ಸಿಒಪಿಡಿಯನ್ನು ಬೇಗ ಪತ್ತೆ ಮಾಡಿ ಶ್ವಾಸಕೋಶ ಆಘಾತ ತಪ್ಪಿಸಿ

 

ಭಾರತ ಸಿಒಪಿಡಿಯ ರಾಜಧಾನಿಯಾಗಿ ಪರಿಣಮಿಸಿದೆ. ಇಲ್ಲಿ ಇಡೀ ವಿಶ್ವದಲ್ಲಿಯೇ ಹೆಚ್ಚು ಸಿಒಪಿಡಿ ಪ್ರಕರಣಗಳು ದಾಖಲಾಗುತ್ತಿವೆ. ಇದಲ್ಲದೇ ಸಿಒಪಿಡಿಯಿಂದ ಸಂಭವಿಸುತ್ತಿರುವ ಸಾವು ಪ್ರಕರಣಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಇದರ ಪ್ರಮಾಣ ಹೇಗಿದೆ ಎಂದರೆ ಏಡ್ಸ್, ಟಿಬಿ, ಮಲೇರಿಯಾ, ಡಯಾಬಿಟಿಸ್‌ನಿಂದ ಸಂಭವಿಸುತ್ತಿರುವ ಒಟ್ಟು ಸಾವಿಗಿಂತ ಹೆಚ್ಚು ಸಿಒಪಿಡಿಯಿಂದ ಸಂಭವಿಸುತ್ತಿವೆ. ಇಷ್ಟೊಂದು ಪ್ರಮಾಣದಲ್ಲಿ ಸಾವು ಸಂಭವಿಸುತ್ತಿದ್ದರೂ ಭಾರತದಲ್ಲಿ ಸಿಒಪಿಡಿಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಮತ್ತು ಅತ್ಯಂತ ಕಡಿಮೆ ಪ್ರಮಾಣದ ಪ್ರಕರಣಗಳು ಮಾಧ್ಯಮಗಳಲ್ಲಿ ಬೆಳಕಿಗೆ ಬರುತ್ತಿವೆ.
ಮತ್ತೊಂದು ಆಘಾತಕಾರಿ ಮತ್ತು ನಿರ್ಲಕ್ಷ್ಯದ ವಿಚಾರವೆಂದರೆ ಈ ಸಿಒಪಿಡಿಯ ಪತ್ತೆ ಪ್ರಕ್ರಿಯೆ ಅತ್ಯಂತ ವಿಳಂಬವಾಗಿ ಆಗುತ್ತಿದೆ. ಇದರ ಪರಿಣಾಮ ಸಿಒಪಿಡಿ ಪ್ರಕರಣಗಳು ಗಂಭೀರ ಸ್ವರೂಪಕ್ಕೆ ತಿರುಗಲು ಕಾರಣವಾಗುತ್ತಿದೆ. ಇದರಿಂದಾಗಿ ಶ್ವಾಸಕೋಶ ಆಘಾತ ಉಂಟಾಗುತ್ತಿದೆ. ಇದು ಸುಮಾರು ೨೦-೨೫ ರ ವಯೋಮಾನದವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಿಒಪಿಡಿಯಿಂದಾಗಿ ಶ್ವಾಸಕೋಶ ಕಾರ್ಯನಿರ್ವಹಣೆ ಕ್ಷೀಣಿಸುತ್ತದೆ. ಇದರಿಂದ ವಯಸ್ಸಾಗುತ್ತಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಶ್ರೀರಂಗ ಪಲ್ಮನರಿ ಕ್ಲಿನಿಕ್‌ನ ಅಸ್ತಮಾ/ಅಲರ್ಜಿ & ರೆಸ್ಪಿರೇಟರಿ ಸ್ಲೀಪ್ ಡಿಸ್‌ಆರ್ಡರ್‌ನ ಪಲ್ಮನರಿ ಮೆಡಿಸಿನ್ಸ್ ತಜ್ಞರಾದ ಡಾ.ಎಚ್.ಬಿ.ಚಂದ್ರಶೇಖರ್ ಅವರ ಪ್ರಕಾರ, “ಅಪಾಯದ ಅಂಶಗಳು ಮತ್ತು ಶ್ವಾಸಕೋಶದ ಇನ್‌ಫೆಕ್ಷನ್‌ಗಳಿಂದಾಗಿ ಪರಿಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಲಿವೆ. ಇದರ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲದಿರುವುದರಿಂದ ಜನರು ಸೂಕ್ತ ಚಿಕಿತ್ಸೆಯನ್ನು ಪಡೆಯುವುದರಿಂದ ದೂರ ಇರುವಂತೆ ಮಾಡುತ್ತಿವೆ. ಜನರಲ್ ಫಿಸಿಶಿಯನ್ ಬಳಿ ಚಿಕಿತ್ಸೆ ಪಡೆದುಕೊಂಡರೂ ಅಪಾಯದ ಪ್ರಮಾಣ ಹೆಚ್ಚಿರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ”. ಆಮ್ಲಜನಕ ಮಟ್ಟದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಇರುವುದು ಸೇರಿದಂತೆ ಹಲವಾರು ಗಂಭೀರ ಸ್ವರೂಪದ ಲಕ್ಷಣಗಳು ಸಿಒಪಿಡಿಯ ಲಕ್ಷಣಗಳಾಗಿರುತ್ತವೆ.

ವ್ಹೀಸಿಂಗ್ ಮತ್ತು ಉಸಿರಾಟದಲ್ಲಿ ತೊಂದರೆ ಆಗುವುದು ಸಹ ಈ ಸಿಒಪಿಡಿಯ ಲಕ್ಷಣಗಳಾಗಿರುತ್ತವೆ. ಇದನ್ನು ಆರಂಭದಲ್ಲಿಯೇ ಅಥವಾ ಬಹುಬೇಗ ಪತ್ತೆ ಮಾಡಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು. ಹೀಗೆ ಮಾಡಿದರೆ ರೋಗವು ಗಂಭೀರ ಸ್ವರೂಪಕ್ಕೆ ಹೋಗುವುದನ್ನು ತಡೆಯಬಹುದಾಗಿದೆ” ಎಂದು ಅವರು ಸಲಹೆ ನೀಡುತ್ತಾರೆ. ಲಂಗ್ ಅಟ್ಯಾಕ್ ಅಂದರೆ ಈ ಶ್ವಾಸಕೋಶ ಆಘಾತವನ್ನು ತಡೆಯಲು ಸಾಧ್ಯವಿಲ್ಲ. ಆದರೆ, ಅದು ಬಾರದಂತೆ ಮುನ್ನೆಚ್ಚರಿಕೆ ವಹಿಸಬಹುದಾಗಿದೆ ಮತ್ತು ಪದೇ ಪದೆ ಆಘಾತ ಸಂಭವಿಸದಂತೆ ನೋಡಿಕೊಳ್ಳಬಹುದಾಗಿದೆ. ಈ ಲಂಗ್ ಅಟ್ಯಾಕ್ ಅನ್ನು ಇನ್‌ಹೇಲರ್ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ರೋಗ ಗಂಭೀರ ಸ್ವರೂಪದ್ದಾಗಿದ್ದರೆ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ. ನಿಯಮಿತವಾಗಿ ಈ ಲಂಗ್ ಅಟ್ಯಾಕ್ ಅನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಇದಕ್ಕಾಗಿ ಸ್ಪಿರೋಮೇಟರಿ ಒಂದು ಅತ್ಯಂತ ಹೆಚ್ಚು ಸಾಮಾನ್ಯವಾದ ಶ್ವಾಸಕೋಶ ಕಾರ್ಯನಿರ್ವಹಣೆಯ ಪರೀಕ್ಷೆಯಾಗಿದೆ. ಇದಕ್ಕೆ ಸಿಒಪಿಡಿಯ ಗೋಲ್ಡ್ ಸ್ಟಾಂಡರ್ಡ್ ಎನ್ನಲಾಗುತ್ತದೆ. ಈ ಸಾಧನವು ಶ್ವಾಸಕೋಶದ ಕಾರ್ಯನಿರ್ವಹಣೆಯನ್ನು ಮಾಪನ ಮಾಡುತ್ತದೆ.

Leave a Comment