದ ನಿರಂತವಾಗಿ ಧೂಮಪಾನ ಮಾಡುತ್ತಿದ್ದ ಶ್ರೀ ಸಿಂಗ್ ಅವರಿಗೆ ಕಟ್ಟುನಿಟ್ಟಾಗಿ ಧೂಮಪಾನ ತ್ಯಜಿಸಲು ಸೂಚಿಸಲಾಯಿತು. ಆದರೆ ಧೂಮಪಾನವನ್ನು ಬಿಟ್ಟುಬಿಡಲು ಎಷ್ಟು ಪ್ರಯತ್ನಿಸಿದರೂ, ಅವರಿಗೆ ತುಂಬಾ ದಿನಗಳ ತನಕ ಧೂಮಪಾನ ಬಿಟ್ಟು ಇರಲು ಆಗಲಿಲ್ಲ. ಧೂಮಪಾನವನ್ನು ಪೂರ್ತಿಯಾಗಿ ತ್ಯಜಿಸಲು ಸಾಧ್ಯವಾಗದೆ, ಶ್ರೀ ಸಿಂಗ್ ಅವರು  ಹೆಚ್ಚಾಗಿ ಸಿಓಪಿಡಿ ಉಲ್ಬಣವಾಗುವುದರಿಂದ ಬಳಲುತ್ತಿದ್ದಾರೆ. ಅವರನ್ನು  ಕಳೆದ ಆರು ತಿಂಗಳಲ್ಲಿ ನಾಲ್ಕು ಬಾರಿ ಆಸ್ಪತ್ರೆಗೆ ದಾಖಲು ಮಾಡಬೇಕಾಯಿತು ಏಕೆಂದರೆ ರೋಗ ಲಕ್ಷಣಗಳು ನಿಯಂತ್ರಣ ಮೀರಿ ಹದಗೆಟ್ಟಿತ್ತು.
“ಉಲ್ಬಣವಾಗುವಿಕೆ ಎಂದರೆ ಸಿಓಪಿಡಿ ಲಕ್ಷಣಗಳು ಹಠಾತ್ತಾಗಿ ಭಗ್ಗನೆ ಹದಗೆಡುವುದು, ಅಂದರೆ ತೀವ್ರ ಉಸಿರಾಟದ ತೊಂದರೆ, ಹೆಚ್ಚಿದ ಕೆಮ್ಮು, ಹೆಚ್ಚಿನ ಸುಸ್ತು (ಆಯಾಸ), ಸಿಂಬಳ ಮಟ್ಟದಲ್ಲಿ ಬದಲಾವಣೆ, ನಿದ್ರಿಸಲು ತೊಂದರೆ ಮತ್ತು ಜ್ವರ (ಕೆಲವು ಸಂದರ್ಭಗಳಲ್ಲಿ) ಸೇರಿದಂತೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ,” ಹೇಳುತ್ತಾರೆ. ಡಾ\ ವಸುನೇತ್ರ ಕಾಸರಗೋಡ್, ಸಿಓಪಿಡಿ ಒಂದು ಸರಿಯಾಗಿ ಗುರುತಿಸಲ್ಪಡದ ರೋಗಗಳ ಗುಂಪಿಗೆ ಸೇರುತ್ತದೆ. ಇದು ಒಂದು ಮಾರಣಾಂತಿಕ ಶ್ವಾಸಕೋಶದ ಕಾಯಿಲೆ, ಇದರಲ್ಲಿ ಶ್ವಾಸಕೋಶಕ್ಕೆ ಗಾಳಿಯ ಹರಿವು ದುರ್ಬಲಗೊಳ್ಳುತ್ತದೆ ಮತ್ತು ರೋಗಿಗೆ  ಉಸಿರಾಡಲು ಕಷ್ಟವಾಗುತ್ತದೆ. ಸಿಓಪಿಡಿ ಯನ್ನು ಇನ್ನೂ ಹೆಚ್ಚು ಅಪಾಯಕಾರಿಯಾಗಿ ಯಾವುದು ಮಾಡುತ್ತದೆ ಎಂದರೆ ಹೆಚ್ಚಾಗುವ ಶ್ವಾಸಕೋಶದ ಕಾಯಿಲೆ ಅಂದರೆ ವಯಸ್ಸು ಹೆಚ್ಚಾದಂತೆ ಕಾಯಿಲೆ ಉಲ್ಬಣಗೊಳ್ಳುತ್ತದೆ, ವಿಶೇಷವಾಗಿ ಇದನ್ನು ಸರಿಯಾಗಿ ನಿರ್ವಹಿಸದೇ ಇದ್ದಲ್ಲಿ ಮತ್ತು ಸರಿಯಾದ ಚಿಕಿತ್ಸೆಯಿಂದ ನಿಯಂತ್ರಿಸದೇ ಇದ್ದಲ್ಲಿ ಇದು ಹೆಚ್ಚು ಅಪಾಯಕಾರಿಯಾಗಿರುತ್ತದೆ.  ಸಿಂಗ್ ಅವರ ವಿಷಯದಲ್ಲಿ, ಅವರು ಧೂಮಪಾನವನ್ನು ಮಾಡುತ್ತಿದ್ದರು ಮತ್ತು ಇದರಿಂದ ಹಠಾತ್ತನೆ ಅವರ ಆರೋಗ್ಯ ಉಲ್ಬಣಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು.
ಲೋಯರ್  ಟ್ರಾಕ್ಟ್ ಸೋಂಕು ೫೦% ನಷ್ಟು  ಸಿಓಪಿಡಿ ಉಲ್ಬಣವಾಗುವುದಕ್ಕೆ ಕಾರಣ ಎಂದು ತಿಳಿದುಬಂದಿದೆ,ಇನ್ನು ಉಳಿದವುಗಳೆಂದರೆ, ಹವಾಮಾನ ಬದಲಾವಣೆ ಮತ್ತು ಒಳಾಂಗಣ ಮತ್ತು ಹೊರಾಂಗಣ ವಾಯು ಮಾಲಿನ್ಯಕಾರಕಗಳಿಗೆ ಒಡ್ಡಲ್ಪಡುವುದು. ಹೆಚ್ಚಿನ ಸಂಧರ್ಭಗಳಲ್ಲಿ ಇದು ಶ್ವಾಸಕೋಶದ ಸೋಂಕಿನಿಂದ  ಉಲ್ಬಣಗೊಳ್ಳುತ್ತದೆ. ಆದಾಗ್ಯೂ, ಒಂದು ನಿರ್ದಿಷ್ಟ ಕಾರಣ ಕೆಲವು ಸಂದರ್ಭಗಳಲ್ಲಿ ಇಲ್ಲದಿರಬಹುದು. ಸಿಓಪಿಡಿ ಉಲ್ಬಣಗೊಳ್ಳುವುದರ ಸಮಯದ ಅಥವಾ ನಂತರದ ಶ್ವಾಸಕೋಶದ ಸೋಂಕಿನ ಪರಿಣಾಮದಿಂದಾಗಿ ಶ್ವಾಸಕೋಶದಲ್ಲಿ ಉರಿ  (ರಗಳೆ ಮತ್ತು ಊದಿಕೊಳ್ಳುವುದು) ಕಾಣಿಸಿಕೊಳ್ಳಬಹುದು. ಈ ತೊಂದರೆಯು ತುಂಬಾ ಗಂಭೀರವಾಗಿರಬಹುದು ಮತ್ತು ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕಾಗಬಹುದು. ಸಾಮಾನ್ಯವಾಗಿ ರೋಗಿಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ.
ಅಧ್ಯಯನದ ಪ್ರಕಾರ, ಸರಾಸರಿಯಾಗಿ ಸಿಓಪಿಡಿ ರೋಗಿಗಳಲ್ಲಿ  ವರ್ಷಕ್ಕೆ ಎರಡು ಸಲ ಅಕ್ಯೂಟ್  ಎಕ್ಸಾಸ್ರ್ಬಷನ್  ಒಫ್ ಕ್ರಾನಿಕ್  ಒಬ್ಸ್ಟ್ರಕ್ಟಿವ್  ಪಲ್ಮನರಿ  (ಡಿಸೀಸ್ ಪುಪ್ಪುಸಕ್ಕೆ ತಡೆಯೊಡ್ಡುವ ರೋಗ) (ಎಇಸಿಓಪಿಡಿ) ತೀವ್ರವಾಗಿ ಉಲ್ಬಣವಾಗಬಹುದು ಮತ್ತು ಶೇಕಡಾ ೧೦ ರಷ್ಟು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಬೇಕಾಗಬಹುದು. ಒಂದೊಂದು ಸಲದ ತೊಂದರೆಯು ಸಾಮಾನ್ಯವಾಗಿ ಏಳು ದಿನಗಳ ತನಕ ಇರುವುದು. ಆದಾಗ್ಯೂ, ರೋಗಿಯು ತನ್ನ ಸಾಮಾನ್ಯ ದಿನಚರಿಗೆ ತೆರಳಲು ಕೆಲವು ತಿಂಗಳುಗಳೇ ಬೇಕಾಗುತ್ತವೆ. ಎಇಸಿಓಪಿಡಿ ಯಲ್ಲಿ ಆಸ್ಪತ್ರೆಗೆ ದಾಖಲು ಮಾಡುವುದು ರೋಗದ ಮುಂದುವರಿದ ಹಂತದಲ್ಲಿ ಆಗಿರುತ್ತದೆ ಮತ್ತು ಆದ್ದರಿಂದ ರೋಗಿಗೆ ಮುಂದಿನ ವರ್ಷಗಳಲ್ಲಿ ಮರಣ ಸಂಭವಿಸುವ ಅಪಾಯವು ಹೆಚ್ಚಿರುತ್ತದೆ. ಅಧ್ಯಯನದ ಪ್ರಕಾರ, ತೀವ್ರವಾದ ಎಇಸಿಓಪಿಡಿ ರೋಗಿಗಳಿಗೆ, ಮರಣ ಪ್ರಮಾಣವು ಆಸ್ಪತ್ರೆಯಲ್ಲಿ ಶೇಕಡಾ ೧೧ ಮತ್ತು ಮರಣ ಪ್ರಮಾಣವು ೧೮೦  ದಿನಗಳ ನಂತರ ಮತ್ತು ಎರಡು ವರ್ಷಗಳ ನಂತರ ಕ್ರಮವಾಗಿ ಶೇಕಡಾ ೩೩  ಮತ್ತು ಶೇಕಡಾ ೪೯  ಆಗಿರುತ್ತದೆ.
“ಅದರಲ್ಲೂ ತಂಬಾಕು ಹೊಗೆಯು ಸಿಓಪಿಡಿ ಉಲ್ಬಣವಾಗಲು ಮುಖ್ಯ ಕಾರಣವಾಗಿದೆ, ವಾಯು ಮಾಲಿನ್ಯಕ್ಕೆ ಕಾರಣವಾದ ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಡೈ ಆಕ್ಸೈಡ್, ಇನ್ನಿತರೇ ಕಣಗಳು ಮತ್ತು ಓಜೋನ್ ಪದರಕ್ಕೆ ಹಾನಿಮಾಡುವಂತಹ ರಾಸಾಯನಿಕ ವಸ್ತುಗಳು ಎಇಸಿಓಪಿಡಿ ಯಿಂದ ಆಸ್ಪತ್ರೆಗೆ ದಾಖಲಾಗಲು ಇರುವ ಮುಖ್ಯ ಕಾರಣಗಳಾಗಿವೆ,” ಹೇಳುತ್ತಾರೆ ಡಾ. ಸುನಿಲ್  ಕುಮಾರ್ , ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಅದು ರೋಗಿ ಮತ್ತು ರೋಗಿಯ ಪೋಷಕರ ದೈಹಿಕ ಮತ್ತು ಮಾನಸಿಕ ಆಘಾತವನ್ನು ನೀಡುವುದರ ಜೊತೆಗೆ ಆರ್ಥಿಕವಾಗಿ ಬಹಳಷ್ಟು ನಷ್ಟವಾಗುತ್ತದೆ. ಸಿಓಪಿಡಿ ಉಲ್ಬಣವಾದಾಗಿನ ಒಂದು ಆಸ್ಪತ್ರೆಯ ಭೇಟಿಯ ವೆಚ್ಚವು, ಒಬ್ಬ ರೋಗಿಗೆ ಸರಾಸರಿ ರು. ೧೫,೩೭೯.೧ ಆಗುತ್ತದೆ.
ಸಿಓಪಿಡಿ ಉಲ್ಬಣವಾಗದಂತೆ ತಡೆಯುದು ಯಾವಾಗಲೂ ಒಳ್ಳೆಯದು ಯಾಕೆಂದರೆ ಅವು ಜೀವನವನ್ನು ಹಾಳುಮಾಡಬಹುದು ಮತ್ತು ಆಗಾಗ್ಗೆ ಆಸ್ಪತ್ರೆಗೆ ದಾಖಲಿಸಬೇಕಾಗಬಹುದು ಮತ್ತು ಶ್ವಾಸಕೋಶದ ಕಾರ್ಯಾಚರಣೆಯ ಪ್ರಮಾಣದಲ್ಲಿ ಇಳಿಕೆಯಾಗಬಹುದು. ಧೂಮಪಾನವು ಅಪಾಯಕಾರಿ. ಅಧ್ಯಯನಗಳು ಧೂಮಪಾನ ತ್ಯಜಿಸುವಿಕೆ ಮತ್ತು  ಸಿಓಪಿಡಿ ಉಲ್ಬಣಗೊಳ್ಳುವುದರ ಅಪಾಯದಲ್ಲಿ ಗಮನಾರ್ಹ ಇಳಿಕೆಯ ಒಂದು ಸ್ಪಷ್ಟ ಸಂಬಂಧವನ್ನು ತೋರಿಸುತ್ತದೆ. ಮಾಜಿ ಧೂಮಪಾನಿಗಳನ್ನು  ಪ್ರಸ್ತುತ ಧೂಮಪಾನಿಗಳಿಗೆ ಹೋಲಿಸಿದರೆ, ಸಿಓಪಿಡಿ  ಉಲ್ಬ ಣವಾಗುವ  ಅಪಾಯದಲ್ಲಿ ಮಾಜಿ ಧೂಮಪಾನಿಗಳು  ಗಮನಾರ್ಹ ಇಳಿಕೆಯನ್ನು   ಅನುಭವಿಸುತ್ತಾರೆ.
“ನೀವು ಯಾವುದೇ ಹಂತದ ಸಿಓಪಿಡಿ ಯಲ್ಲೇ ಇರಿ, ಯಾವಾಗಲೂ ಆರೋಗ್ಯಕವಾಗಿ ಉಳಿಯಲು ಸಾಧ್ಯ. ಮುನ್ನೆಚ್ಚರಿಕೆಯ ಲಕ್ಷಣಗಳ ಮೇಲೆ ಕಣ್ಣಿರಲಿ ಮತ್ತು ಅವುಗಳ ಬಗ್ಗೆ ನಿರ್ಲಕ್ಷ್ಯ ಬೇಡ.  ತೀವ್ರ ಉಲ್ಬಣಗಳನ್ನು ತಪ್ಪಿಸಲು ನಿಮ್ಮ ಆರೋಗ್ಯ – ಆರೈಕೆ ತಂಡದ ಸಲಹೆಗಳನ್ನು ಪಾಲಿಸಿ,” ಎಂದು ಸಲಹೆ ನೀಡುತ್ತಾರೆ ಡಾ. ಸುನಿಲ್ ಕುಮಾರ್,  ಒಂದು ವೇಳೆ ರೋಗಿಯು ಇನ್ಹೇಲರ್ ಗಳನ್ನು ಬಳಸುತ್ತಿದ್ದರೆ, ಅವರು ಸರಿಯಾದ ಇನ್ಹೇಲಿಂಗ್ ವಿಧಾನವನ್ನು ತಿಳಿದುಕೊಂಡಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ರೋಗಿ, ವಿಶೇಷವಾಗಿ, ವಯಸ್ಕರು ಪ್ರತಿ ಸಲವೂ ಕ್ಲಿನಿಕ್ ಗೆ ಹೋದಾಗ ಇನ್ಹೇಲರ್ ಬಳಸುವ ವಿಧಾನದ ಪ್ರದರ್ಶನವನ್ನು ಕೇಳುವಂತೆ ಪ್ರೇರೇಪಿಸಬೇಕು. ನಿರಂತರ ದೂಮಪಾನ ಮಾಡದ ಸಿಓಪಿಡಿ ರೋಗಿಗಳು,  ಸಿಓಪಿಡಿ ಉಲ್ಬಣವಾಗುವ  ಸಂಭವನೀಯ ಕಾರಣಗಳನ್ನು ಕಂಡುಹಿಡಿಯಲು ಪ್ರಯತ್ನಿಸಬೇಕು, ಅವುಗಳು ಜೀವರಾಶಿ ಇಂಧನದ ಹೊಗೆ, ಪರಿಸರದ ತಂಬಾಕು ಹೊಗೆ ಸೇವನೆ ಮತ್ತು ಇತರೇ ಕಾರಣಗಳು ಆಗಿರಬಹುದು. ಮತ್ತು ಅವರು ಆದಷ್ಟೂ ಈ ಕಾರಣಗಳಿಂದ ಎಷ್ಟು ಸಾಧ್ಯವೋ ಅಷ್ಟು ದೂರವಾಗಿರಲು ಪ್ರಯತ್ನಿಸಬೇಕು.

Leave a Comment