ಸಿಎಎ ವಿರೋಧಿ ಪ್ರತಿಭಟನೆ 24 ರಂದು

 

ಕಲಬುರಗಿ ಜ 21: ಸಿಎಎ,ಎನ್‍ಆರ್‍ಸಿ ಮತ್ತು ಎನ್‍ಪಿಆರ್ ವಾಪಸ್ಸಿಗೆ ಆಗ್ರಹಿಸಿ ಜನವರಿ 24 ರಂದು ನಗರದಲ್ಲಿ ಹಿರಿಯ ದಲಿತ ಮುಖಂಡ ಡಾ ವಿಠಲ್ ದೊಡ್ಮನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಜಿ.ಪಂ ಮಾಜಿ ಸದಸ್ಯ ಗುರುಶಾಂತ ಪಟ್ಟೇದಾರ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಅಂದು ಬೆಳಿಗ್ಗೆ 11 ಗಂಟೆಗೆ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.ಸುಮಾರು 1 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿಭಟನೆಯಲ್ಲಿ           ಮಠಾಧೀಶರು,ಮೌಲ್ವಿಗಳು,ಹೋರಾಟಗಾರರು,ಎಡಪಕ್ಷದವರು ಮತ್ತು ಎಲ್ಲ ಸಮುದಾಯಗಳ ಮಹಿಳೆಯರು ಭಾಗವಹಿಸುವರು.ಸಾರ್ವಜನಿಕರನ್ನು ಉದ್ದೇಶಿಸಿ ಮುಖಂಡರು ಮಾತನಾಡುವರು.   ದೇಶದಲ್ಲಿ ಹಲವಾರು ಸಮಸ್ಯೆಗಳು ಇದ್ದರೂ ಕೇಂದ್ರ ಸರ್ಕಾರ ಸಿಎಎ,ಎನ್‍ಆರ್‍ಸಿ ಮತ್ತು ಎನ್‍ಪಿಆರ್ ಜಾರಿಗೆ ತರುತ್ತಿರುವದು ದುರಂತವಾಗಿದೆ.ಇವು ವಾಪಸ್ಸು ಪಡೆಯುವ ತನಕ ಹೋರಾಟ ಮುಂದುವರೆಯುವದು ಎಂದರು..

Leave a Comment