ಸಿಎಎ ವಿರುದ್ಧ ಪ್ರತಿಭಟನೆ 16ಕ್ಕೆ

 

ಕಲಬುರಗಿ ಜ 14: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ಎನ್‍ಸಿಅರ್,ಎನ್‍ಪಿಆರ್ ವಿರೋಧಿಸಿ ಜ.16 ರಂದು ಬೆಳಿಗ್ಗೆ 11 ಗಂಟೆಗೆ ಮೆಡಿಕಲ್ ಫ್ರಟೆರ್ನಿಟಿ ವತಿಯಿಂದ ಪ್ರತಿಭಟನಾ ರ್ಯಾಲಿ ನಡೆಸುವದಾಗಿ ಡಾ.ಮೊಹಮ್ಮದ್ ಇರ್ಫಾನ್ ಮಹಾಗಾವಿ ಮತ್ತು ಡಾ ಶಕೀಲ್ ಖಾನ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಅಂದು ಸರದಾರ ವಲ್ಲಭಭಾಯಿ ಪಟೇಲವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವದು.ಪೌರತ್ವ ತಿದ್ದುಪಡಿ ಕಾಯಿದೆಯು ಧರ್ಮದ ಹೆಸರಿನಲ್ಲಿ ನಾಗರಿಕತೆ ನೀಡುತ್ತಿರುವದು ನಮ್ಮ ಸಂಸ್ಕøತಿ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದರು.

ಪಾಕಿಸ್ತಾನ,ಅಪಘಾನಿಸ್ತಾನ,ಬಾಂಗ್ಲಾ ದೇಶದ ಧಾರ್ಮಿಕ ಸಂತ್ರಸ್ತ ಹಿಂದೂ,ಸಿಖ್,ಜೈನ,ಕ್ರೈಸ್ತ, ಬೌದ್ಧ ಮೊದಲಾದ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ  ನೀಡುವದಾದರೆ, ಅಲ್ಲಿನ ಬಹುಸಂಖ್ಯಾತ ಮುಸ್ಲಿಮರಿಗೂ ಭಾರತೀಯ ಪೌರತ್ವ ನೀಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ.ಜೀನತ್, ಇಮ್ರಾನ್, ಡಾ.ಸೀಮಾ ದೇಶಪಾಂಡೆ ಉಪಸ್ಥಿತರಿದ್ದರು..

Leave a Comment