ಸಿಎಎ ವಿರೋಧಿ ವಿದ್ಯಾರ್ಥಿ ಸಮಾವೇಶ ನಾಳೆ

 

ಕಲಬುರಗಿ ಜ 18:ಪೌರತ್ವ ತಿದ್ದುಪಡಿ ಕಾಯಿದೆ(ಸಿಎಎ ), ಎನ್‍ಆರ್‍ಸಿ,ಎನ್‍ಪಿಆರ್ ಮತ್ತು ಕೇಂದ್ರ ಸರ್ಕಾರದ ಧೋರಣೆಗಳನ್ನು ವಿರೋಧಿಸಿ ನಾಳೆ ( ಜನವರಿ 19) ನಗರದ ಹಪ್ತ್ ಗುಂಬಜ್ ಹತ್ತಿರದ ನ್ಯಾಶನಲ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಮಾವೇಶ ಆಯೋಜಿಸಲಾಗಿದೆ. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 2 ಗಂಟೆವರೆಗೆ ಸಮಾವೇಶ ನಡೆಯಲಿದೆ ಎಂದು ವಿದ್ಯಾರ್ಥಿ ಹೋರಾಟಗಾರ ಸೈಯದ್ ಅಲೀಮ್ ಇಲಾಹಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿಎಫ್‍ಐ,ಎಂಬಿವಿವಿ,ಎಐಡಿಎಸ್‍ಓ ,ರಝಾ ಅಕಾಡೆಮಿ ಸೇರಿದಂತೆ ವಿವಿಧ ಸಂಘಟನೆಗಳ ಸುಮಾರು 5 ಸಾವಿರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸುವ ನಿರೀಕ್ಷೆ ಇದೆ .ಜಾಮೀಯಾ ಮಿಲಿಯಾ ಇಸ್ಲಾಮಿಯಾ,ಅಲಿಘಡ್ ಮೊದಲಾದ ವಿಶ್ವವಿದ್ಯಾಲಯಗಳ  ವಿದ್ಯಾರ್ಥಿಗಳು, ಅಧ್ಯಾಪಕರು ಸಮಾವೇಶದಲ್ಲಿ ಭಾಗವಹಿಸುವರು.ಕೇಂದ್ರ ಸರ್ಕಾರದ ಧ್ಯೇಯ ಧೋರಣೆಗಳ ವಿರುದ್ಧ ವಸ್ತು ಪ್ರದರ್ಶನ ಮತ್ತು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು

ಸುದ್ದಿಗೋಷ್ಠಿಯಲ್ಲಿ ಡಾ. ಮಹ್ಮದ್ ಸಮಾಮಾ,ಹನಮಂತ ಎಸ್ ಎಚ್,ದಿನೇಶ ದೊಡ್ಮನಿ, ಶ್ರವಣ, ಅನೀಲ ಟೆಂಗಳಿ ಸೇರಿದಂತೆ ಹಲವರಿದ್ದರು..

Leave a Comment