ಸಿಎಎ ಜಾರಿ , ಸಿಎಂಗೆ ಸಮಾಜವಾದಿ  ಮುಖಂಡ  ಅಬು ಅಜ್ಮಿ  ಎಚ್ಚರಿಕೆ

ಮುಂಬೈ, ಫೆ 22 – ಮಹಾರಾಷ್ಟ್ರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ, ಎನ್ ಆರ್ ಸಿಯನ್ನು ಯಾವ ಕಾರಣಕ್ಕೂ ಅನುಷ್ಠಾನ ಗೊಳಿಸಬಾರದು ಎಂದು ಸಮಾಜವಾದಿ  ಮುಖಂಡ ಅಬು ಅಜ್ಮಿ ಒತ್ತಾಯಿಸಿದ್ದಾರೆ.

ಕೇರಳ ಮತ್ತು ಪಶ್ಚಿಮಬಂಗಾಳ ಸರ್ಕಾರದಂತೆ ಸಿಎಎ ವಿರುದ್ಧ ನಿರ್ಣಯ ಕೈಗೊಳ್ಳುಬೇಕು ಎಂದೂ  ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ನೇರ,  ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಕೇರಳ ಮತ್ತು ಪಶ್ಚಿಮಬಂಗಾಳ ವಿಧಾನಸಭೆ ಸಿಎಎ ಜಾರಿಗೊಳಿಸುವುದಿಲ್ಲ ಎಂದು ಈಗಾಗಲೇ ನಿರ್ಣಯ ಕೈಗೊಂಡಿದ್ದು, ಮಹಾರಾಷ್ಟ್ರ ಸರ್ಕಾರ ಕೂಡಾ ಅದೇ ರೀತಿ ತೀರ್ಮಾನ ತೆಗೆದುಕೊಳ್ಳಬೇಕು  ಮತ್ತು ಅದಕ್ಕೆ ಬದ್ಧವಾಗಿರಬೇಕು  ಎಂದೂ ಅಜ್ಮಿ ಆಗ್ರಹಿಸಿದ್ದಾರೆ.

ಈ ಕಾನೂನಿನಿಂದ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲ  ಇತತರಿಗೂ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಮಾತು ಕೇಳದಿದ್ದರೆ  ಬೇರೆಯ ರೀತಿಯಲ್ಲಿ ಹೇಳಬೇಕಾಗುತ್ತದೆ. ಆನಂತರ ನಾವು ಯಾವುದಕ್ಕೂ ಹಿಂಜರಿಯುವುದಿಲ್ಲ ಎಂದೂ  ಅಜ್ಮಿ ಹೇಳಿರುವುದಾಗಿ ವರದಿಯಾಗಿದೆ.

Leave a Comment