ಸಿಎಎ ಬೆಂಬಲಿಸಿ ರ್ಯಾಲಿ ನಡೆಸಿದ ವೈದ್ಯರು

 

ಕಲಬುರಗಿ ಜ 25- ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಬೆಂಬಲಿಸಿ ನ್ಯಾಶನಲ್ ಮೆಡಿಕೊಸ್ ಸಂಘಟನೆ ನೇತೃತ್ವದಲ್ಲಿಂದು ನಗರದ ಸರದಾರ ವಲ್ಲಭಬಾಯಿ ಪಟೇಲ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವೈದ್ಯರು ರ್ಯಾಲಿನಡೆಸಿದರು.

ಸಂಘಟನೆಯ ಉತ್ತರ ಕರ್ನಾಟಕ ವಿಭಾಗದ ಸಂಘಟನಾ ಕಾರ್ಯದರ್ಶಿ ಡಾ ಕುಮಾರ ಅಂಗಡಿ ಅವರು, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮತ್ತು ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರ್ಯಾಲಿಯಲ್ಲಿ ಸಂಸದ ಡಾ.ಉಮೇಶ ಜಾಧವ, ಡಾ.ಸರ್ವೋತ್ತಮರಾವ್,ಡಾ ಸುರೇಶ ಪಾಟೀಲ, ಡಾ ರಾಹುಲ ಮಂದಕನಳ್ಳಿ, ಡಾ ಮಿಲಿಂದ ಬಿಲಗುಂದಿ,ಡಾ ಎ.ಎಸ್ ಪಾಟೀಲ, ಡಾ ಮಂಜುನಾಥ ದೋಶೆಟ್ಟಿ, ಡಾ ಅರವಿಂದ ಮೊದ್ಲಿ, ಡಾ ಪ್ರತಿಮಾ ಕಾಮರಡ್ಡಿ, ಡಾ. ಮಹಾದೇವಪ್ಪ ರಾಂಪುರೆ, ಡಾ ಬಿ.ಸಿ ಪಾಟೀಲ, ಡಾ ಅಲ್ಲಮಪ್ರಭು ಸೇರಿದಂತೆ ಆರೋಗ್ಯ ಭಾರತಿ, ಮೆಡಿವಿಷನ್, ಆಯುಷ್ ಡಾಕ್ಟರ್ ಫೆಡರೇಷನ್, ಫಾರ್ಮಸಿ ವಿಭಾಗ, ನರ್ಸಿಂಗ್ ವಿಭಾಗದವರು ಮತ್ತು ವೈದ್ಯ ಪ್ರತಿನಿಧಿಗಳು ಭಾಗವಹಿಸಿದರು..

 

Leave a Comment