ಸಿಎಎ, ಎನ್ಆರ್‌ಸಿ ವಿರೋಧಿಸಿ ನಾಳೆ ಭಾರತ್ ಬಂದ್‌

ರಾಯಚೂರು.ಜ.28- ದೇಶದಲ್ಲಿ ಸಿಎಎ, ಎನ್ಆರ್‌ಸಿ ಕಾನೂನು ಜಾರಿಗೆ ತಂದು ಅಸಮಾನತೆ ವಾತಾವರಣ ನಿರ್ಮಾಣವಾಗಿದ್ದು ಖಂಡಿಸಿ ನಾಳೆ ಭಾರತ್ ಬಂದ್ ಕರೆ ನೀಡಲಾಗಿದೆಂದು ಬಹುಜನ ಕ್ರಾಂತಿ ಮೋರ್ಚ್ ಜಿಲ್ಲಾ ಸಂಯೋಜಕ ಅದಿಲ್‌ಶೇಖ ಮೊಹಮ್ಮದ್ ಅಜೀಮ್ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ಸಿಎಎ, ಎನ್ಆರ್‌ಸಿ ಕಾಯ್ದೆಗಳ ವಿರುದ್ಧ ದೇಶದ್ಯಾಂತ ಸಾಕಷ್ಟು ಹೋರಾಟ ನಡೆದರೂ ಕೇಂದ್ರ ಸರ್ಕಾರ ಕಾಯ್ದೆ ಕೈಬಿಡುವ ಬಗ್ಗೆ ಮಾತನಾಡುತ್ತಿಲ್ಲ. ಈ ದೇಶದ ಮೂಲ ನಿವಾಸಿ ಬಹುಜನರಾದ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ತೊಂದರೆಯಾಗುತ್ತದೆ. ಸಂವಿಧಾನಿಕ ಹಕ್ಕು ಮತ್ತು ಅಧಿಕಾರ ಪಡೆಯುವುದಕ್ಕಾಗಿ ಎಲ್ಲಾ ಮೂಲ ನಿವಾಸಿ ಬಹುಜನರು ಸಾಮೂಹಿಕವಾಗಿ ಸಹಮತ ವೇದಿಕೆ ಮಾಡಿಕೊಂಡು ರಾಷ್ಟ್ರಮಟ್ಟದಲ್ಲಿ ಒಂದಾಗುವುದು ಅನಿರ್ವಾಯವಾಗಿದೆಂದರು.
ಇವಿಎಂ ನಿಂದ ನಿಷ್ಪಕ್ಷಪಾತವಾದ ಚುನಾವಣೆಯಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ 8ನೇ ಅಕ್ಟೋಬರ್ 2013 ರ ಆದೇಶದಲ್ಲಿ ಹೇಳಿದೆ. ಇವಿಎಂ ಮಶೀನ್ ಜೊತೆಗೆ ವಿವಿಪ್ಯಾಟ್ ಯಂತ್ರ ಅಳವಡಿಸಬೇಕೆಂದು ಸುಪ್ರೀಂಕೋರ್ಟ್ ಆದೇಶವಿದ್ದರೂ ಚುನಾವಣಾ ಆಯೋಗ 2014 ರ ಲೋಕಸಭಾ ಚುನಾವಣೆ ಅಳವಡಿಸಿಲ್ಲ. ಮತ ಯಂತ್ರವನ್ನು ಇಂದು ಇಡೀ ಜಗತ್ತಿನಲ್ಲಿ ನಿರಾಕರಿಸುತ್ತಿದೆ. ಆದರೆ ದೇಶದಲ್ಲಿ ಮಾತ್ರ ಒತ್ತಾಯ ಪೂರ್ವಕವಾಗಿ ಪ್ರಜೆಗಳ ಮೇಲೆ ಹೇರಲಾಗುತ್ತದೆಂದು ದೂರಿದರು.
2019 ರ ಲೋಕಸಭಾ ಚುನಾವಣೆಯಲ್ಲಿ 370 ಕ್ಕೂ ಕ್ಷೇತ್ರಗಳಲ್ಲಿ ಮತಗಳು ತಾಳೆಯಾಗುತ್ತಿಲ್ಲವೆಂದು ಎಡಿಆರ್ ಎಂಬ ಸಂಸ್ಥೆಯು ಚುನಾವಣಾ ಆಯೋಗದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿತು. ಮತದ ಬೆಲೆ ಶೂನ್ಯ ಮಾಡಿದೆಂದು ನೋವಿನ ಸಂಗತಿಯಾಗಿದೆ. ಇವಿಎಂ ವಿರುದ್ಧ ಕಾಂಗ್ರೆಸ್ ಪಕ್ಷ ಜನಾಂದೋಲನ ಪ್ರಾರಂಭ ಮಾಡುತ್ತಿವೆಂದು ಹೇಳಿದರು. ಇದುವರೆಗೂ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ.
ದೇಶದ ನಿವಾಸಿಗಳು ಒಗ್ಗೂಡಿ ಇವಿಎಂ ವಿರುದ್ಧ ಧ್ವನಿ ಎತ್ತುವುದು ಅವಶ್ಯಕವಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಾಳೆ ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಖಾಜಾ ಮೈನುದ್ದೀನ್, ಅಬ್ದುಲ್ ಲತೀಫ್, ಮತೀನ್ ಅನ್ಸಾರಿ ಸೇರಿದಂತೆ ಇನ್ನಿತರರು ಉಪಸ್ಥಿರಿದ್ದರು.

Leave a Comment