ಸಿಎಂ ರೈತರ ಕಣ್ಣೀರು ಒರೆಸುವ ಖಾತೆ ಸಿಕ್ಕದ್ದಕ್ಕೆ  ಸಂತಸವಿದೆ

ದಾವಣಗೆರೆ .ಫೆ.14. 40 ವರ್ಷಗಳ ಕನಸು ಈಡೇರಿದೆ. 40 ವರ್ಷಗಳ ಬಳಿಕ ಮಂತ್ರಿ ಭಾಗ್ಯ ಸಿಕ್ಕಿದೆ. ಕೃಷಿ ಸಚಿವನಾಗಿದ್ದು ತುಂಬಾ ಸಂತಸ ತಂದಿದೆ. ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ ಎಂಬುದಾಗಿ ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.

ದಾವಣಗೆರೆಯ ಹಿರೇಕೆರೂರಿನಲ್ಲಿ ಸಚಿವರಾದ ನಂತ್ರ ಮೊದಲ ಬಾರಿಗೆ ಭೇಟಿ ನೀಡಿದ ಕೃಷಿ ಸಚಿವ ಬಿಸಿ ಪಾಟೀಲ್, ಮೊದಲು ಅರಣ್ಯ ಖಾತೆಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೊಟ್ಟಿದ್ದರು. ಆದ್ರೇ ನಾನು ಸಿಎಂ ಬಳಿ ಮನವಿ ಮಾಡಿಕೊಂಡೆ. ಪ್ರಾಣಿಗಳ ಬಳಿ ಕಳಿಸಬೇಡಿ, ಜನರ ಬಳಿ ಕಳಿಸಿ ಅಂದೆ. ಕೃಷಿ ಇಲಾಖೆ ಖಾಲಿ ಇದೆ ಮಾಡ್ತೀಯಾ ಅಂದ್ರ, ಸಂತೋಷದಿಂದ ಒಪ್ಪಿಕೊಂಡೆ ಎಂಬುದಾಗಿ ತಿಳಿಸಿದ್ರು.

40 ವರ್ಷಗಳ ಬಳಿಕ ಮಂತ್ರಿ ಭಾಗ್ಯ ಸಿಕ್ಕಿದೆ. ಕೃಷಿ ಸಚಿವನಾಗಿದ್ದು ತುಂಬಾ ಸಂತಸ ತಂದಿದೆ. ರೈತರ ಕಣ್ಣೀರು ಒರೆಸುವ ಕೆಲಸ ಮಾಡ್ತೇನೆ. ಈ ಮೂಲಕ ಕೃಷಿಕನಾಗಿ ದುಡಿಯುವಂತ ಕೆಲಸದ ರೀತಿಯಲ್ಲಿಯೇ ಕೆಲಸ ಮಾಡುವುದಾಗಿ ಕೃಷಿ ಸಚಿವ ಬಿ ಸಿ ಪಾಟೀಲ್ ಸ್ಪಷ್ಟ ಪಡಿಸಿದ್ರು.

 

Leave a Comment